* ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ
* ಕ್ಯಾಂಟರ್‌ನಲ್ಲಿದ್ದ 18 ಎಮ್ಮೆಗಳಲ್ಲಿ 8 ಎಮ್ಮೆಗಳು ಸಾವು
* ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು
ಬಸವನಬಾಗೇವಾಡಿ(ಸೆ.22): ಎಮ್ಮೆಗಳು ತುಂಬಿದ ವಾಹನ ಹಾಗೂ ಸೇಬು ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟು, ಕ್ಯಾಂಟರ್‌ನಲ್ಲಿದ್ದ 18 ಎಮ್ಮೆಗಳಲ್ಲಿ 8 ಎಮ್ಮೆಗಳು ಮೃತಪಟ್ಟ ಘಟನೆ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದಿದೆ.
ಮೃತರ ಹೆಸರು, ವಿಳಾಸ ಇನ್ನು ಪತ್ತೆಯಾಗಿಲ್ಲ. ಚಂಡಿಗಡದಿಂದ ಕೇರಳಕ್ಕೆ(Kerala) ಸೇಬು ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಹುಬ್ಬಳ್ಳಿಯಿಂದ ಎಮ್ಮೆಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನಗಳ ಮಧ್ಯೆ ಅಪಘಾತ(Accident) ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ರಾಯಚೂರು: ಪೊಲೀಸ್ ಚೆಕ್‌ಪೋಸ್ಟ್‌ಗೆ ಲಾರಿ ಡಿಕ್ಕಿ, ಎರಡು ತುಂಡಾದ ಚಾಲಕನ ದೇಹ
ಈ ಅಪಘಾತದಿಂದ ಲಾರಿಯಲ್ಲಿ ಸಿಲುಕಿದ ವ್ಯಕ್ತಿಯನ್ನು ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು. ಗಂಭೀರಗೊಂಡಿದ್ದ ಉಳಿದ ಎಮ್ಮೆಗಳನ್ನು ವಿಜಯಪುರಕ್ಕೆ ಸಾಗಿಸಲಾಯಿತು. ಕೊಲ್ಹಾರ ಪೊಲೀಸ್(Police) ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಡಾ.ರಾಮಸಿದ್ದಿ, ಡಿವೈಎಸ್ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ ಜುಟ್ಟಲ್, ಕೊಲ್ಹಾರ ಎಎಸ್‌ಐ ಆರ್.ಎನ್.ಬಿರಾದಾರ ಭೇಟಿ ನೀಡಿ ಪರಿಶೀಲಿಸಿದರು.