ಲೋಕಕಲ್ಯಾಣಾರ್ಥವಾಗಿ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್ ಹಿಂದು ಶೋಭಾಯಾತ್ರೆ, , ಶ್ರೀರಾಮ ಪಟ್ಟಾಭಿಷೇಕ, ಶ್ರೀರಾಮ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್
ಕೋಲಾರ(ಎ.8): ಇತ್ತೀಚೆಗೆ ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ (Hindu muslim) ನಡುವೆ ವೈಮನಸ್ಯ ಸೃಷ್ಟಿಯಸುವಂತೆ ಬೆಳವಣಿಗೆಗಳು ನಡೆಯುತ್ತಲೇ ಇವೆ, ಈ ನಡುವೆ ಲೋಕಕಲ್ಯಾಣಾರ್ಥವಾಗಿ ಕೋಲಾರ (Kolara) ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ಶ್ರೀರಾಮನವಮಿ ಅಂಗವಾಗಿ ಬೃಹತ್ ಹಿಂದು ಶೋಭಾಯಾತ್ರೆ (sri rama shobha yatra), ಹಾಗೂ ಶ್ರೀರಾಮ ಪಟ್ಟಾಭಿಷೇಕ (sri rama pattabhisheka), ಶ್ರೀರಾಮ ಕಲ್ಯಾಣೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ..
undefined
ಮೆರವಣಿಗೆಯಲ್ಲಿ ಬರುತ್ತಿರುವ ಶ್ರೀರಾಮಚಂದ್ರ ಸ್ವಾಮಿಯ ಬೃಹತ್ ಮೂರ್ತಿ, ಶೋಭಾಯಾತ್ರೆಯಲ್ಲಿ ಹಾಡಿಗೆ ಕುಣಿದು ಕುಪ್ಪಳಿಸುತ್ತಿರುವ ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರು, ಶೋಭಾಯಾತ್ರೆಗೆ ರಸ್ತೆಯ ಅಕ್ಕಪಕ್ಕ ನಿಂತಿರುವ ಜನರಿಂದ ಹೂವಿನ ಸುರಿಮಳೆ ಇಂಥಾದೊಂದು ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ. ಮುಳಬಾಗಿಲು ತಾಲ್ಲೂಕು ಆವನಿ ಗ್ರಾಮವನ್ನು ಆವಂತಿಕಾ ಕ್ಷೇತ್ರ ಎಂದು ಕರೆಯಲಾಗುತ್ತದೆ, ತ್ರೇತಯುಗದಲ್ಲಿ ಇದು ವಾಲ್ಮಿಖಿ ಆಶ್ರವಿತ್ತು, ನಂತರ ಸೀತಾಮಾತೆ ವನವಾಸಕ್ಕೆ ಬಂದಾಗ ಲವಕುಶರ ಜನನ ಇಲ್ಲೇ ಅಗಿರುವುದು ಅನ್ನೋ ಐತಿಹ್ಯ ಕೂಡಾ ಇದೆ.
Hubballi ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್!
ಈ ಹಿನ್ನೆಲೆಯಲ್ಲಿ ಲವಕುಶ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶ್ರೀರಾಮ ನವಮಿ ಅಂಗವಾಗಿ ನಾಲ್ಕು ದಿನಗಳ ಕಾಲ ಅದ್ದೂರಿ ಶ್ರೀರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿದ ಇಂದು ಮೊದಲ ದಿನ ಶೋಭಾಯಾತ್ರೆ,ನಾಳೆ ಶ್ರೀರಾಮನಿಗೆ ಅಯೋಧ್ಯೆ ಸರಯೂ ನದಿಯಿಂದ ತಂದಿರುವ ನೀರಿನಿಂದ ಅಭಿಷೇಕ, ಭಾನುವಾರ ಶ್ರೀರಾಮ ಕಲ್ಯಾಣೋತ್ಸವ ಹಾಗೂ ಸೋಮವಾರ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಮೂಲಕ ಮುಳಬಾಗಿಲಿನಲ್ಲಿ ಅದರಲ್ಲೂ ಲಕಕುಶರ ಜನ್ಮ ಸ್ಥಳ ಆವಂದಿಕಾ ಕ್ಷೇತ್ರದಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ನಡೆಯಲಿವೆ.
ಇನ್ನು ಇಂದು ನಡೆದ ಹಿಂದೂ ಶೋಭಾಯಾತ್ರೆ ಹಾಗೂ ಬೃಹತ್ ಶ್ರೀರಾಮ ಮೂರ್ತಿಯ ಮೆರವಣಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾವಹಿಸಿದ್ದರು, ಮುಳಬಾಗಿಲು ಪಟ್ಟಣದ ಶಿವಕೇಶವ ನಗರದಿಂದ ಆರಂಭವಾದ ಶ್ರೀರಾಮ ಮೂರ್ತಿಯ ಮೆರವಣಿಗೆ ಹಾಗೂ ಶೋಭಾಯಾತ್ರೆ ಮುಳಬಾಗಿಲು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು, ಶೋಭಾಯಾತ್ರೆಯಲ್ಲಿ ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು, ಸಾವಿರಾರು ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಕುಣಿದು ಕುಪ್ಪಣಿಸಿದರು, ಅಲ್ಲದೆ ಶೋಭಾಯಾತ್ರೆಯುದ್ದಕ್ಕೂ ಜನರು ಹೂವಿನ ಸುರಿಮಳೆ ಸುರಿಸಿದರು.
Chikkamagaluru : ಜನರ ಪಾಲಿಗೆ ದೇವರೇ ಇಲ್ಲಿ ಶಾಪ!
ಜೊತೆಗೆ ಶೋಭಾಯಾತ್ರೆಯಲ್ಲಿ ಮಹಿಳೆಯರು ಹೆಜ್ಜೆ ಹಾಕಿದರು, ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ ದೇಶದ ಮೇಲೆ ಭಕ್ತಿರುವವರಿಗ ಸದಾ ನಮ್ಮ ಬೆಂಬಲ ಇರುತ್ತದೆ, ಅವರು ಯಾವುದೇ ಧರ್ಮದವರಿರಲಿ, ಯಾವುದೇ ಜಾತಿ ಇರಲಿ ಅವರಿಗೆ ದೇಶದ ಮೇಲೆ ಭಕ್ತಿ ಇರಬೇಕು ಅಂತಹವರಿಗೆ ಸದಾ ನಮ್ಮ ಬೆಂಬಲವಿರುತ್ತದೆ ಎಂದರು.
ಒಟ್ಟಾರೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮೇಲಿಂದ ಮೇಲೆ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ವೈಮನಸ್ಯ ಮೂಡುವ ಘಟನೆಗಳು ನಡೆಯುತ್ತಿದ್ದರೂ ಕೂಡಾ ಇಂಥ ಕಾರ್ಯಕ್ರಮಗಳ ಮೂಲಕ ಹಿಂದೂಗಳನ್ನು ಒಗ್ಗೂಡಿಸು ಜೊತೆಗೆ ಜನರಲ್ಲಿ ದೇಶಭಕ್ತಿ ಯನ್ನು ತುಂಬು ಸಲುವಾಗಿ ಇಂಥ ಕಾರ್ಯಕ್ರಮಗಳು ಸಹಾಯಕವಾಗಲಿದೆ ಅನ್ನೋದು ಆಯೋಜಕರ ಮಾತು.
ಸಿದ್ದರಾಮಯ್ಯನನ್ನು ನಿಮಾನ್ಸ್ ಗೆ ಸೇರಿಸಿದರೆ ಕಾಂಗ್ರೆಸ್ ಉಳಿಯುತ್ತೆ Shobha Karandlaje