ಹಾಸನ: ಪರಿಹಾರ ಕೇಂದ್ರ ಬಂದ್‌; 8 ಕೇಂದ್ರದಲ್ಲಿ 1,434 ನಿರಾಶ್ರಿತರು

By Kannadaprabha NewsFirst Published Aug 15, 2019, 12:21 PM IST
Highlights

ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿದ್ದ 11ಪರಿಹಾರ ಕೇಂದ್ರಗಳಲ್ಲಿ ಜನರಿಲ್ಲದೆ ಮೂರು ಪರಿಹಾರ ಕೇಂದ್ರಗಳನ್ನು ಮುಚ್ಚಲಾಗಿದೆ. ರಾಮನಾಥಪುರದ ಪಟ್ಟಾಭಿರಾಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಹಾಸನ ನಗರದ ಚಿಪ್ಪಿನಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಗೊರೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರಿದಿದ್ದ ಪರಿಹಾರ ಕೇಂದ್ರಗಳನ್ನು ನಿರಾಶ್ರಿತರಿಲ್ಲದೆ ಮುಚ್ಚಲಾಗಿದೆ.

ಹಾಸನ(ಆ.15): ಸಂತ್ರಸ್ತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ತೆರೆದಿದ್ದ 11 ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರಿಲ್ಲದ ಕಾರಣ 3 ಪರಿಹಾರ ಕೇಂದ್ರಗಳನ್ನು ಮುಚ್ಚಲಾಗಿದೆ.

ಅರಕಲಗೂಡು ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದಂತೆ ರಾಮನಾಥಪುರದ ಪಟ್ಟಾಭಿರಾಮ ಬಾಲಕಿಯರ ಪದವಿ ಪೂರ್ವ ಕಾಲೇಜು, ಹಾಸನ ನಗರದ ಚಿಪ್ಪಿನಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಗೊರೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ತೆರಿದಿದ್ದ ಪರಿಹಾರ ಕೇಂದ್ರಗಳನ್ನು ನಿರಾಶ್ರಿತರಿಲ್ಲದೆ ಮುಚ್ಚಲಾಗಿದೆ. ಜಿಲ್ಲೆಯ ಇನ್ನುಳಿದ 8 ಪರಿಹಾರ ಕೇಂದ್ರಗಳಲ್ಲಿ ಒಟ್ಟು 1,434 ನಿರಾಶ್ರಿತರು ಇದ್ದಾರೆ.

ವಿವರ ಇಂತಿದೆ:

ಸಕಲೇಶಪುರ ತಾಲೂಕಿನ ವ್ಯಾಪ್ತಿಯಲ್ಲಿ ಪಟ್ಟಣದ ಪುರಸಭೆ ಭವನ (ವಿಲ್ಸನ್‌ 9448156262), ಆನೆಮಹಲ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಪ್ರವೀಣ್‌ 9740806197, 7975828818), ಯಸಳೂರಿನ ಸ್ವಂತಲಾಪುರದ ಹಿಂದುಳಿದ ವರ್ಗದ ವಸತಿ ನಿಲಯ (ಅಸ್ಲಂ ಪಾಷ 9482118220)ದಲ್ಲಿ ಪರಿಹಾರ ಕೇಂದ್ರಗಳಲ್ಲಿ ಒಟ್ಟು 137 ನಿರಾಶ್ರಿತರು ಇದ್ದಾರೆ.

ಕಾರು ಬೈಕ್ ಡಿಕ್ಕಿ: ಸವಾರರು ಸ್ಥಳದಲ್ಲೇ ಸಾವು

ಹೊಳೆನರಸೀಪುರ ಪಟ್ಟಣದ ಅಂಬೇಡ್ಕರ್‌ ಭವನ (ಹರೀಶ್‌ 9902737134), ಟಿಪ್ಪು ಶಾಲೆ, ಪಟ್ಟಣದ ಶಿಕ್ಷಕರ ಭವನದಲ್ಲಿ ತೆರೆದಿರುವ ಪರಿಹಾರ ಕೇಂದ್ರಗಳಲ್ಲಿ 900 ಮಂದಿ ನಿರಾಶ್ರಿತರು ಇದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೇಲೂರು ತಾಲೂಕಿನ ಹಗರೆ ಗ್ರಾಮದ ಯಮಸಂಧಿ ಹೊಟ್ಟಪ್ಪಗೌಡ ಸಮುದಾಯ ಭವನ (ಹೇಮಂತ್‌ ಕುಮಾರ್‌ 9588232915), ಬಕ್ರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ (ಅಂಕೇಗೌಡ 9008922605)ಗಳ ಪರಿಹಾರ ಕೇಂದ್ರಗಳಲ್ಲಿ 400 ಮಂದಿ ನಿರಾಶ್ರಿತರು ಇದ್ದಾರೆ.

click me!