ಈ ವರ್ಷ ಕರ್ನಾಟಕದಲ್ಲಿ ಹಲಾಲ್‌ ಮುಕ್ತ ದೀಪಾವಳಿ ಆಚರಣೆ: ಪ್ರಮೋದ್‌ ಮುತಾಲಿಕ್‌

By Kannadaprabha NewsFirst Published Oct 16, 2022, 8:50 AM IST
Highlights

ಹಲಾಲ್‌ ಮುಕ್ತ ದೀಪಾವಳಿ ಆಚರಣೆಗೆ ಆಂದೋಲನ, ಹಲಾಲ್‌ ವಿರುದ್ಧ ಕರಪತ್ರ, ಆನ್‌ಲೈನ್‌ ಹೋರಾಟ

ಹುಬ್ಬಳ್ಳಿ(ಅ.16):  ರಾಜ್ಯದಲ್ಲಿ ಆರೇಳು ತಿಂಗಳ ಹಿಂದೆ ಸದ್ದು ಮಾಡಿದ್ದ ಹಲಾಲ್‌ ವಿವಾದ ಇದೀಗ ಹಿಂದೂಗಳ ಪ್ರಮುಖ ಹಬ್ಬ ದೀಪಾವಳಿ ಸಮೀಸುತ್ತಿರುವಾಗ ಮತ್ತೆ ಸದ್ದು ಮಾಡುತ್ತಿದೆ. ಹಿಂದೂ ಜನಜಾಗೃತಿ ಸಮಿತಿಯಿಂದ ಈ ವರ್ಷ ಹಲಾಲ್‌ ಮುಕ್ತ ದೀಪಾವಳಿ ಆಚರಿಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ಜತೆಗೆ, ಹಲಾಲ್‌ ಕಡ್ಡಾಯ ವಿರುದ್ಧ ಆನ್‌ಲೈನ್‌ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಹಲಾಲ್‌ ಮುಕ್ತ ದೀಪಾವಳಿ ಆಚರಿಸಲಾಗುವುದು. ಹಲಾಲ್‌ ಉತ್ಪಾದನೆ ಕಡ್ಡಾಯಗೊಳಿಸುವಿಕೆ ವಿರುದ್ಧ ಆಂದೋಲನ, ಬಹಿರಂಗ ಕಾರ್ಯಕ್ರಮ, ಕರಪತ್ರ, ಆನ್‌ಲೈನ್‌ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ದೇಶಾದ್ಯಂತ ಹಲಾಲ್‌ ಉತ್ಪನ್ನ ನಿಷೇಧ ಕೋರಿ ಸುಪ್ರೀಂಗೆ ಅರ್ಜಿ

ಶಾಸೊತ್ರೕಕ್ತವಾಗಿ ಹಬ್ಬ ಆಚರಿಸಲು ಹಿಂದೂಗಳಿಂದಲೇ ಕಬ್ಬು, ಹೂ, ಹಣ್ಣು, ಪೂಜಾ ಸಾಮಗ್ರಿ ಖರೀದಿ ಮಾಡಬೇಕು. ಇದು ನಮ್ಮ ಆಗ್ರಹ. ಹಲಾಲ್‌ ದುಡ್ಡು ಭಯೋತ್ಪಾದಕರಿಗೆ ಪೂರೈಕೆಯಾಗುತ್ತಿದೆ. ಹಾಗಾಗಿ ಹಿಂದೂ ಸಮಾಜ ಹಲಾಲ್‌ ಪ್ರಮಾಣಿತ ಉತ್ಪಾದನೆ ಖರೀದಿಸದೆ ಈ ಸಲದ ದೀಪಾವಳಿಯನ್ನು ಹಿಂದೂ ಪದ್ಧತಿಯಿಂದ ‘ಹಲಾಲ್‌ ಮುಕ್ತ ದೀಪಾವಳಿ’ಯಾಗಿ ಆಚರಿಸಬೇಕು ಎಂದು ಕರೆ ನೀಡಿದರು.

ಹಲಾಲ್‌ ದೇಶದ್ರೋಹಿ ಪಿಎಫ್‌ಐ, ಎಸ್‌ಡಿಪಿಐಗೆ ಮೂಲ ಆದಾಯವಾಗಿದೆ. ಹಳೇಹುಬ್ಬಳ್ಳಿ, ಬೆಂಗಳೂರಿನ ಕೆಜಿ ಮತ್ತು ಡಿಜೆ ಹಳ್ಳಿ, ಸಿಎಎ ಪ್ರತಿಭಟನೆಗೂ ಹಲಾಲ್‌ನಿಂದ ಹಣ ಬಂದಿದೆ. ಕಾಂಗ್ರೆಸ್‌ನವರು 70 ವರ್ಷದಿಂದ ಹಲಾಲ್‌, ಮುಸ್ಲಿಮರನ್ನು ಬೆಳೆಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದ ಅವರು, ಹಲಾಲ್‌ ಉತ್ಪಾದನೆ ಕಡ್ಡಾಯಗೊಳಿಸುವಿಕೆ ವಿರುದ್ಧ ಕರ್ನಾಟಕ ಸೇರಿ ವಿವಿಧೆಡೆ ಹಿಂದೂ ಜನಜಾಗೃತಿ ಸಮಿತಿಯಿಂದ ಆಂದೋಲನ ಮಾಡಲಾಗುವುದು. ಯಾವುದೇ ಸರ್ಕಾರಿ ಅನುಮತಿಯಿಲ್ಲದೆ ನಡೆಸಲಾಗುತ್ತಿರುವ ಈ ಹಲಾಲ್‌ ಪ್ರಮಾಣೀಕೃತ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಮುತಾಲಿಕ್‌ ಒತ್ತಾಯಿಸಿದರು.

ಹಿಜಾಬ್‌ ವಿವಾದ ತಾರಕಕ್ಕೇರಿದಾಗ ಹಲಾಲ್‌ ವಿರುದ್ಧ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಹಿಂದೂಗಳು ಹಲಾಲ್‌ ಬದಲು ಜಟ್ಕಾ ಕಟ್‌ ಮಾಡಿದ ಮಾಂಸ ಖರೀದಿಸಬೇಕೆಂಬ ಆಗ್ರಹ ಕೇಳಿಬಂದಿತ್ತು.
ಹಲ್ದಿರಾಮ್‌, ಹಿಮಾಲಯ, ನೆಸ್ಲೆಯಂಥ ಕಂಪನಿಗಳು ತಮ್ಮ ಸಸ್ಯಾಹಾರಿ ಪದಾರ್ಥಗಳಿಗೆ ಹಲಾಲ್‌ ಸರ್ಟಿಫಿಕೆಟ್‌ ಪಡೆದು ಮಾರಾಟ ಮಾಡುತ್ತಿವೆ. ಹಲಾಲ್‌ ಏಕೆ ಕಡ್ಡಾಯ? ಹಿಂದೂಗಳಿಗೆ ತಿನ್ನುವ ಅಥವಾ ಖರೀದಿಯ ಸಾಂವಿಧಾನಿಕ ಸ್ವಾತಂತ್ರ್ಯ ಇಲ್ಲವೇ ಎಂದು ಮುತಾಲಿಕ್‌ ಪ್ರಶ್ನಿಸಿದರು.
 

click me!