* ನಿಯಂತ್ರಣ ತಪ್ಪಿ ರಸ್ತೆ ವಿಭಜಕ ಹಾರಿದ ಎಸ್‌ಯುವಿ, ಕ್ಯಾಬ್‌ಗೆ ಡಿಕ್ಕಿ
* ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಬ್ ನಜ್ಜುಗುಜ್ಜು
* ಇಬ್ಬರು ಪ್ರಯಾಣಿಕರು, ಕ್ಯಾಬ್ ಚಾಲಕ ಸಾವು
ಬೆಂಗಳೂರು(ನ.19): ಚಿಕ್ಕಜಾಲ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ(Accident) ಮೂವರು ಮೃತಪಟ್ಟಿದ್ದು(Death), ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.
ಮಹೀಂದ್ರಾ ಎಸ್‌ಯುವಿ ಮತ್ತು ಕ್ಯಾಬ್ ನಡುವೆ ರಾತ್ರಿ 9.30ರ ಸುಮಾರಿಗೆ ಈ ಅಪಘಾತವಾಗಿದ್ದು, ಘಟನೆಯಲ್ಲಿ ಕ್ಯಾಬ್ ಚಾಲಕ ಹಾಗೂ ಇಬ್ಬರು ಮಹಿಳಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಆದರೆ ಮೃತರ ಮತ್ತು ಗಾಯಾಳುಗಳ ಹೆಸರು ಪತ್ತೆಯಾಗಿಲ್ಲ ಎಂದು ಪೊಲೀಸರು(Police) ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(International Airport) ಕಡೆಯಿಂದ ನಗರಕ್ಕೆ(Bengaluru) ಅತಿವೇಗದಲ್ಲಿ ಮಹೀಂದ್ರಾ ಎಸ್‌ಯುವಿ ತೆರಳುತ್ತಿತ್ತು. ಆಗ ಚಾಲಕನ ನಿಯಂತ್ರಣ ಕಳೆದುಕೊಂಡ ಮಹೇಂದ್ರ, ಚಿಕ್ಕಜಾಲದ ಬೆಟ್ಟಹಲಸೂರು ಸಮೀಪ ರಸ್ತೆ ವಿಭಜಕ್ಕೆ ಡಿಕ್ಕಿ(Collision) ಹೊಡೆದು ಮತ್ತೊಂದು ಬದಿಗೆ ಹಠಾತ್ ನುಗ್ಗಿದೆ. ಅದೇ ವೇಳೆ ನಗರದಿಂದ ಇಬ್ಬರನ್ನು ಪ್ರಯಾಣಿಕರನ್ನು ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ಹೊರಟ್ಟಿದ್ದ ಕ್ಯಾಬ್‌ಗೆ ಎಸ್‌ಯುವಿ ಮಹೀಂದ್ರಾ ಅಪ್ಪಳಿಸಿದೆ.
Shivamogga: ಗಾಯಾಳುಗಳ ನೆರವಿಗೆ ಗೃಹ ಸಚಿವ, ತಮ್ಮದೆ ಕಾರಿನಲ್ಲಿ ಕಳಿಸಿದರು
ಗುದ್ದಿದ ರಭಸಕ್ಕೆ ಕ್ಯಾಬ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಹಾಗೂ ಕ್ಯಾಬ್ ಚಾಲಕ ಕೊನೆಯುಸಿರೆಳೆದಿದ್ದಾರೆ. ಮಳೆ ಆಗುತ್ತಿದ್ದ ಕಾರಣ ಕಾರಿನಲ್ಲಿ ಮೃತದೇಹಗಳನ್ನು(Deadbody) ಹೊರ ತೆಗೆಯಲಾಗದೆ ಪೊಲೀಸರು, ಕಾರಿನ ಸಮೇತವಾಗಿಯೇ ಮೃತದೇಹಗಳನ್ನು ಟೋಯಿಂಗ್ ಮಾಡಿದ್ದಾರೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಹತ್ತಿರ ಆಸ್ಪತ್ರೆಗೆ(Hospital) ದಾಖಲಿಸಿದ್ದು, ಅವರ ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ(Traffic Police Station) ಪ್ರಕರಣ(Case) ದಾಖಲಾಗಿದೆ.
ಆಟೋ ರಿಕ್ಷಾ-ಬೈಕ್ ಡಿಕ್ಕಿ
ಹೊನ್ನಾವರ(Honnavar): ತಾಲೂಕಿನ ಆರೋಳ್ಳಿ ತಿರುವಿನಲ್ಲಿ ಆಟೋ ರಿಕ್ಷಾ ಹಾಗೂ ಬೈಕ್ ನಡುವೆ ಗುರುವಾರ ಅಪಘಾತ ಸಂಭವಿಸಿ ಬೈಕ್ ಹಾಗೂ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಹೊನ್ನಾವರ ಕಡೆಯಿಂದ ಬರುತ್ತಿದ್ದ ಆಟೋ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗಜಾನನ ತಿಮ್ಮಪ್ಪ ಗೌಡ, ಹರ್ಷಿತಾ ರಮೇಶ ಮೇಸ್ತ, ಗೌತಮ್ ರಾಮಚಂದ್ರ ಮಡಿವಾಳ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಈ ಬಗ್ಗೆ ನಾಗೇಶ ವಾಸು ನಾಯ್ಕ ಬಂಕನಹಿತ್ಲು ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲಾರಿ-ಬಸ್ ನಡುವೆ ಅಪಘಾತ
ಹೊನ್ನಾವರ: ತಾಲೂಕಿನ ಕರ್ಕಿ ಪೆಟ್ರೋಲ್ ಬಂಕ್ ಸಮೀಪ ಲಾರಿ ಮತ್ತು ಸಾರಿಗೆ ಬಸ್ ನಡುವೆ ಗುರುವಾರ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿಯಲ್ಲಿ ಭಟ್ಕಳ ಕಡೆಯಿಂದ ಬರುತ್ತಿದ್ದ ಲಾರಿಯು ಕುಮಟಾ(Kumta) ಕಡೆಯಿಂದ ಹೊನ್ನಾವರಕ್ಕೆ ಸಾಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಜೋಸ್ ಮ್ಯಾಥ್ಯೂ ಮಥೈ ವಿರುದ್ಧ ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಂಗಪ್ಪ ಮಾದರ ದೂರು ನೀಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಶೇಖರ ನಾಗಪ್ಪ ಮೊಗೇರ ಬೈಂದೂರ, ಮುರ್ಡೇಶ್ವರದ ಗೋವಿಂದ ಕುಪ್ಪ ನಾಯ್ಕ, ಜೈವಂತ ಭಾಸ್ಕರ ಮಹಾಜನ, ಪ್ರೇಮಾ ಜೈವಂತ ಮಹಾಜನ, ಎಸ್ಟೆಲ್ಲಾ ಲಿಲಿಯೋ ಮಿರಾಂಡ ಕುಮಟಾ, ಸಾವಿತ್ರಿ ದ್ಯಾಮಣ್ಣ ಹಾಸಂಗಿ ಬಾಗಲಕೋಟೆ ಗಾಯಗೊಂಡಿದ್ದಾರೆ.
Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್ ಡಿಕ್ಕಿ: ಇಬ್ಬರ ಸಾವು
ನಿಯಂತ್ರಣ ತಪ್ಪಿ ಸೇತುವೆ ಗೋಡೆಗೆ ಬಸ್ ಡಿಕ್ಕಿ
ಧಾರವಾಡ(Dharwad): ನಿಯಂತ್ರಣ ತಪ್ಪಿದ ಸಾರಿಗೆ ಸಂಸ್ಥೆಯ(NWKRTC) ಬಸ್ಸೊಂದು ಬಿಆರ್‌ಟಿಎಸ್ ಮೇಲ್ಸೇತುವೆಗೆ(BRTS Flyober) ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಕೊಪ್ಪಳದಿಂದ(Koppal) ಧಾರವಾಡದ ಮದುವೆ ಸಮಾರಂಭಕ್ಕೆ ಸಾರಿಗೆ ಸಂಸ್ಥೆಯ ಬಸ್ ಹುಬ್ಬಳ್ಳಿ(Hubballi) ಮೂಲಕ ಧಾರವಾಡಕ್ಕೆ ಬರುವಾಗ ದಾರಿ ಮಧ್ಯೆ ನವಲೂರು ಬಳಿ ಈ ದುರ್ಘಟನೆ ನಡೆದಿದೆ. ಬಸ್ಸಿನಲ್ಲಿ 50 ಜನರು ಪ್ರಯಾಣಿಸುತ್ತಿದ್ದು ಎಲ್ಲರೂ ಸುರಕ್ಷಿತರಾಗಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಎಲ್ಲರನ್ನು ಕೆಳಗೆ ಇಳಿಸಿ ಮತ್ತೊಂದು ವಾಹನದಲ್ಲಿ ಮದುವೆಗೆ ಕರೆದೊಯ್ಯಲಾಯಿತು. ಸಣ್ಣಪುಟ್ಟಗಾಯ ಹೊರತುಪಡಿಸಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪ್ರಕರಣ ದಾಖಲಿಸಿಕೊಂಡ ಟ್ರಾಫಿಕ್ ಪೊಲೀಸರು ಪತ್ರಿಕೆಗೆ ಮಾಹಿತಿ ನೀಡಿದರು.