ಕಾಣೆಯಾಗಿದ್ದ ತಂಗಿ ರಕ್ಷಾಬಂಧನ ದಿನವೇ ಪತ್ತೆ, ರಾಖಿ ಕಟ್ಟಿಸಿಕೊಂಡು ಮನೆಗೆ ಬರಮಾಡಿಕೊಂಡ ಅಣ್ಣ

By Suvarna NewsFirst Published Aug 22, 2021, 5:49 PM IST
Highlights

* ಕಾಣೆಯಾಗಿದ್ದ ತಂಗಿ ರಕ್ಷಾಬಂಧನ ದಿನವೇ ಪತ್ತೆ
* ರಾಖಿ ಕಟ್ಟಿಸಿಕೊಂಡು ಮನೆಗೆ ಬರಮಾಡಿಕೊಂಡ ಅಣ್ಣ
* ಬೆಂಗಳೂರಿನಲ್ಲಿ ನಡೆದ ಈ ಅಪರೂಪದ ಘಟನೆ

ಬೆಂಗಳೂರು, (ಆ.22): ಸೋದರಿ ತನ್ನ ಸೋದರನಿಗೆ ನೀಡುವ ಬೆಂಬಲ, ಸೋದರ ತನ್ನ ಸೋದರಿಯನ್ನು ನೋಡಿಕೊಳ್ಳುವ ಪರಿ ಎಲ್ಲವೂ ಅಪ್ಯಾಯಮಾನ. ಸೋದರ ಸೋದರಿಯ ಈ ಪ್ರೀತಿಯ ಪ್ರತೀಕವೇ ರಕ್ಷಾ ಬಂಧನ ಹಬ್ಬ.

ಈ ಪವಿತ್ರ ರಕ್ಷಾ ಬಂಧನ ಹಬ್ಬದ ದಿನವಾದ ಇಂದು (ಆ.22)  ಕಾಣೆಯಾಗಿದ್ದ ತಂಗಿಯನ್ನು ಪತ್ತೆಮಾಡಿದ ಬೆಂಗಳೂರು ಪೊಲೀಸರು ರಕ್ಷಾ ಬಂಧನದಂದೇ ಅಣ್ಣನಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಅಮೃತಹಳ್ಳಿ ಪೊಲೀಸರೇ ರಕ್ಷಾ ಬಂಧನದಂದು ಕಾಣೆಯಾಗಿದ್ದ ತಂಗಿಯನ್ನು ಅಣ್ಣನಿಗೆ ಹುಡುಕಿಕೊಟ್ಟಿದ್ದಾರೆ. ಪೊಲೀಸ್ ಠಾಣೆಯಲ್ಲೇ ರಾಖಿ ಕಟ್ಟುವ ಮೂಲಕ ತನ್ನ ತಂಗಿಯನ್ನು ಅಣ್ಣ ಮನೆಗೆ ಬರಮಾಡಿಕೊಂಡಿದ್ದಾನೆ.  

ಅಣ್ಣ-ತಂಗಿಯರ ಪವಿತ್ರ ರಕ್ಷಾ ಬಂಧನ: ಚೀನಾ ರಾಖಿಗಳಿಂದ ದೂರವಿರಿ!

ಇದೇ ತಿಂಗಳ 6 ರಂದು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಟರ್ ಆಸ್ಪತ್ರೆಯಿಂದ ರಿಮಿ ಅಡ್ಡಿ ಕಾಣೆಯಾಗಿದ್ದಳು.  ಬಳಿಕ ಸಹೋದರ ವಿವೇಕ  ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಬಳಿಕ ಆಸ್ಪತ್ರೆ ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು, ಈ ವೇಳೆ ರಿಮಿ ಅಡ್ಡಿ ಬೈಕ್ ನಲ್ಲಿ ಹೋಗೋದು ಪತ್ತೆಯಾಗಿದೆ. ನಂತರ ವೀರಣ್ಣನಪಾಳ್ಯದಲ್ಲಿ ಬೈಕ್ ನಲ್ಲಿ ಇಳಿದಿರುವ ಸಿಸಿಟಿವಿ ಲಭ್ಯವಾಗಿದ್ದು, ಆ ಆಧಾರದ ಹುಡುಕುತ್ತಾ ಹೋಗುವ ಸಂದರ್ಭದಲ್ಲಿ ಇಂದು (ಆ.22)ರಂದು ಮಾಗಡಿ ಬಳಿ ಸಿಕ್ಕಿದ್ದಾಳೆ. 

ಪೊಲೀಸ್ ಠಾಣೆಯಲ್ಲಿ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಅಣ್ಣ ತಂಗಿಯನ್ನ ಮನೆಗೆ ಬರಮಾಡಿಕೊಂಡಿದ್ದಾನೆ. ಪೊಲೀಸರು ಠಾಣೆಯಲ್ಲೇ ಕೇಕ್ ಕತ್ತರಿಸಿ ಅಣ್ಣನ ಕೈಗೆ ರಾಖಿ ಕಟ್ಟಿಸುವ ಮೂಲಕ ಮನೆಗೆ ಕಳುಹಿಸಿದರು..

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, 50 ಕ್ಕೂ ಹೆಚ್ಚು ಆಶ್ರಮ, ಡಿಜೆಹಳ್ಳಿ, ಗೋವಿಂದಪುರ, ಕೆಜಿ ಹಳ್ಳಿ‌ ಸುತ್ತಮುತ್ತ ಸುಮಾರು 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಪೊಲಿರು  ಪರಿಶೀಲನೆ ಮಾಡಿದ್ದರು. 
 

click me!