Hubballi ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್‌!

Published : Apr 08, 2022, 08:09 PM ISTUpdated : Apr 08, 2022, 08:14 PM IST
Hubballi ಗೊತ್ತಿಲ್ಲದೆ ಪೊಲೀಸರಿಂದ ಅಂತ್ಯಸಂಸ್ಕಾರ, ಗೊತ್ತಾದಾಗ ಮತ್ತೆ ಮಣ್ಣಾದ ಮುಜಾಫರ್‌!

ಸಾರಾಂಶ

ಹುಬ್ಬಳ್ಳಿಯಲ್ಲಿ ವಾರಸುದಾರರಿಲ್ಲದೆ ಪತ್ತೆಯಾದ ಶವವನ್ನು ಪೊಲೀಸರು ಅಂತ್ಯಸಂಸ್ಕಾರ  ಮಾಡಿ‌ ಮುಗಿಸಿದ್ರು. ಆದ್ರೇ ವಾರಸುದಾರ ಪತ್ತೆಯಾದ ಬಳಿಕ ಹೂತ ಶವವನ್ನು ಹೊರ ತೆಗೆದು  ಸಂಬಂಧಿಕರು ಮತ್ತೊಮ್ಮೆ ಅಂತ್ಯಸಂಸ್ಕಾರ  ನೆರವೇರಿಸಿದರು.

ವರದಿ: ಗುರುರಾಜ ಹೂಗಾರ, ಏಷ್ಯಾನೆಟ್ ಸುವರ್ಣನ್ಯೂಸ್

ಹುಬ್ಬಳ್ಳಿ,(ಎ.8): ಹುಬ್ಬಳ್ಳಿಯ (Hubballi) ಉಣಕಲ್‌ ಕೆರೆಯಲ್ಲಿ (Unakal Lake) ಏಪ್ರಿಲ್ 5 ರಂದು ಪತ್ತೆಯಾಗಿದ್ದು ವಾರಸುದಾರರಿಲ್ಲದೆ ಶವವನ್ನು ಪತ್ತೆಯಾದ ಪೊಲೀಸರ ಅಂತ್ಯಸಂಸ್ಕಾರ ಮಾಡಿ‌ ಮುಗಿಸಿದ್ರು. ಆದ್ರೇ ವಾರಸುದಾರ ಪತ್ತೆಯಾದ ಬಳಿಕ ಇಂದು ಮತ್ತೆ ಹೂತ ಶವವನ್ನು ಹೊರ ತೆಗೆದು ಸಂಬಂಧಿಕರಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಸಂಬಂಧಿಕರು ಮತ್ತೊಮ್ಮೆ ಅಂತ್ಯಸಂಸ್ಕಾರದ ನೆರವೇರಿಸಿದ ಪ್ರಸಂಗ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಉಣಕಲ್ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದ ಶವದ ವಾರಸುದಾರರು ತಕ್ಷಣವೇ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಶವವನ್ನ ರುದ್ರಭೂಮಿಯಲ್ಲಿ ಹೂಳಿಸಿದ್ರು, ಅದನ್ನೀಗ ಹೊರತೆಗೆದು ಖಬರಸ್ಥಾನಕ್ಕೆ ಶಿಪ್ಟ್ ಮಾಡಲಾಗಿದೆ. ಹೀಗೆ ಎರಡೆರಡು ಬಾರಿ ಮಣ್ಣಾಗಿದ್ದು  ಹುಬ್ಬಳ್ಳಿಯ ಪೆಂಡಾರಗಲ್ಲಿ ಮುಜಾಫರ್ ಕಲಾದಗಿ (31). ಮನೆಯಿಂದ ಏಕಾಏಕಿ ನಾಪತ್ತೆ ಆಗಿದ್ದ ಮುಜಾಫರ್ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ, ಏಪ್ರಿಲ್  5 ರಂದು ಮುಜಾಫರ್ ಶವ ಪತ್ತೆಯಾಗಿತ್ತು.  ಆದರೆ, ಈ ವಿಷಯ ಪೊಲೀಸರಿಗೆ ಗೊತ್ತಾಗದ ಹಿನ್ನೆಲೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಬಿಡನಾಳದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿಸಿದ್ದರು.

ಯಾದಗಿರಿಯಲ್ಲಿ ಹಿಂದೂಗಳ ನೇತೃತ್ವದಲ್ಲಿಯೇ ಜಮಾಲುದ್ಧಿನ್ ಜಾತ್ರೆ

ಈ ಕುರಿತಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿಕೊಳ್ಳಲಾಗಿತ್ತು. ಪಾರ್ಥಿವ ಶರೀರವು ಶವಾಗಾರದಲ್ಲಿರಿಸುವ ಸ್ಥಿತಿಯಲ್ಲಿ ಇಲ್ಲದ ಕಾರಣ, ಪೊಲೀಸರಹ ಪಾಲಿಕೆ ಸಹಕಾರ ಪಡೆದು ಅಂತ್ಯಕ್ರಿಯೆ ನೆರವೇರಿಸಿದ್ದರು.

Chikkamagaluru : ಜನರ ಪಾಲಿಗೆ ದೇವರೇ ಇಲ್ಲಿ ಶಾಪ!

ಅಂತ್ಯಕ್ರಿಯೆ ನಡೆದ ಬಳಿಕ ರಾತ್ರಿ ಬೈಕ್ ಹಾಗೂ ಇತರೆ ವಸ್ತುಗಳನ್ನು ಮೃತನ ತಂದೆ  ಅಬ್ದುಲ್ ಮುನಾಫ್ ಕಲಾದಗಿ ಅವರು   ಗುರುತಿಸಿ, ಪಾರ್ಥಿವ ಶರೀರ ತಮ್ಮ ಮಗನದೆಂದು ಖಚಿತ ಪಡಿಸಿ, ಮಗನ ಶವ ನೀಡಿದರೆ ಶವವನ್ನು ಇಸ್ಲಾಂ ಧಾರ್ಮಿಕ  ಸಾಂಪ್ರದಾಯಗಳ ಪ್ರಕಾರ ಸಂಸ್ಕಾರ ಮಾಡುವುದಾಗಿ ಕೇಳಿಕೊಂಡಿದ್ದರಿಂದ ,  ಹೂಳಲ್ಪಟ್ಟ ಮುಜಾಫರ್ ಶವವನ್ನು ಇಂದು ಹೊರತೆಗೆದು ತಂದೆಗೆ ಹಸ್ತಾಂತರ ಮಾಡಲಾಯಿತು. ಮಗನ ಶವ ಪಡೆದ ಕುಟುಂಬಸ್ಥರು ಮುಸ್ಲಿಂ ಸಂಪ್ರದಾಯದಂತೆ ಮತ್ತೊಮ್ಮೆ ಖಬರಸ್ಥಾನದಲ್ಲಿ ಅಂತ್ಯಸಂಸ್ಕಾರದ ನೆರವೇರಿಸಿದ್ರು.

PREV
Read more Articles on
click me!

Recommended Stories

ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ
ವಧು-ವರ ಇಲ್ಲದೆ ಹುಬ್ಬಳ್ಳೀಲಿ ಆರತಕ್ಷತೆ!