ಈ ಚುನಾವಣೆ ನನಗೆ ಪ್ರತಿಷ್ಠೆಯಲ್ಲ, ನಂಜನಗೂಡಿನ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ. ಕ್ಷೇತ್ರದ ಮತದಾರರು ಭಾವನೆಗಳಿಗೆ ಬಲಿಯಾಗದೆ ಕಳೆದ 5 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸವನ್ನು ನೋಡಿ ಯೋಚಿಸಿ ಮತ ನೀಡಿ, ನನ್ನನ್ನು ಮರು ಆಯ್ಕೆಗೊಳಿಸಿ ಎಂದು ಶಾಸಕ ಬಿ. ಹರ್ಷವರ್ಧನ್ ಹೇಳಿದರು.
ನಂಜನಗೂಡು : ಈ ಚುನಾವಣೆ ನನಗೆ ಪ್ರತಿಷ್ಠೆಯಲ್ಲ, ನಂಜನಗೂಡಿನ ಸಮಗ್ರ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ. ಕ್ಷೇತ್ರದ ಮತದಾರರು ಭಾವನೆಗಳಿಗೆ ಬಲಿಯಾಗದೆ ಕಳೆದ 5 ವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ದಿ ಕೆಲಸವನ್ನು ನೋಡಿ ಯೋಚಿಸಿ ಮತ ನೀಡಿ, ನನ್ನನ್ನು ಮರು ಆಯ್ಕೆಗೊಳಿಸಿ ಎಂದು ಶಾಸಕ ಬಿ. ಹರ್ಷವರ್ಧನ್ ಹೇಳಿದರು.
ತಾಲೂಕಿನ ಹೊರಳವಾಡಿ ಗ್ರಾಮದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
undefined
ನಾನು ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿರುವುದಿಲ್ಲ, ಬೆಂಗಳೂರಿನಲ್ಲಿ ಕಾಲ ಕಳೆಯುತ್ತಾರೆಂದು ಪ್ರತಿಪಕ್ಷದವರು ಭಾವಿಸಿದ್ದರು. ಆದರೆ ವಾರದ 4 ದಿನಗಳೂ ಸಹ ಕ್ಷೇತ್ರದ ಜನರ ಸಂಪರ್ಕವಿಟ್ಟುಕೊಂಡು ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಕೊರೋನಾ, ಪ್ರವಾಹದ ನಡುವೆಯೂ ಸಹ ಕ್ಷೇತ್ರಕ್ಕೆ 823 ಕೋಟಿಯಷ್ಟುಅನುದಾನ ತಂದಿದ್ದೇನೆ. ಕಳೆದ 5 ವರ್ಷದಲ್ಲಿ ವಾರದ 4 ದಿನಗಳು ಹೆಚ್ಚಿನ ಕೆಲಸ ಕಲಿತಿದ್ದೇನೆ, ಅನುಭವ ಹೆಚ್ಚಾಗಿದೆ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್, ತಾಪಂ ಮಾಜಿ ಸದಸ್ಯರಾದ ಬಿ.ಎಸ್.ರಾಮು, ಹೆಮ್ಮರಗಾಲಶಿವಣ್ಣ, ಮುಖಂಡರಾದ ಹೊರಳವಾಡಿ ಸುರೇಶ್, ಹೆಮ್ಮರಗಾಲಸೋಮಣ್ಣ, ಗೋವರ್ಧನ್, ಜಿ.ಬಸವರಾಜು, ಸೌಭಾಗ್ಯರಾಮಚಂದ್ರು, ಗ್ರಾಪಂ ಸದಸ್ಯರಾದ ಮಹೇಶ್, ಹೊರಳವಾಡಿ ಗ್ರಾಪಂ ಅಧ್ಯಕ್ಷ ರಮೇಶ್, ಮಂಡ್ಯಮಹದೇವು, ನವೀನ್‌ರಾಜ್, ನಾಗಣ್ಣ, ಗಂಗಾಧರ್, ಕಾರ್ಯಕರ್ತರು ಇದ್ದರು.
ಕಾಂಗ್ರೆಸ್‌ನಿಂದ ಅಸಮಾಧಾನ ಸ್ಫೋಟ
ಬಾದಾಮಿ(ಏ.07): ಎಐಸಿಸಿ ವತಿಯಿಂದ ಗುರುವಾರ 42 ಅಭ್ಯರ್ಥಿಗಳ ಪಟ್ಟಿಪ್ರಕಟಿಸಿದ್ದು, ಬಾದಾಮಿ ಮತಕ್ಷೇತ್ರದಿಂದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹೇಶ ಹೊಸಗೌಡ್ರ ಅಸಮಾಧಾನಗೊಂಡಿದ್ದಾರೆ. ಇತ್ತ ಟಿಕೆಟ್ ಘೋಷಣೆಯಾದರೂ ಸಿದ್ದರಾಮಯ್ಯ ಸ್ಫರ್ಧೆ ಮಾಡಬೇಕು ಎಂದು ಅವರ ಅಭಿಮಾನಿಗಳು ಏ.7ರಂದು ಸಭೆ ಕರೆದಿದ್ದಾರೆ. ಇದು ತೀವ್ರ ಕುತೂಹಲ ಕೆರಳಿಸುವಂತೆ ಮಾಡಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದರು. ಆಗ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಈಗ ಬಿ.ಬಿ.ಚಿಮ್ಮನಕಟ್ಟಿ ಅವರು ತಮ್ಮ ಪುತ್ರನಿಗೆ ಟಿಕೆಟ್ ನೀಡಲು ಮನವಿ ಮಾಡಿದ್ದರು. ಆದಕಾರಣ ಪುತ್ರ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಆಪ್ತ ಸಮಾಲೋಚನೆ ಮೂಲಕ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೆ ತೆರಳಿ, ಜನರ ಸಂಪರ್ಕ ಮಾಡಿದ್ದಾರೆ. 40 ವರ್ಷದ ಭೀಮಸೇನ ಚಿಮ್ಮನಕಟ್ಟಿಯುವ ಮುಖಂಡರಾಗಿದ್ದು, ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕಾಗಿದೆ. ಈಗಾಗಲೇ ಜೆಡಿಎಸ್ ಪಕ್ಷದಿಂದ ಹಣಮಂತ ಮಾವಿನಮರದ ಹೆಸರು ಘೋಷಣೆಯಾಗಿದ್ದು, ಬಿಡುವಿಲ್ಲದೇ ಕ್ಷೇತ್ರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯಿಂದ ಇನ್ನೂ ಟಿಕೆಟ್ ಅಂತಿಮವಾಗಿಲ್ಲ. ಬಿಜೆಪಿಯಲ್ಲಿಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿಮತ್ತು ಮಹಾಂತೇಶ ಮಮದಾಪೂರ, ಶಾಂತಗೌಡ ಪಾಟೀಲ ಪ್ರಬಲ ಆಕಾಂಕ್ಷಿಗಳಾಗಿದ್ದು, ಯಾರಿಗೆ ಟಿಕೇಟ್ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.
ಬಾಗಲಕೋಟೆ: ರಹಸ್ಯ ಕಾಯ್ದುಕೊಂಡ ‘ತೇರದಾಳ’ ಕಾಂಗ್ರೆಸ್ ಟಿಕೆಟ್..!
ಹೊಸಗೌಡ್ರ ಅಸಮಾಧಾನ:
ಬಾದಾಮಿ ಮತಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೇಟ್ ಘೋಷಣೆ ಬೆನ್ನಲ್ಲೆ ಕೈ ಪಾಳೆಯದಲ್ಲಿ ಅಸಮಾಧಾನ, ಬಂಡಾಯದ ಭೀತಿ ಶುರುವಾಗಿದೆ. ಮತ್ತೋರ್ವ ಟಿಕೆಟ್ ಆಕಾಂಕ್ಷಿ ಮಹೇಶ ಹೊಸಗೌಡ್ರ ಅವರು ಟಿಕೆಟ್ ಘೋಷಣೆಯಿಂದ ಅಸಮಾಧಾನಗೊಂಡಿದ್ದು, ಟಿಕೆಟ್ ನೀಡುವಂತೆ ಮತ್ತೆ ಒತ್ತಾಯ ಮಾಡಿದ್ದಾರೆ. ಬರುವ ಎರಡ್ಮೂರು ದಿನದಲ್ಲಿ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯನವರಿಂದ ಟಿಕೆಟ್ ನಿರೀಕ್ಷಿಸಿದ್ದೇ ಎಂದ ಮಹೇಶ ಹೊಸಗೌಡರ ಪಕ್ಷಕ್ಕಾಗಿ ಕಳೆದ 15 ವರ್ಷಗಳಿಂದ ದುಡಿದಿದ್ದೇನೆ. ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗುತ್ತೇ ಎಂಬ ನಂಬಿಕೆ ಇತ್ತು. ಆದರೆ ಇಂದು ಟಿಕೆಟ್ ಸಿಗದೇ ಇರುವುದಕ್ಕೆ ತೀವ್ರ ಅಸಮಾಧಾನವಾಗಿದೆ. ನಮ್ಮೆಲ್ಲ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಮುಂದಿನ ನಿರ್ಧಾರ ಮಾಡುತ್ತೇವೆ. ಟಿಕೆಟ್ ನೀಡದಿರಲು ಕಾರಣವೇನೆಂದು ಕಾಂಗ್ರೆಸ್ ಮುಖಂಡರು ತಿಳಿಸಬೇಕೆಂದು ಮನವಿ ಮಾಡಿದ್ದಾರೆ.