* ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ
* ಮೂವರ ಸಾವು, ಇಬ್ಬರಿಗೆ ತೀವ್ರ ಗಾಯ
* ಗಾಯಾಳುಗಳಿಗೆ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ
ರೋಣ(ಫೆ.02): ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ(Funeral) ಹೋದವರೂ ರಸ್ತೆ ಅಪಘಾತದಲ್ಲಿ(Accident) ಮಸಣ ಸೇರಿದ ದಾರುಣ ಘಟನೆ ತಾಲೂಕಿನ ಹಿರೇಹಾಳ ಮತ್ತು ಬಾದಾಮಿ(Badami) ತಾಲೂಕಿನ ಜಾಲಿಹಾಳ ಮಧ್ಯೆ ಭಾನುವಾರ ರಾತ್ರಿ ನಡೆದಿದೆ.
ಅಂತ್ಯ ಸಂಸ್ಕಾರ ಮುಗಿಸಿ ಗ್ರಾಮಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಹಿರೇಹಾಳ ಬಳಿ ವಾಹನವೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು ,ಘಟನೆಯಲ್ಲಿ ತಾಲೂಕಿನ ಡ.ಸ. ಹಡಗಲಿ ಗ್ರಾಮದ ಕಾರು ಚಾಲಕ ಮಂಜುನಾಥ ಮಾರನಬಸರಿ (35), ಬಸನಗೌಡ ಪಾಟೀಲ (66) ಮತ್ತು ಸಂಗಮ್ಮ ಪಾಟೀಲ (55) ಮೃತಪಟ್ಟಿದ್ದಾರೆ(Death). ಇನ್ನೂ ಇಬ್ಬರಿಗೆ ತೀವ್ರಗಾಯಗಳಾಗಿದ್ದು, ಗದಗ(Gadag) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
undefined
Shivamogga: ಮಾಚೇನಹಳ್ಳಿ ಬಳಿ ಲಾರಿ, ಕಾರಿನ ಮಧ್ಯೆ ಭೀಕರ ಅಪಘಾತ: ಇಬ್ಬರ ದುರ್ಮರಣ
ಬಾಗಲಕೋಟೆ(Bagalkot) ಜಿಲ್ಲೆಯ ಭಗವತಿ ಗ್ರಾಮದಲ್ಲಿ ನಿಧನರಾದವರ ಅಂತ್ಯಕ್ರಿಯೆಗೆ ತಾಲೂಕಿನ ಡ.ಸ. ಹಡಗಲಿ ಗ್ರಾಮದಿಂದ ಐವರು ಕಾರಿನಲ್ಲಿ ತೆರಳಿದ್ದರು. ಅಂತ್ಯಸಂಸ್ಕಾರ ನೆರವೇರಿಸಿ ವಾಪಾಸ್ ಬರುತ್ತಿದ್ದಾಗ ಭಾನುವಾರ ರಾತ್ರಿ 7.30ರ ಸುಮಾರಿಗೆ ಎದುರಿನಿಂದ ಗಾಡಿಯೊಂದು ಡಿಕ್ಕಿ ಹೊಡೆದಿದೆ. ಚಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡವರಲ್ಲಿ ಒಬ್ಬರು ಗದಗ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಮೃತರ ಶರೀರಗಳನ್ನು ಗ್ರಾಮದೊಳಕ್ಕೆ ತರುತ್ತಿದ್ದಂತೆ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಮಣ್ಣು ಕೊಡಲು ಹೊದವರೇ ಮಣ್ಣು ಪಾಲಾದರಲ್ಲ ದೇವರೇ, ಈ ರೀತಿ ಮಾಡೊದು ನ್ಯಾಯವೇ ಎಂದು ಗೋಗರೆದು ಕಣ್ಣೀರು ಹಾಕುವ ದೃಶ್ಯ ಮನಕಲಕುವಂತಿತ್ತು.
ದ್ವಿಚಕ್ರ ವಾಹನ ಅಪಘಾತ: ಸವಾರಗೆ ಗಾಯ
ಕಾರ್ಕಳ(Karkala): ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ದನ ಅಡ್ಡು ಬಂದು ವಾಹನ ಬಿದ್ದು, ಹಿಂಬದಿ ಸವಾರನ ಬಲಗಾಲಿಗೆ ಪೆಟ್ಟಾದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ಸೇತುವೆ ಬಳಿ ಭಾನುವಾರ ರಾತ್ರಿ ನಡೆದಿದೆ. ಸವಾರ ನಿತೇಶ ಮತ್ತು ಹಿಂಬದಿ ಸವಾರ ಶಿವಾನಂದ ಕುಮಾರ್ ತಮ್ಮ ದ್ವಿಚಕ್ರ ವಾಹನದಲ್ಲಿ ಜ.30ರ ರಾತ್ರಿ 10 ಘಂಟೆಗೆ ಕಾರ್ಕಳದಿಂದ ತೆಳ್ಳಾರಿನ ಕಡೆಗೆ ಸಾಗುತ್ತಿದ್ದಾಗ ದನ ಅಡ್ಡ ಬಂದಿದ್ದು, ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಬೈಕ್ ರಸ್ತೆಗೆ ಎಸೆಯಲ್ಪಟ್ಟಿದ್ದು ಹಿಂಬದಿ ಸವಾರ ಶಿವಾನಂದ ಕುಮಾರ್ ಅವರ ಬಲಕಾಲಿನ ಮೂಳೆ ಮುರಿತವಾಗಿದ್ದು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್, ಲಾರಿ, ಕಾರು ನಡುವೆ ಸರಣಿ ಅಪಘಾತ
ದಾಬಸ್‌ಪೇಟೆ: ಸೋಂಪುರ ಹೋಬಳಿಯ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಐರಾವತ ಬಸ್, ಲಾರಿ ಹಾಗೂ ಕಾರಿನ ನಡುವೆ ಸರಣಿ ಅಪಘಾತ ಜ.30 ರಂದು ನಡೆದಿತ್ತು.
ಮಧ್ಯಾಹ್ನ 2ರ ವೇಳೆಗೆ ಎಡೇಹಳ್ಳಿ ಬಳಿ ರಸ್ತೆಬದಿಗೆ ನಿಂತಿದ್ದ ಸಕ್ಕರೆ ಮೂಟೆಗಳ ತುಂಬಿದ್ದ ಲಾರಿಗೆ ಹಿಂಬದಿಯಿಂದ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಮುಂಭಾಗ ಪೂರ್ಣವಾಗಿ ಜಖಂಗೊಂಡಿದ್ದು ಅದೃಷ್ಟವಷಾತ್ ಬಸ್‌ನಲ್ಲಿದ್ದವರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಬಸ್‌ಗೆ ಹಿಂಬಂದಿಯಿಂದ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟಗಾಯಗಳಾಗಿದ್ದವು.
ಸರಣಿ ಅಪಘಾತದಿಂದ 2 ಗಂಟೆಗಿಂತಲೂ ಹೆಚ್ಚು ಕಾಲ ಸುಮಾರು 1 ಕಿ.ಮೀ.ಗಿಂತಲೂ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿತ್ತು.
Uttara Kannada: ಕುಮಟಾ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಹೆಚ್ಚಿದ ಆತಂಕ
ಆಟೋಗೆ ಬಸ್ಸು ಡಿಕ್ಕಿ: ಚಾಲಕ ಪವಾಡಸದೃಶ ಪಾರು
ಮೂಲ್ಕಿ(Mulki): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂಲ್ಕಿಯ ಕಾರ್ನಾಡ್ ಬೈಪಾಸ್ ಬಳಿ ಆಟೋಗೆ ಸರ್ವಿಸ್ ಬಸ್ ಡಿಕ್ಕಿಯಾಗಿ ಆಟೋ ಚಾಲಕ ಸಹಿತ ಪ್ರಯಾಣಿಕ ಪವಾಡಸದೃಶ ಪಾರಾದ ಘಟನೆ ಜ.30 ರಂದು ನಡೆದಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಜಮಾಡಿ ಕಡೆಯಿಂದ ಸುರತ್ಕಲ್ ಕಡೆಗೆ ಕೆಲಸದ ನಿಮಿತ್ತ ಹೋಗುತ್ತಿದ್ದ ಆಟೋಗೆ ಕಾರ್ನಾಡು ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ ಮಂಗಳೂರಿನಿಂದ ಬಂದು ಕಾರ್ನಾಡ್ ಒಳಪೇಟೆಗೆ ತಿರುಗುತ್ತಿದ್ದ ಬಸ್ ಡಿಕ್ಕಿ ಹೊಡೆದಿತ್ತು.
ಅಪಘಾತದ ರಭಸಕ್ಕೆ ಆಟೋ ಪಲ್ಟಿಯಾಗಿದ್ದು ಆಟೋದಲ್ಲಿದ್ದ ಚಾಲಕ ಹೆಜಮಾಡಿ ನಿವಾಸಿ ಜಯಕರ್ ಸಹಿತ ಕಟ್ಟಡ ಕಾರ್ಮಿಕ ಪವಾಡ ಸದೃಶ ಪಾರಾಗಿದ್ದರು. ಆಟೋದಲ್ಲಿ ಕಟ್ಟಡದ ಕೆಲಸಕ್ಕೆಂದು ಕೊಂಡೊಯ್ಯುತ್ತಿದ್ದ ಪೈಂಟ್ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿದೆ. ಅಟೋಗೆ ಹೆಚ್ಚಿನ ಹಾನಿಯಾಗಿದ್ದು ಸುಮಾರು ಹದಿನೈದು ಸಾವಿರ ರುಪಾಯಿ ಮೌಲ್ಯ ನಷ್ಟವಾಗಿದ್ದು ಮಂಗಳೂರು ಉತ್ತರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.