ವೀಳ್ಯ ನೀಡಿ ಕರೆದೊಯ್ಯಲು 50 ಕಾರುಗಳಲ್ಲಿ ಬಂದ್ರು..!

By Kannadaprabha NewsFirst Published Apr 24, 2020, 12:39 PM IST
Highlights

ವೇದಾವತಿ ನದಿಯನ್ನು ವೀಳ್ಯ ನೀಡಿ ಕರೆದೊಯ್ಯಲು ಚಳ್ಳಕೆರೆ ಮಂದಿ ಸುಮಾರು 50 ವಾಹನಗಳಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 12.45ರ ಸುಮಾರಿಗೆ ವಿವಿ ಸಾಗರ ಜಲಾಶಯದ ತಟದಲ್ಲಿ ಸಾಲುಗಟ್ಟಿದ್ದ ವಾಹನಗಳ ಪೊಲೀಸರು ತಡೆದಿದ್ದಾರೆ.

ಚಿತ್ರದುರ್ಗ(ಏ.24): ವೇದಾವತಿ ನದಿಯನ್ನು ವೀಳ್ಯ ನೀಡಿ ಕರೆದೊಯ್ಯಲು ಚಳ್ಳಕೆರೆ ಮಂದಿ ಸುಮಾರು 50 ವಾಹನಗಳಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 12.45ರ ಸುಮಾರಿಗೆ ವಿವಿ ಸಾಗರ ಜಲಾಶಯದ ತಟದಲ್ಲಿ ಸಾಲುಗಟ್ಟಿದ್ದ ವಾಹನಗಳ ಪೊಲೀಸರು ತಡೆದರು. ಕೆಲವು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದರು.

ನೀರು ಹಾಯಿಸುವ ಕಾರ್ಯಕ್ರಮ ಹಿರಿಯೂರು ತಾಲೂಕಿನ ರೈತ-ರಾಜಕಾರಣಿಗಳಿಂತ ಚಳ್ಳಕೆರೆಯ ರೈತಾಪಿ ವರ್ಗ, ರಾಜಕೀಯ ಮುಖಂಡರ ಸಂತಸಕ್ಕೆ ಕಾರಣವಾಗಿತ್ತು. ನೀರು ಬಿಡುವ ವಿಷಯದಲ್ಲಿ ರೈತರು ಹಾಗೂ ರಾಜಕಾರಣಿಗಳ ನಡುವೆ ಕೆಲವು ತಿಂಗಳಿನಿಂದ ಹಗ್ಗಜಗ್ಗಾಟ ಏರ್ಪಟ್ಟು ಅಂತಿಮವಾಗಿ ಶಾಸಕ ಟಿ.ರಘುಮೂರ್ತಿ, ಸಂಸದ ನಾರಾಯಣಸ್ವಾಮಿ ಪಟ್ಟು ಹಿಡಿದಿದ್ದರಿಂದ ನೀರು ಬಿಡುವ ಆದೇಶ ಹೊರಬಿದ್ದಿತ್ತು.

ಶಾಸಕಿ ಪೂರ್ಣಿಮಾ ಗೈರು:

ವಿವಿ ಸಾಗರ ಜಲಾಶಯದಿಂದ ವೇದಾವತಿಗೆ ನೀರು ಹಾಯಿಸುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಗೈರು ಎದ್ದು ಕಾಣಿಸುತ್ತಿತ್ತು. ಶಾಸಕಿಗೆ ಆರೋಗ್ಯ ಸರಿಯಿಲ್ಲದ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆಂಬ ಮಾತುಗಳು ಕೇಳಿ ಬಂದವು.

ಲಾಕ್‌ಡೌನ್‌: ಕಾರ್ಮಿಕ ಮಹಿಳೆಯ ಅಂತ್ಯಸಂಸ್ಕಾರ ನಡೆಸಿದ ಯುವಕರು

ಹಿರಿಯೂರು ತಾಲೂಕಿನಲ್ಲಿ ನಡೆಯುತ್ತಿದ್ದ ಬಹುತೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್‌ ಸಹ ಗೈರಾಗಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.

click me!