ಹೊಸಪೇಟೆ: ಎಂಟು ದಿನ ಅಂತರದಲ್ಲಿ ಒಂದೇ ಕುಟುಂಬದ ಮೂವರ ಸಾವು

Kannadaprabha News   | Asianet News
Published : Jun 06, 2021, 01:24 PM IST
ಹೊಸಪೇಟೆ: ಎಂಟು ದಿನ ಅಂತರದಲ್ಲಿ ಒಂದೇ ಕುಟುಂಬದ ಮೂವರ ಸಾವು

ಸಾರಾಂಶ

* ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಘಟನೆ * ಒಂದೇ ದಿನದ ಅಂತರದಲ್ಲೇ ಕೊರೋನಾದಿಂದ ಅಕ್ಕ-ತಮ್ಮ ಸಾವು  * ಹೃದಯಾಘಾತದಿಂದ ತಂದೆ ಬೇರಿ ಸ್ಮಿತ್‌ ನಿಧನ

ಹೊಸಪೇಟೆ(ಜೂ.06): ಎಂಟು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ನಗರದಲ್ಲಿ ನಡೆದಿದೆ.

ಒಂದೇ ದಿನದ ಅಂತರದಲ್ಲೇ ಅಕ್ಕ-ತಮ್ಮ ಕೊರೋನಾದಿಂದ ಮೃತಪಟ್ಟಿದ್ದರು. ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ ತಂದೆ ಬೇರಿ ಸ್ಮಿತ್‌ (70) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. 

ಒಂದೇ ದಿನದ ಅಂತರದಲ್ಲಿ ಕೊರೋನಾಗೆ ಅಕ್ಕ-ತಮ್ಮ ಬಲಿ

ಕಾಂಗ್ರೆಸ್‌ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿದ್ದ ಕ್ಯಾರೋಲಿನ್‌ ಲೂಸಿಯಾ ಸ್ಮಿತ್‌ (45) ಹಾಗೂ ತಮ್ಮ ಸಾವಿಯೋ ಸ್ಮಿತ್‌(42) ಇಬ್ಬರೂ ಒಂದು ದಿನದ ಅಂತರದಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು.
ಇದೀಗ ಇವರ ತಂದೆ ಸಹ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
 

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್