ಲಿಂಗಸುಗೂರು: ಜನರ ಸಂಚಾರಕ್ಕೆ ಜಲಕಂಟಕ, ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು..!

By Kannadaprabha NewsFirst Published Oct 1, 2023, 6:47 AM IST
Highlights

ಗ್ರಾಮ ಪಕ್ಕದಲ್ಲಿಯೇ ಸೇತುವೆ ಇದೆ. ಮಳೆ ಇಲ್ಲದೇ ಇದ್ದರೂ ನಾರಾಯಣಪುರ ಬಲದಂಡೆ ನಾಲೆ ನೀರು ಹರಿಯುತ್ತದೆ. ಸೇತುವೆ ಕೆಳಮಟ್ಟದಲ್ಲಿದ್ದು ಸೇತುವೆ ಮೇಲೆ ನೀರು ಹರಿಯುತ್ತದೆ. ಮಳೆ ಮತ್ತು ನಾಲೆಯಲ್ಲಿ ನೀರು ಬಂದಾಗ ಸೇತುವೆ ಮೇಲೆ  ಸಂಚಾರ ಬಂದ್ ಆಗುತ್ತದೆ. ಇದರಿಂದ ವಾಹನ ಸಂಚಾರವು ಸ್ಥಗಿತಗೊಂಡು ಗ್ರಾಮದಿಂದ ಬೇರೆಡೆ ತೆರಳಲು ಸಾಧ್ಯವಾಗುವುದಿಲ್ಲ. 

ಗುರುರಾಜ ಗೌಡೂರು 

ಲಿಂಗಸುಗೂರು(ಅ.01):  ತಾಲೂಕಿನ ಚಿತ್ತಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಾಗೀರನಂದಹಾಳದ ಹಳ್ಳಕ್ಕೆ ನೀರು ಬಂದು ಸಂಚಾರ ಸ್ಥಗಿತಗೊಂಡು ಮಕ್ಕಳು ಪರೀಕ್ಷೆಯಿಂದ ವಂಚಿತರಾದ ಘಟನೆ ಜರುಗಿದೆ.

ಜಾಗೀರನಂದಿಹಾಳ ಗ್ರಾಮದಲ್ಲಿ 1200 ಜನ ಸಂಖ್ಯೆ ಇದ್ದು ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಗ್ರಾಮದಲ್ಲಿ 1 ರಿಂದ 5ನೇ ತರಗತಿವರೆಗೆ ಶಾಲೆ ಇದೆ. 6ನೇ ತರಗತಿಯಿಂದ ಕಾಲೇಜು ಶಿಕ್ಷಣ ಪಡೆಯಲು ಮಕ್ಕಳು ಆನಾಹೊಸೂರು, ರೋಡಲಬಂಡಾ (ಯುಕೆಪಿ), ಲಿಂಗಸುಗೂರು ಸೇರಿ ಗ್ರಾಮದಿಂದ 200ಕ್ಕೂ ಅಧಿಕ ಮಕ್ಕಳು ಬೇರೆ ಬೇರೆ ಕಡೆ ತೆರಳುತ್ತಾರೆ. ಗ್ರಾಮ ಪಕ್ಕದಲ್ಲಿಯೇ ಸೇತುವೆ ಇದೆ. ಮಳೆ ಇಲ್ಲದೇ ಇದ್ದರೂ ನಾರಾಯಣಪುರ ಬಲದಂಡೆ ನಾಲೆ ನೀರು ಹರಿಯುತ್ತದೆ. ಸೇತುವೆ ಕೆಳಮಟ್ಟದಲ್ಲಿದ್ದು ಸೇತುವೆ ಮೇಲೆ ನೀರು ಹರಿಯುತ್ತದೆ. ಮಳೆ ಮತ್ತು ನಾಲೆಯಲ್ಲಿ ನೀರು ಬಂದಾಗ ಸೇತುವೆ ಮೇಲೆ  ಸಂಚಾರ ಬಂದ್ ಆಗುತ್ತದೆ. ಇದರಿಂದ ವಾಹನ ಸಂಚಾರವು ಸ್ಥಗಿತಗೊಂಡು ಗ್ರಾಮದಿಂದ ಬೇರೆಡೆ ತೆರಳಲು ಸಾಧ್ಯವಾಗುವುದಿಲ್ಲ.

ಹಿಂದೂ ಧರ್ಮ ಗಟ್ಟಿಯಾದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುತ್ತೆ: ಸುಬುಧೇಂದ್ರ ತೀರ್ಥರು

ಪರೀಕ್ಷೆಗೆ ಗೈರು : 

ಸೇತುವೆ ಮೇಲೆ ನೀರು ಬಂದು ಸಂಚಾರ ಸ್ಥಗಿತಗೊಂಡಿದ್ದರಿಂದ 27-28ರಂದು ಎರಡು ದಿನ ನಡೆದ ಅರ್ಧ ವಾರ್ಷಿಕ ಪರೀಕ್ಷೆಗಳಿಗೆ ಮಕ್ಕಳು ಗೈರು ಹಾಜರಿಯಾಗಿದ್ದಾರೆ. ಅಲ್ಲದೇ ವೃದ್ಧರು. ಆನಾರೋಗ್ಯಪೀಡಿತರು ಪರ ಊರುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕೆಬಿಜೆಎನ್ಎಲ್ ನಿರ್ಲಕ್ಷ್ಯ : 

ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಿಸಲು ಕೃಷ್ಣಾ ಭಾಗ್ಯ ಜಲ ನಿಗಮ ವಾರ್ಷಿಕ ಯೋಜನೆಯಡಿ 2.40 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭಿಸದೇ ನಿರ್ಲಕ್ಷ ವಹಿಸಿದ್ದರಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಜಾಗೀರನಂದಿಹಾಳ ಗ್ರಾಮಸ್ಥರು ಆರೋಪಿಸಿದರು.

ಜಾಗೀರನಂದಿಹಾಳ ಗ್ರಾಮಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ನಾಲೆಯ ನೀರು ಹರಿದು ಜನರ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದನ್ನು ಅರಿತು ಸರ್ಕಾರ ಸೇತುವೆ ನಿರ್ಮಾಣ ಮಾಡಲು ಟೆಂಡರ್ ಕರೆದರೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಿಲುಗಡೆ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಸಂಕಷ್ಟಕ್ಕೆ ತುತ್ತಾಗಿದ್ದೇವೆ. ಗದ್ದೆನಗೌಡ ಪಾಟೀಲ್ ಜಾಗೀರನಂದಿಹಾಳ 

ಜೆಡಿಎಸ್- ಬಿಜೆಪಿ ಮೈತ್ರಿ: ದೇವದುರ್ಗ ಶಾಸಕಿ ಕರೆಮ್ಮ ಹೇಳಿದ್ದಿಷ್ಟು

ಜಾಗೀರನಂದಿಹಾಳ ಸೇತುವೆ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್ ರದ್ದಾಗಿದೆ. ಮರು ಟೆಂಡರ್ ಕರೆಯಲು ಪ್ರಸ್ತಾವ ಸಲ್ಲಿಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮ ನಿರ್ಲಕ್ಷ್ಯ ವಹಿಸಿಲ್ಲ. ಸಂಬಂಧವಿಲ್ಲದ ಕಚೇರಿ, ಅಧಿಕಾರಿಗಳ ಎದುರು ಪ್ರತಿಭಟನೆ ನಡೆಸುವುದು ಸರಿಯಾದುದಲ್ಲ. ಜನರನ್ನು ದಾರಿ ತಪ್ಪಿಸಬಾರದು. 

ಜಾಗೀರನಂದಿಹಾಳ ಗ್ರಾಮಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದ ನಾಲೆಯ ನೀರು ಹರಿದು ಜನರ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದನ್ನು ಅರಿತು ಸರ್ಕಾರ ಸೇತುವೆ ನಿರ್ಮಾಣ ಮಾಡಲು ಟೆಂಡರ್ ಕರೆದರೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆ ನಿಲುಗಡೆ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು ಸಂಕಷ್ಟಕ್ಕೆ ತುತ್ತಾಗಿದ್ದೇವೆ ಎಂದು ಗದ್ದೆನಗೌಡ ಪಾಟೀಲ್ ತಿಳಿಸಿದ್ದಾರೆ. 

click me!