Belagavi Violence: ಉದ್ಧವ್‌ ಠಾಕ್ರೆ ಅವರೊಬ್ಬ ಉದ್ಭವ ಠಾಕ್ರೆ: ಸಚಿವ ಸಿ.ಸಿ. ಪಾಟೀಲ

By Kannadaprabha NewsFirst Published Dec 20, 2021, 11:47 AM IST
Highlights

*  ಎಂಇಎಸ್‌ ಸಂಘ​ಟನೆ ಗೂಂಡಾ​ಗಿರಿ ಮತ್ತು ದಬ್ಬಾ​ಳಿಕೆಗೆ ಕಿಡಿ
*  ಕರ್ನಾ​ಟದಲ್ಲಿ ಈಗ ಗಂಭೀ​ರ​ವಾದ ಪರಿ​ಸ್ಥಿತಿ ನಿರ್ಮಾ​ಣ​
*  ಶಾಂತ​ವಾ​ಗಿದ್ದ ಪರಿ​ಸ್ಥಿ​ತಿ ಕದ​ಡಲು ಶಿವ​ಸೇನೆ ಕಾರ​ಣ​
 

ಗದಗ(ಡಿ.20):  ಮಹಾರಾಷ್ಟ್ರ(Maharashtra) ಸಿಎಂ ಉದ್ಧವ್‌ ಠಾಕ್ರೆ(Uddhav Thackeray) ಟ್ವೀಟ್‌ಗೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ(CC Patil) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಉದ್ಧವ್‌ ಠಾಕ್ರೆ ಅವರೊಬ್ಬ ಉದ್ಭವ ಠಾಕ್ರೆ. ಉದ್ಧಟತನ ಟ್ವೀಟ್‌ ಮಾಡಿದ್ದಾರೆ ಎಂದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ(Belagavi Assembly Session) ನಡೆಯಬಾರದು, ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು, ಅಭಿವೃದ್ಧಿಯಿಂದ ಕುಂಠಿತ ಆಗಬೇಕು ಎಂಬ ದುರುದ್ದೇಶ ಎಂಇಎಸ್‌ನದ್ದು(MES) ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ವೀಟ್‌ಗೆ ಖಂಡನೆ: 

Latest Videos

ಕರ್ನಾಟಕ(Karnataka) ನೆರೆಯ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸದಾ ಉತ್ಸುಕವಾಗಿದೆ. ಆ ಉತ್ಸುಕತೆ ಮಹಾರಾಷ್ಟ್ರಕ್ಕೆ ಬೇಕಾಗಿಲ್ಲ. ಅವರು ತಮ್ಮ ಜನಪ್ರಿಯತೆ ಕಡಿಮೆಯಾದಾಗ, ಆಡಳಿತ ವಿರೋಧಿ ಅಲೆ ಎದ್ದಾಗ ಇಂತಹ ಹುನ್ನಾರಕ್ಕೆ ಕೈ ಹಾಕುತ್ತಾರೆ ಎಂದರು.

Belagavi Riot: ಉದ್ಧವ್ ದೇವ್ರಲ್ಲ, ಡಿಕೆ ಶಿವಕುಮಾರ್ ಸಾಚ ಅಲ್ಲ, ಗುಡುಗಿದ ಈಶ್ವರಪ್ಪ

ಠಾಕ್ರೆ ಈ ರೀತಿಯ ಹೇಳಿಕೆ ಕೈಬಿಡಬೇಕು. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ಶಾಂತಿಪ್ರಿಯರನ್ನು ಕೆರಳಿಸಬೇಡಿ ಎಂದು ಎಂಇಎಸ್ಹಾಗೂ ಮಹಾರಾಷ್ಟ್ರ ಸಿಎಂಗೆ ಖಡಕ್ಎಚ್ಚರಿಕೆ ನೀಡಿದರು.
ಠಾಕ್ರೆ ಸರ್ಕಾರ ವಜಾ​ಗೊ​ಳಿ​ಸಿ, ಎಂಇ​ಎಸ್‌ ನಿಷೇ​ಧಿಸಿ

ರಾಮ​ನ​ಗ​ರ(Ramanagara): ಕರ್ನಾ​ಟ​ಕ​ದಲ್ಲಿ ಅಶಾಂತ ಪರಿ​ಸ್ಥಿ​ಗೆ ಕಾರ​ಣ​ರಾ​ಗಿ​ರು​ವ ಮಹಾ​ರಾ​ಷ್ಟ್ರದ ಉದ್ಧವ್ಠಾಕ್ರೆ ನೇತೃ​ತ್ವದ ಸರ್ಕಾ​ರ​ವನ್ನು ರಾಷ್ಟ್ರ​ಪ​ತಿ​ಗಳು(President Ram Nath Kovind) ತಕ್ಷಣ ವಜಾ ಮಾಡ​ಬೇಕು ಹಾಗೂ ಎಂ.ಇ.​ಎಸ್‌ ಸಂಘ​ಟ​ನೆ​ಯನ್ನು ರಾಜ್ಯ ಸರ್ಕಾರ ತಕ್ಷಣ ನಿಷೇ​ಧಿ​ಸ​ಬೇಕು ಎಂದು ಕನ್ನಡ ಚಳ​ವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗ​ರಾಜ್(Vatal Nagaraj)  ಒತ್ತಾ​ಯಿ​ಸಿ​ದ​ರು.

ನಗ​ರದ ಐಜೂ​ರು ವೃತ್ತ​ದಲ್ಲಿ ಮಹಾ​ರಾಷ್ಟ್ರ ಏಕೀ​ಕ​ರಣ ಸಮಿತಿ (ಎಂ.​ಇ.​ಎ​ಸ್) ಮತ್ತು ಮಹಾ​ರಾಷ್ಟ್ರ ಮುಖ್ಯಮಂತ್ರಿ ಉದ್ಧವ್ಠಾಕ್ರೆ ವಿರುದ್ಧ ನಡೆ​ದ ಪ್ರತಿ​ಭ​ಟನೆ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ ಅವ​ರು, ಕರ್ನಾ​ಟದಲ್ಲಿ ಈಗ ಗಂಭೀ​ರ​ವಾದ ಪರಿ​ಸ್ಥಿತಿ ನಿರ್ಮಾ​ಣ​ವಾ​ಗಿದೆ. ಒಂದು ಕಡೆ ಕನ್ನಡ ಬಾವು​ಟಕ್ಕೆ ಬೆಂಕಿ ಇಡ​ಲಾ​ಗಿದೆ. ಇನ್ನೊಂದೆಡೆ ಸಂಗೊಳ್ಳಿ ರಾಯ​ಣ್ಣ​ನಿಗೆ(Sangolli Rayanna) ಅಪ​ಮಾನ ಮಾಡ​ಲಾ​ಗಿದೆ. ಇದ​ಕ್ಕೆಲ್ಲ ಕಾರಣ ಎಂ.ಇ.​ಎಸ್ಸಂಘ​ಟನೆ ಗೂಂಡಾ​ಗಿರಿ ಮತ್ತು ದಬ್ಬಾ​ಳಿಕೆ ಎಂದು ಕಿಡಿ ಕಾರಿ​ದರು.

ಬೆಳ​ಗಾ​ವಿ​ಯಲ್ಲಿ(Belagavi) ಉದ್ಧವವ್‌ ಠಾಕ್ರೆ ಅವರ ಶಿವ​ಸೇನೆ(Shiv Sena) ಕಾರ್ಯ​ಕ​ರ್ತರು ಕನ್ನ​ಡಿ​ಗರ(Kannadigas) ವಾಹ​ನ​ಗ​ಳಿಗೆ ಕಲ್ಲು ಹೊಡೆದು ಹಾನಿ ಮಾಡಿ​ದ್ದಾರೆ. ಕನ್ನಡ ಬಾವು​ಟಕ್ಕೆ(Kannada Flag) ಬೆಂಕಿ ಹಚ್ಚಿ​ದ್ದಾರೆ. ಶಾಂತ​ವಾ​ಗಿದ್ದ ಪರಿ​ಸ್ಥಿ​ತಿ ಕದ​ಡಲು ಶಿವ​ಸೇನೆ ಕಾರ​ಣ​ವಾ​ಗಿದೆ. ಹೀಗಾಗಿ ಮಹಾ​ರಾ​ಷ್ಟ್ರದ ಮುಖ್ಯಮಂತ್ರಿ ಉದ್ಧವ್ಠಾಕ್ರೆ​ ಸರ್ಕಾ​ರ​ವನ್ನು ರಾಷ್ಟ್ರ​ಪ​ತಿ​ಗಳು ತಕ್ಷಣ ವಜಾ ಮಾಡ​ಬೇಕು.ಉದ್ಧವ್ಠಾಕ್ರೆ ಒಂದು ನಿಮಿ​ಷವೂ ಮುಖ್ಯ​ಮಂತ್ರಿ​ಗ​ಳಾ​ಗಿ​ರಲು ಅಧಿ​ಕಾ​ರ​ವಿಲ್ಲ ಎಂದು ಆಕ್ರೋಶ ವ್ಯಕ್ತ​ಪ​ಡಿ​ಸಿ​ದರು.

ಬೆಳ​ಗಾವಿ ಜಿಲ್ಲೆಯ ಶಾಸ​ಕರು ಮರಾಠಿಗರ ಗುಲಾ​ಮ​ರಾ​ಗಿ​ದ್ದಾರೆ. ಮರಾ​ಠಿಗರ ಏಜೆಂಟ​ರಾ​ಗಿ​ದ್ದಾರೆ. ಇವ​ರೆಲ್ಲ ತಕ್ಷಣ ತಮ್ಮ ಸ್ಥಾನ​ಗ​ಳಿಗೆ ರಾಜೀ​ನಾಮೆ ಕೊಡ​ಬೇಕು. ಸಂಗೊಳ್ಳಿ ರಾಯಣ್ಣ ಈ ನಾಡಿಗೆ, ಈ ದೇಶಕ್ಕೆ ಸೇವೆ ಮಾಡಿ​ದ್ದಾರೆ. ಅವರಿಗೆ ಅಪ​ಮಾನ ಮಾಡಿರು​ವುದು ಸರಿ​ಯಲ್ಲ ಎಂದು ಖಂಡಿ​ಸಿ​ದರು.

Belagavi Violence ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ, ಪುಂಡರಿಗೆ ತಕ್ಕ ಪಾಠ, ಬೆಳಗಾವಿ ಘಟನೆಗೆ ಬೊಮ್ಮಾಯಿ ಕಿಡಿ

ಎಂ.ಇ.​ಎಸ್‌ ಸಂಘ​ಟ​ನೆ​ಯನ್ನುಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾ​ಯಿಯವರು(Basavaraj Bommai) ತಕ್ಷಣ ವಜಾ ಮಾಡ​ಬೇಕು. ವಿಧಾನಸಭಾ ಕಲಾ​ಪ​ದಲ್ಲಿ ಸಮಗ್ರ ಚರ್ಚೆ​ಯಾ​ಗಲಿ. ನಿಲು​ವಳಿ ಸೂಚನೆ ಮಂಡಿಸಿ ರಾಜ್ಯ ಸರ್ಕಾರ ಎಂ.ಇ.​ಎಸ್‌ ಸಂಘ​ಟ​ನೆ​ಯನ್ನು ರಾಜ್ಯ​ದಲ್ಲಿ ನಿಷೇ​ಧಿ​ಸಬೇಕು ಎಂದು ಒತ್ತಾ​ಯಿ​ಸಿ​ದರು.

ಪ್ರತಿ​ಭ​ಟ​ನೆ​ಯಲ್ಲಿ(Protest) ಕರು​ನಾಡು ಸೇನೆಯ ರಾಜ್ಯ ಉಪಾ​ಧ್ಯಕ್ಷ ಎಂ.ಜಗ​ದೀಶ್, ಜಿಲ್ಲಾ ಘಟ​ಕದ ಅಧ್ಯಕ್ಷ ಸಿ.ಎ​ಸ್.​ಜ​ಯ​ಕು​ಮಾರ್, ಜಿಲ್ಲಾ ಮಹಿಳಾ ಘಟ​ಕದ ಅಧ್ಯಕ್ಷೆ ಗಾಯತ್ರಿ ಬಾಯಿ, ಅಲ್ಪ​ಸಂಖ್ಯಾ​ತರ ಘಟ​ಕದ ಅಧ್ಯಕ್ಷ ಉಸ್ಮಾ​ನ್​ಷ​ರೀಫ್, ಪ್ರಮು​ಖ​ರಾದ ಲೋಕೇಶ್, ಹೇಮಾ​ವತಿ, ರೇಣುಕಾ, ಮರಿ​ಸ್ವಾಮಿ, ಮಹೇಂದ್ರ, ಯಶೋಧ, ಜಗ​ದೀಶ ಮತ್ತಿ​ತ​ರರು ಭಾಗ​ವ​ಹಿ​ಸಿ​ದ್ದರು.
 

click me!