ಬೊಗಳಿದಕ್ಕೆ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿ ವಿಕೃತಿ: ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿರುವ ಶ್ವಾನ..!

By Girish Goudar  |  First Published Oct 4, 2022, 11:00 PM IST

ಬೆಂಗಳೂರು ಪೂರ್ವ ಕೃಷ್ಣರಾಜಪುರದ ಭಟ್ಟರಹಳ್ಳಿಯಲ್ಲಿ ನಡೆದ ಘಟನೆ  


ವರದಿ : ಟಿ.ಮಂಜುನಾಥ, ಹೆಬ್ಬಗೋಡಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬೆಂಗಳೂರು

ಬೆಂಗಳೂರು(ಅ.04):  ವ್ಯಕ್ತಯೋರ್ವ ಅಮಾನುಷವಾಗಿ ನಡೆದುಕೊಂಡು ನಾಯಿಗೆ‌ ಮನಸೋ ಇಚ್ಚೇ ಥಳಿಸಿ ವಿಕೃತಿ ಮರೆದ ಘಟನೆ ಬೆಂಗಳೂರು ಪೂರ್ವ ಕೃಷ್ಣರಾಜಪುರದ ಭಟ್ಟರಹಳ್ಳಿಯಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಕೃಷ್ಣರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥಲೇಔಟ್ ಫಸ್ಟ್ ಮೇನ್ ಮೂರನೇ ಕ್ರಾಸ್ ವಾಸಿ ಗದ್ದಿಗೆಪ್ಪ ನಿಗೆ ಸೇರಿದ ನಾಯಿ ತೀವ್ರ ದಾಳಿಗೆ ಒಳಗಾದ ಮೂಕಪ್ರಾಣಿ. ಪಕ್ಕದ ಮನೆ ನಾಗರಾಜ್ ರವರ ಮೂರು ಜನ ಮಕ್ಕಳಾದ ರಾಹುಲ್, ರಚಿತ್ ಮತ್ತು ರಂಜಿತ್ ನಾಯಿಗೆ ಮನ ಬಂದಂತೆ ಥಳಿಸಿರುವ ಕಿಡಿಗೇಡಿಗಳಾಗಿದ್ದಾರೆ. 

Tap to resize

Latest Videos

ಗದ್ದಿಗೆಪ್ಪರವರು ವಾಸವಿದ್ದ ಮನೆಯ ಪಕ್ಕದ ರಸ್ತೆಯವರಾದ ನಾಗರಾಜ್ ರವರ ಮೂರು ಜನ ಮಕ್ಕಳು ದೊಣ್ಣೆಗಳಿಂದ ನಾಯಿ ಮೇಲೆ ಎರಗಿ ಮನಸೋ ಇಚ್ಚೆ ಥಳಿಸಿದ್ದಾರೆ. ನಾಗರಾಜ್ ರವರ ನಾಯಿಯನ್ನು ಗದ್ದಿಗೆಪ್ಪರವರ ನಾಯಿ ಬೊಗಳಿ‌-ಕಚ್ಚಿದೆ ಎಂಬ ಆರೋಪದ ಹಿನ್ನಲೆಯಲ್ಲಿ ‌ನಿನ್ನೆ(ಸೋಮವಾರ) ರಾತ್ರಿ 10ಗಂಟೆ ಸುಮಾರಿಗೆ ತೀವ್ರ ದಾಳಿ‌ ನಡೆದಿದೆ. 

ಉತ್ತರಕನ್ನಡ: ಬೀದಿ ನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ

ದಾಳಿಯ ತೀವ್ರತೆಗೆ ಗದ್ದಿಗೆಪ್ಪ ರವರ ನಾಯಿಯ ತಲೆಗೆ ತೀವ್ರ ಗಾಯಗಳಾಗಿವೆ. ಕಣ್ಣುಗುಡ್ಡೆಯಿಂದ ಮಾಂಸ ಹೊರಬಂದಿದ್ದು, ನಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಬದುಕುವ ಸಾಧ್ಯತೆ ತೀರ ಕಡಿಮೆ ಎನ್ನಲಾಗ್ತಿದೆ. ದುರಂತ ಘಟನೆ‌ ಹಿನ್ನಲೆ ಮೊದಲ ಹಲ್ಲೆಗೊಳಗಾದ ಗದಿಗೆಪ್ಪ ಈಗ ರಾಹುಲ್, ರಚಿತ್ ಮತ್ತು ರಂಜಿತ್ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
 

click me!