ರೈಲ್ವೆ ಬ್ಯಾರಿಕೇಡ್‌ ಬದಲು ರೋಪ್‌ವೈರ್‌ ಬೇಲಿ ಹಾಕಲು ಚಿಂತನೆ: ಸಚಿವ ಉಮೇಶ್‌ ಕತ್ತಿ

By Govindaraj S  |  First Published Apr 8, 2022, 11:32 PM IST

ವನ್ಯಪ್ರಾಣಿಗಳು ಮತ್ತು ಮಾನವನ ಸಂಘರ್ಷಕ್ಕೆ ತೆರೆ ಎಳೆಯಲು ರೈಲ್ವೆ ಬ್ಯಾರಿಕೇಡ್‌ ಬದಲು ರೋಪ್‌ವೈರ್‌ ಬೇಲಿ ಹಾಕುವ ಚಿಂತನೆ ನಡೆದಿದೆ ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ ಕತ್ತಿ ಹೇಳಿದರು. 


ಗುಂಡ್ಲುಪೇಟೆ (ಏ.08): ವನ್ಯಪ್ರಾಣಿಗಳು ಮತ್ತು ಮಾನವನ ಸಂಘರ್ಷಕ್ಕೆ ತೆರೆ ಎಳೆಯಲು ರೈಲ್ವೆ ಬ್ಯಾರಿಕೇಡ್‌ (Railway Barricade) ಬದಲು ರೋಪ್‌ವೈರ್‌ (Rope Wire) ಬೇಲಿ ಹಾಕುವ ಚಿಂತನೆ ನಡೆದಿದೆ ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ ಕತ್ತಿ (Umesh Katti) ಹೇಳಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಮತ್ತು ಲಂಟಾನ ತೆರವು ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನ 600 ಕಿಮೀ ಪ್ರದೇಶದ ಪೈಕಿ 180 ಕಿಮೀ ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲಾಗಿದ್ದು ಪ್ರತಿ ಕಿಮೀ 1.5 ಕೋಟಿ ಖರ್ಚಾಗುತ್ತಿದೆ ಜೊತೆಗೆ ರೈಲ್ವೆ ಬ್ಯಾರಿಕೇಡ್‌ಗೆ ಕಂಬಿಗಳ ಲಭ್ಯತೆ ಇಲ್ಲದ ಕಾರಣ ಪ್ರತಿ ಕಿಮೀಗೆ 50 ಲಕ್ಷದಲ್ಲಿ ಮುಗಿವ ರೋಪ್‌ವೈರ್‌ ಬೇಲಿ ನಿರ್ಮಿಸಲಾಗುತ್ತದೆ ಎಂದರು.

ರಾಜ್ಯದಲ್ಲಿ 6500 ಆನೆಗಳು, 368 ಹುಲಿಗಳಿವೆ. ಚಿರತೆ, ಕರಡಿ ಇತರೆ ಪ್ರಾಣಿಗಳ ಇರುವಿಕೆಯೊಂದಿಗೆ ಹುಲಿ ಸಂತತಿಯಲ್ಲಿ ರಾಜ್ಯ 1ನೇ ಸ್ಥಾನಕ್ಕೇರುವ ಸಾಧ್ಯತೆ ಕಂಡು ಬಂದಿದೆ ಎಂದರು. ಮಲೆಮಹದೇಶ್ವರ ಬೆಟ್ಟವನ್ನು ಹುಲಿ ಯೋಜನೆ ವ್ಯಾಪ್ತಿಗೆ ಸೇರಿಸುವ ಮತ್ತು ಬಿಳಿಗಿರಿರಂಗನಬೆಟ್ಟದ ಬೂದಿಪಡಗದಲ್ಲಿ ಆನೆ ಶಿಬಿರ ಸ್ಥಾಪನೆ ಬಗ್ಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಬಗ್ಗೆ ಮತ್ತು ಬಂಡೀಪುರ ರಾಂಪುರ ಆನೆ ಕ್ಯಾಂಪ್‌ ನಿರ್ವಹಣೆ ಸಮರ್ಪಕವಾಗಿಲ್ಲದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಚಿವರು ಮಹದೇಶ್ವರ ಬೆಟ್ಟಈಗಾಗಲೇ ಸೂಕ್ಷ್ಮ ಪರಿಸರ ವಲಯವಾಗಿ ಘೋಷಣೆಯಾಗಿದೆ ಎಂದರು.

Tap to resize

Latest Videos

undefined

ಜೂನ್‌ ಒಳಗೆ 8 ಲಕ್ಷ ಬಿಪಿಎಲ್‌ ಕಾರ್ಡ್‌: ಸಚಿವ ಉಮೇಶ್‌ ಕತ್ತಿ

ಹುಲಿ ಯೋಜನೆಗೆ ಸೇರಿಸುವ ಪ್ರಯತ್ನ ಪರಿಶೀಲನೆಯಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಸಾಕಾನೆಗಳ ಶಿಬಿರ ಇರುವ ಕಾರಣ ಬೂದಿಪಡಗ ಆನೆ ಶಿಬಿರದ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ರಾಜ್ಯದಲ್ಲಿ ಅಕ್ರಮ ಪಡಿತರ ಚೀಟಿ ಪಡೆದವರ ವಿರುದ್ಧ ಕೈಗೊಂಡ ಕ್ರಮ, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, 13 ಲಕ್ಷ ಅಕ್ರಮ ಪಡಿತರ ಚೀಟಿ ಹಿಂಪಡೆದು ಜಿಲ್ಲಾವಾರು ಅರ್ಹರಿಗೆ ಅಗತ್ಯಾನುಸಾರ ಪಡಿತರ ಚೀಟಿ ನೀಡಲಾಗಿದೆ ಎಂದರು. ಆಹಾರ ಭದ್ರತಾ ಕಾಯಿದೆಯಡಿ ಕೇಂದ್ರ ಸರ್ಕಾರ ಮತ್ತು ರಾಜ್ಯದ ಪಾಲು ಸೇರಿ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಪಡಿತರ ವಿತರಣೆ ಇನ್ನೂ 6 ತಿಂಗಳು ಮುಂದುವರೆಯುತ್ತದೆ. 

ಯಾರು ಅಕ್ಕಿಯನ್ನು ಮಾರಾಟ ಮಾಡಬಾರದು ಎಂದರು. ಬೆಲೆ ಏರಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಇದು ವಿಶ್ವದ ಸಮಸ್ಯೆ ಸುಮ್ಮನೇ ಆರೋಪ ಮಾಡುವುದು ಸರಿಯಲ್ಲ ಎಂದರು. ಮೈಸೂರು ವೃತ್ತದ ಸಿಎಫ್‌ ಮಾಲತಿ ಪ್ರಿಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಹುಲಿ ಯೋಜನೆ ನಿರ್ದೇಶಕ ರಮೇಶ್‌ಕುಮಾರ್‌, ಎಸಿಎಫ್‌ಗಳಾದ ಕೆ.ಪರಮೇಶ್‌, ನವೀನ್‌, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಯೋಗಾನಂದ್‌, ವಿಶೇಷಾಧಿಕಾರಿ ಕಾ. ರಾಮೇಶ್ವರಪ್ಪ ಇದ್ದರು.

ಹೆಚ್ಚುತ್ತಿರುವ ಹುಲಿ ಸಂತತಿ, ನಂ.1 ಆಗುವತ್ತ ಕರ್ನಾಟಕ: ರಾಜ್ಯದಲ್ಲಿ ಹುಲಿಯ ಸಂಖ್ಯೆ ಹೆಚ್ಚಾಗಿದ್ದು, ದೇಶಕ್ಕೆ ಮತ್ತೆ ಕರ್ನಾಟಕವೇ ನಂಬರ್‌ ಒನ್‌ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್‌ಕತ್ತಿ ಹೇಳಿದರು. ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 6052 ಆನೆಗಳು, 524 ಹುಲಿಗಳಿವೆ. ಚಿರತೆ, ಕರಡಿ ಇತರೆ ಪ್ರಾಣಿಗಳ ಇರುವಿಕೆಯೊಂದಿಗೆ ಹುಲಿ ಸಂತತಿಯಲ್ಲಿ ರಾಜ್ಯ 1ನೇ ಸ್ಥಾನಕ್ಕೇರುವ ಸಾಧ್ಯತೆ ಕಂಡು ಬಂದಿದೆ ಎಂದರು. ಇನ್ನು ವನ್ಯಪ್ರಾಣಿಗಳು ಮತ್ತು ಮಾನವ ಸಂಘರ್ಷಕ್ಕೆ ತೆರೆ ಎಳೆಯಲು ರೈಲ್ವೆ ಬ್ಯಾರಿಕೇಡ್‌ ಬದಲು ರೋಪ್‌ವೈರ್‌ ಬೇಲಿ ಹಾಕುವ ಚಿಂತನೆ ನಡೆದಿದೆ. ರೈಲ್ವೆ ಬ್ಯಾರಿಕೇಡ್‌ ಅಳವಡಿಕೆಗೆ ಪ್ರತಿ ಕಿ.ಮೀ.ಗೆ .1.5 ಕೋಟಿ ಖರ್ಚಾಗುತ್ತಿದೆ. ಪ್ರತಿ ಕಿಮೀಗೆ 50 ಲಕ್ಷದಲ್ಲಿ ಮುಗಿಯುವ ರೋಪ್‌ವೈರ್‌ ಬೇಲಿ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

Chikkodi: ಆಹಾರ ಸಚಿವ ಉಮೇಶ್ ಕತ್ತಿ ತವರಲ್ಲೇ ಊಟಕ್ಕಾಗಿ ಮಕ್ಕಳ ಪರದಾಟ!

ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಾಭಿವೃದ್ಧಿಗೆ ಕ್ರಮ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಹೆಚ್ಚು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ್‌ ವಿ. ಕತ್ತಿ ಹೇಳಿದರು. ಗುಂಡ್ಲುಪೇಟೆಯ ಬಂಡಿಪುರದಲ್ಲಿ ಹುಲಿ ಸಂರಕ್ಷಿತಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬಂಡೀಪುರ ಅರಣ್ಯದಲ್ಲಿ ಅಭಿವೃದ್ಧಿ ಕೆಲಸಗಳಾದ ಚೆಕ್‌ ಡ್ಯಾಂ ನಿರ್ಮಾಣ, ಲಾಂಟಾನ ತೆರವು ಸೇರಿದಂತೆ ಇತರೆ ಕಾರ್ಯಗಳು ಪ್ರಗತಿಯಲ್ಲಿದ್ದು, ಪರಿಶೀಲಿಸಿದ್ದೇನೆ. 

ಕೊರೋನಾ ಕಾರಣ ಬಿಳಿಗಿರಿರಂಗನಬೆಟ್ಟಹುಲಿ ಸಂರಕ್ಷಿತಾರಣ್ಯದ ಬೂದಿಪಡಗದಲ್ಲಿ ಆನೆ ಶಿಬಿರ ನಿರ್ಮಾಣಕ್ಕೆ ಸಾಧ್ಯವಾಗಲಿಲ್ಲ. ಆನೆ ಶಿಬಿರ ಬಜೆಟ್‌ನಲ್ಲಿ ಘೋಷಣೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗಲಿದೆ ಎಂದು ಸಚಿವರು ಹೇಳಿದರು. ಹುಲಿ ಸಂರಕ್ಷಣೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಎಲ್ಲಾ ಸಂರಕ್ಷಿತಾರಣ್ಯಗಳಲ್ಲಿ ಒಟ್ಟು 6.800 ಆನೆಗಳು, 560 ಹುಲಿಗಳು, 400 ಚಿರತೆಗಳಿವೆ. ರಾಜ್ಯ ಅರಣ್ಯ, ಪ್ರಾಣಿ ಸಂಕುಲದಿಂದ ಸಮೃದ್ಧವಾಗಿದೆ ಎಂದು ಸಚಿವರು ಹೇಳಿದರು.

click me!