
ಬಾದಾಮಿ(ಆ.23): ನದಿಯಲ್ಲಿ ಕಾರು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಜಕಿನ ಶಿವಯೋಗ ಮಂದಿರದಲ್ಲಿ ಭಾನುವಾರ ನಡೆದಿದೆ.
ವಿಶ್ವನಾಥ್ ಮಾವಿನಮರದ (40), ಶ್ರೀದೇವಿ (32) ಹಾಗೂ ನಂದಿನಿ (12) ಮೃತರು. ಮೃತರು ಮೂಲತಃ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾಗಿದ್ದು, ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದರು.
ಯಾದಗಿರಿ: ಚಿಕಿತ್ಸೆ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ
ಭಾನುವಾರ ಉಪಹಾರ ಸೇವಿಸಲು ಶಿವಯೋಗ ಮಂದಿರ ಮಲಪ್ರಭಾ ನದಿ ದಡದಲ್ಲಿ ಕೂತಿದ್ದರು. ನಂದಿನಿ ನದಿಯಲ್ಲಿ ಕೈ ತೊಳೆಯಲು ಹೋಗಿ, ಕಾಲು ಜಾರಿ ಬಿದ್ದಿದ್ದಾಳೆ. ಅವಳ ರಕ್ಷಿಸಲು ತಂದೆ ತಾಯಿ ನದಿಗೆ ಹಾರಿದ್ದಾರೆ.