ರಾಯಚೂರು: ಬೈಕ್‌ಗೆ ಲಾರಿ ಡಿಕ್ಕಿ, ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

Published : Apr 24, 2020, 01:02 PM ISTUpdated : Apr 24, 2020, 01:08 PM IST
ರಾಯಚೂರು: ಬೈಕ್‌ಗೆ ಲಾರಿ ಡಿಕ್ಕಿ, ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ಸಾರಾಂಶ

ಬೈಕ್‌ಗೆ ಲಾರಿ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು| ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ ನಡೆದ ದುರ್ಘಟನೆ| ಈ ಸಂಬಂಧ ತುರುವಿಹಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು|

ರಾಯಚೂರು(ಏ.24): ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ ಇಂದು(ಶುಕ್ರವಾರ) ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನ ಸಿಂಧನೂರು ತಾಲೂಕಿನ ಮಾಟೂರು ಗ್ರಾಮದ ಪರಸಪ್ಪ(35), ಪತ್ನಿ ಕನಕಮ್ಮ(28), ಪುತ್ರಿ ನಾಗಮ್ಮ(2) ಎಂದು ಗುರುತಿಸಲಾಗಿದೆ. 

ಹೊಸದುರ್ಗದ ಬಳಿ ಕಾರು- ಬೈಕ್‌ ಡಿಕ್ಕಿ : ಇಬ್ಬರ ದುರ್ಮರಣ

ಪರಸಪ್ಪನ ಪತ್ನಿ ಕನಕಮ್ಮ ಗರ್ಭಿಣಿಯಾಗಿದ್ದು, ತವರು ಮನೆ ಚಿಕ್ಕಬೇರ್ಗಿ ಗ್ರಾಮಕ್ಕೆ ಬಂದಿದ್ದಳು. ಕನಕಮ್ಮಳ ಆರೋಗ್ಯ ತಪಾಸಣೆಗಾಗಿ ಬೈಕ್‌ನಲ್ಲಿ ದಂಪತಿ ಹಾಗೂ ಮಗಳು ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ತುರುವಿಹಾಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
 

PREV
click me!

Recommended Stories

ಕೊಲ್ಲಾಪುರದಿಂದ ಧಾರವಾಡಕ್ಕೆ ಬಂದ ರೈಲಿನ ಬೋಗಿಯಲ್ಲಿ ಅರೆಬೆತ್ತಲೆ ಮಹಿಳೆಯ ಶವ ಪತ್ತೆ! ಬೆಚ್ಚಿಬಿದ್ದ ರೈಲ್ವೆ ಸಿಬ್ಬಂದಿ!
Mysuru: ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ವರದಿ, 10 ದಿನಗಳ ಒಳಗೆ ರೈತರ ಖಾತೆಗೆ ಹಣ: ಡಿಸಿಎಂ ಪರಮೇಶ್ವರ್ ವಿಶ್ವಾಸ