* ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ದುರಂತ
* 3 ಕಾರ್ಮಿಕರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ
* ಸಚಿವ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ
ಬಾಗಲಕೋಟೆ(ಜ.13): ಸಚಿವ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬುಧವಾರ ಸಾಯಂಕಾಲ ಆಕಸ್ಮಿಕವಾಗಿ ಮೂವರು ಕಾರ್ಮಿಕರಿಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿದ್ದರೂ ಕಾರ್ಮಿಕ ಜೀವ ಭಯದಿಂದ ಕಾರ್ಖಾನೆಯಲ್ಲಿ ನೀರಿಗಾಗಿ ಓಡಾಡಿದ ಘಟನೆ ನಡೆದಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಈ ದುರಂತ ನಡೆದಿದೆ. ಬೆಂಕಿಗೆ ಕಾರಣ ತಿಳಿದುಬಂದಿಲ್ಲ.
ಆಕಸ್ಮಿಕವಾಗಿ ಮೂವರು ಕಾರ್ಮಿಕರಿಗೆ ಬೆಂಕಿ ಹೊತ್ತಿಕೊಂಡಿದ್ದು ಬೆಂಕಿಯ ಜ್ವಾಲೆಯಲ್ಲಿಯೇ ಓಡಾಡಿದ ಕಾರ್ಮಿಕರು ನಂತರ ಕಾರ್ಖಾನೆಯಲ್ಲಿದ್ದ ಕೊಳವೆ ಬಾವಿಯ ನೀರಿಗೆ ಹೋಗಿ ಬೆಂಕಿ ನಂದಿಸಿಕೊಂಡಿದ್ದಾರೆ. ಒಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Dhabha Set on Fire: ಬಿಲ್ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!
ಸಾಲ ಕೊಡದಿದ್ದಕ್ಕೆ ಬ್ಯಾಂಕಿಗೆ ಬೆಂಕಿ ಹಚ್ಚಿದ ಭೂಪ!
ಹಾವೇರಿ: ಬ್ಯಾಂಕ್ ನಿಂದ ಸಾಲ(Bank Loan) ಸಿಗುತ್ತಿಲ್ಲವೆಂದು ಬೇಸರಗೊಂಡ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಶಾಖೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಜ.08 ರಂದು ಹಾವೇರಿ(Haveri) ಜಿಲ್ಲೆ ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ನಡೆದಿತ್ತು.
ರಟ್ಟಿಹಳ್ಳಿ ನಿವಾಸಿ ವಸೀಮ್ ಮುಲ್ಲಾ (33) ಬ್ಯಾಂಕ್ ಗೆ ಬೆಂಕಿಯಿಟ್ಟ ಆರೋಪಿ. ಬೆಂಕಿ ಕೆನ್ನಾಲಿಗೆಗೆ ಬ್ಯಾಂಕ್ ನ ಬಹುತೇಕ ಭಾಗ ಸುಟ್ಟು ಕರಕಲಾಗಿದ್ದು, ಕಾಗದ ಪತ್ರಗಳು ಬೆಂಕಿಗಾಹುತಿಯಾಗಿವೆ. ಬ್ಯಾಂಕಿಗೆ(Bank) ಬೆಂಕಿ(Fire) ಹಚ್ಚಿ ಪರಾರಿಯಾಗುತ್ತಿದ್ದ ಆರೋಪಿಗೆ ಧರ್ಮದೇಟು ನೀಡಿದ ಗ್ರಾಮಸ್ಥರು, ಪೊಲೀಸರಿಗೆ ಒಪ್ಪಿಸಿದ್ದಾರೆ.ಬ್ಯಾಂಕ್‌ನಲ್ಲಿದ್ದ ಕಾಗದ ಪತ್ರಗಳು, ಕಂಪ್ಯೂಟರ್ ಸುಟ್ಡಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಕಾಗಿನೆಲೆ ಪೊಲೀಸರು ಆರೋಪಿಯ ವಿಚಾರಣೆ ನಡೆಸಿದ್ದರು.
ಬ್ಯಾಂಕ್ ಮ್ಯಾನೇಜರ್ ತನಗೆ ಲೋನ್ ನೀಡಲು ನಿರಾಕರಿಸಿದ್ದರು. ಇದರಿಂದ ಬೇಸತ್ತು ಬ್ಯಾಂಕ್ ಗ್ಲಾಸ್ ಗಳನ್ನು ಒಡೆದು ಒಳನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದನು.
ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟ
ಬೆಂಗಳೂರು: ಮನೆ ವರಾಂಡದಲ್ಲಿ ಅಕ್ರಮವಾಗಿ ದೊಡ್ಡ ಸಿಲಿಂಡರ್‌ನಿಂದ(Cylinder) ಸಿಲಿಂಡರ್‌ಗೆ ಗ್ಯಾಸ್ ರೀಫಿಲ್ಲಿಂಗ್ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿರುವ(Explosion) ಘಟನೆ ಶನಿವಾರ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜ.08 ರಂದು ನಡೆದಿತ್ತು.
ಮೂಡಲಪಾಳ್ಯದ ಪಂಚಶೀಲನಗರದ ಬೆಟ್ಟಯ್ಯ ಎಂಬುವವರ ಮನೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಬೆಟ್ಟಯ್ಯ ಪುತ್ರ ವಿನಯ್(30) ಹಾಗೂ ಕೆಲಸಗಾರ ಕುಮಾರ್(28) ಎಂಬುವವರು ಗಾಯಗೊಂಡಿದ್ದು(Injured), ಚಿಕಿತ್ಸೆಗಾಗಿ(Treatment) ಆಸ್ಪತ್ರೆಗೆ(Hospital) ದಾಖಲಿಸಲಾಗಿತ್ತು. ಸ್ಫೋಟದಿಂದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾಗಿದೆ. ಮನೆಯ ಕಿಟಿಕಿ, ಗೋಡೆ ಹಾಗೂ ಮನೆಯ ವಸ್ತುಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.
Karnataka Cabinet ಸಚಿವ ಸಂಪುಟದಲ್ಲಿ ಮೇಜರ್ ಬದಲಾವಣೆ, ಬಾಂಬ್ ಸಿಡಿಸಿದ ಯತ್ನಾಳ್
ಬೆಟ್ಟಯ್ಯ ಅವರು ಭಾರತ್ ಭವಾನಿ ಗ್ಯಾಸ್ ಏಜೆನ್ಸಿ(Bharat Bhawani Gas Agency) ನಡೆಸುತ್ತಿದ್ದರು. ಮಧಾಹ್ನ 12 ಗಂಟೆ ಸುಮಾರಿಗೆ ಮನೆಯ ವರಾಂಡದಲ್ಲಿ ಬೆಟ್ಟಯ್ಯ ಪುತ್ರ ವಿನಯ್ ದೊಡ್ಡ ಸಿಲಿಂಡರ್‌ನಿಂದ ಸಣ್ಣ ಸಿಲಿಂಡರ್‌ಗೆ ಗ್ಯಾಸ್ ರೀಫಿಲ್ಲಿಂಗ್ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಅವಘಡದ ವಿಚಾರ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ(Fire Department) ಹಾಗೂ ಪೊಲೀಸರು(Police) ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು.
ಗ್ಯಾಸ್ ಏಜೆನ್ಸಿಯ ಮಾಲೀಕ ಬೆಟ್ಟಯ್ಯ ಮನೆಯ ಗೋದಾಮಿನಲ್ಲಿ 20ಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ ಸಂಗ್ರಹಿಸಿದ್ದರು. ಗ್ಯಾಸ್ ರೀಫಿಲ್ಲಿಂಗ್ ವೇಳೆ ಒಂದು ಸಿಲಿಂಡರ್ ಸ್ಫೋಟಗೊಂಡಿದೆ. ಒಂದು ವೇಳೆ ಇತರೆ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ, ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಬೆಟ್ಟಯ್ಯ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಟ್ಟಯ್ಯ ವಿರುದ್ಧ ಎಫ್‌ಐಆರ್(FIR) ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.