ತರೀಕೆರೆ ಬಿಜೆಪಿ ಶಾಸಕ ಸುರೇಶ್ ವಿರುದ್ಧ ಮತ್ತೊಂದು ಆರೋಪ

By Suvarna NewsFirst Published Jun 6, 2021, 12:40 PM IST
Highlights
  • ತರೀಕೆರೆ ಶಾಸಕ ಸುರೇಶ್ ವಿರುದ್ದ ಇದೀಗ ಮತ್ತೊಂದು ಆರೋಪ
  • ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಅಂತಿಮ ಯಾತ್ರೆಯಲ್ಲಿ ಭಾಗಿ
  • ಕೆಲ ದಿನಗಳ ಹಿಂದಷ್ಟೇ ಅಪಘಾತದ ಸ್ಥಳದಲ್ಲಿ ಕಾರಿಂದ ಇಳಿದಿಲ್ಲವೆಂದು ಆರೋಪ

ಚಿಕ್ಕಮಗಳೂರು (ಜೂ.06) :  ಕೆಲ ದಿನಗಳ ಹಿಂದಷ್ಟೇ ಕಣ್ಣೆದುರೇ ಅಪಘಾತವಾದರೂ ಕಾರಿಂದ ಇಳಿದಿಲ್ಲವೆಂದು ವಿವಾದಕ್ಕೆ ಕಾರಣವಾಗಿದ್ದ ತರಿಕೆರೆ ಶಾಸಕ ಸುರೇಶ್ ವಿರುದ್ಧ ಇದೀಗ ಮತ್ತೊಂದು ಆರೋಪ ಎದುರಾಗಿದೆ. 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಶಾಸಕ ಸುರೇಶ್ ವಿರುದ್ಧ  ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಆರೋಪ ಎದುರಾಗಿದೆ.  ಕೊರೋನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಅಂತಿಮ ಯಾತ್ರೆಯಲ್ಲಿ ಶಾಸಕ ಸುರೇಶ್ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. 

ಕಣ್ಣೆದುರೇ ಅಪಘಾತವಾದರೂ ಕಾರಿಂದ ಇಳಿಯದ ಶಾಸಕ : ಇದೆಂಥಾ ಅಮಾನವೀಯತೆ ...

ಸದ್ಯ ರಾಜ್ಯದಲ್ಲಿ ಕೊರೋನಾ ಹಿನ್ನೆಲೆ ಕಠಿಣ ಲಾಕ್‌ಡೌನ್ ಇದ್ದು, ಯಾವುದೇ ಮೆರವಣಿಗೆಗೂ ಅವಕಾಶವಿಲ್ಲ. ಅದರೆ ಅಜ್ಜಂಪುರ ತಾಲೂಕಿನ ಜಾವೂರು ಗ್ರಾಮದಲ್ಲಿಂದು ಸುಧಾಕರ್ ಬಾಬು ಎಂಬುವವರು ಮೃತಪಟ್ಟಿದ್ದು,  ಮೃತದೇಹದ ಮೆರವಣಿಗೆ ಮಾಡಲಾಗಿದೆ. 

ಆಂಬುಲೆನ್ಸ್‌ನಲ್ಲಿಟ್ಟು ಮೃತದೇಹದ ಮೆರವಣಿಗೆಯಲ್ಲಿ ಜಾವೂರು ಗ್ರಾಮದ ಅನೇಕ ಜನರು ಇದರಲ್ಲಿ ಭಾಗಿಯಾಗಿದ್ದರು. ಜೊತೆಗೆ ಶಾಸಕ ಸುರೇಶ್ ಅವರೂ ಪಾಲ್ಗೊಂಡು ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. 
  
50ಕ್ಕೂ ಹೆಚ್ಚು ಜನ ಸೇರಿ ಸುಧಾಕರ್ ಬಾಬು ಮೃತದೇಹ ಮೆರವಣಿಗೆ ಮಾಡಿದ್ದು, ಅಂತ್ಯ ಸಂಸ್ಕಾರದಲ್ಲೂ 50 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!