ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನ ರಕ್ಷಿಸಲು ಹೋಗಿ ಅಪ್ಪ, ಅಮ್ಮ, ಪುತ್ರಿ ಮೂವರು ಮೃತಪಟ್ಟಿದ್ದಾರೆ. ಅಜ್ಜಿಯ ತಿಥಿ ಕಾರ್ಯಕ್ಕಾಗಿ ಕಪೀಲ್ ಕುಟುಂಬ ಸರಗೂರು ಗ್ರಾಮಕ್ಕೆ ಬಂದಿದ್ದರು. ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಮೈಸೂರು(ಅ.01): ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನ ಮಹಮ್ಮದ್ ಕಪೀಲ್ (42), ಶಾವರ ಭಾನು (35), ಶಾಹೀರಾ ಭಾನು(20) ಎಂದು ಗುರುತಿಸಲಾಗಿದೆ.
ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನ ರಕ್ಷಿಸಲು ಹೋಗಿ ಅಪ್ಪ, ಅಮ್ಮ, ಪುತ್ರಿ ಮೂವರು ಮೃತಪಟ್ಟಿದ್ದಾರೆ. ಅಜ್ಜಿಯ ತಿಥಿ ಕಾರ್ಯಕ್ಕಾಗಿ ಕಪೀಲ್ ಕುಟುಂಬ ಸರಗೂರು ಗ್ರಾಮಕ್ಕೆ ಬಂದಿದ್ದರು. ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಜಮಖಂಡಿ: 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವು
ಶಾಹೀರಾ ಭಾನು ಮೊದಲಿಗೆ ಕಾಲು ಜಾರಿ ಬಿದಿದ್ದು, ರಕ್ಷಣೆಗೆ ಹೋದ ಅಪ್ಪ, ಅಮ್ಮ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಮೂವರ ಮೃತ ದೇಹ ಹೊರಕ್ಕ ತೆಗೆದಿದ್ದಾರೆ. ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.