* ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮ
* ಗ್ರಾಮದಲ್ಲಿ ಲಸಿಕೆ ಜಾಗೃತಿ ಮೂಡಿಸಿದ ಹಿರಿಯರು
* ಸ್ವಯಂ ಪ್ರೇರಿತರಾಗಿ ಆಗಮಿಸಿ ಲಸಿಕೆ ಹಾಕಿಸಿಕೊಂಡ ಜನತೆ
ಕೊಪ್ಪಳ(ಜೂ.06): ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಜನರು ಸರದಿಯಲ್ಲಿ ನಿಂತು ಇಂದು(ಭಾನುವಾರ) ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ಲಸಿಕೆ ಜಾಗೃತಿಯನ್ನು ಮೂಡಿಸಿದ ಹಿರಿಯರು, ಮಹಾಮಾರಿ ಕೊರೋನಾದಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳುವುದೆ ಪರಿಹಾರ. ಆದ್ದರಿದ ಎಲ್ಲರೂ ಸ್ವಯಂ ಪ್ರೇರಿತರಾಗಿ ಆಗಮಿಸಿ, ಶಿಸ್ತುಬದ್ಧವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ.
ಕೊಪ್ಪಳ: ಸುಡುವ ಬಿಸಿಲು ಲೆಕ್ಕಿಸದೇ ಗಾಲಿಕುಂಟೆ ತಳ್ಳಿ 3 ಎಕರೆ ಹೊಲ ಎಡೆಹೊಡೆದ ರೈತ..!
ಈ ಹಿನ್ನೆಲೆಯಲ್ಲಿ ಎಲ್ಲರೂ ಅತ್ಯಂತ ಶಿಸ್ತುಬದ್ಧವಾಗಿ ಲಸಿಕೆ ಹಾಕಿಸಿಕೊಂಡು, ಮಾದರಿಯಾಗಿದ್ದಾರೆ. ಸರ್ಕಾರದ ನಿಯಮಾನುಸಾರ ಅರ್ಹರು ಲಸಿಕೆಯನ್ನ ಹಾಕಿಸಿಕೊಂಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona