ಜೆಡಿಎಸ್‌ನಿಂದ ಸ್ವಾಭಿಮಾನಕ್ಕೆ ಧಕ್ಕೆ : ಶ್ರೀರಾಮೇಗೌಡ

By Kannadaprabha News  |  First Published Apr 11, 2023, 8:16 AM IST

ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ನಾನು ಜೆಡಿಎಸ್‌ ಪಕ್ಷ ತೊರೆಯುತ್ತಿದ್ದೇನೆ. ನನಗೆ ರಾಜಕೀಯ ಅನಿವಾರ್ಯವೇನಲ್ಲ. ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೆ. ಈಗ ಟಿ.ಬಿ.ಜಯಚಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲು ಮುಂದಾಗಿದ್ದೇನೆ ಎಂದು ಸಮಾಜ ಸೇವಕ ಶ್ರೀರಾಮೇಗೌಡ ಹೇಳಿದರು.


  ಶಿರಾ :  ಸ್ವಾಭಿಮಾನಕ್ಕೆ ಧಕ್ಕೆಯಾದ ಕಾರಣ ನಾನು ಜೆಡಿಎಸ್‌ ಪಕ್ಷ ತೊರೆಯುತ್ತಿದ್ದೇನೆ. ನನಗೆ ರಾಜಕೀಯ ಅನಿವಾರ್ಯವೇನಲ್ಲ. ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೆ. ಈಗ ಟಿ.ಬಿ.ಜಯಚಂದ್ರ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲು ಮುಂದಾಗಿದ್ದೇನೆ ಎಂದು ಸಮಾಜ ಸೇವಕ ಶ್ರೀರಾಮೇಗೌಡ ಹೇಳಿದರು.

ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಸರಕಾರಿ ಅಧಿಕಾರಿಯಾಗಿ ನಿವೃತ್ತಿಯಾದ ನಂತರ ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ನಾನು ಟಿಕೆಟ್‌ ಆಕಾಂಕ್ಷಿಯೂ ಆಗಿರಲಿಲ್ಲ. ಆದರೂ ನನ್ನ ಬಗ್ಗೆ ಕೆಲವರು ತೆಜೋವಧೆ ಮಾಡಿದ್ದರಿಂದ ಮನಸ್ಸಿಗೆ ನೋವಾಗಿ ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದೆ. ಶಿರಾ ಕ್ಷೇತ್ರದ ಜನರೇ ನನ್ನನ್ನು ಜೆಡಿಎಸ್‌ ಪಕ್ಷದಲ್ಲಿ ಟಿಕೆಟ್‌ ಪ್ರಬಲ ಆಕಾಂಕ್ಷಿ ಎಂದು ತಿಳಿದಿದ್ದರು. ಹಾಗಾಗಿ ನಾನೂ ನೀಡಿದರೆ ಜೆಡಿಎಸ್‌ನಿಂದ ಸ್ಪರ್ಧಿಸಬೇಕೆಂದು ಬಯಸಿದ್ದೆ. ಆದರೆ ಹಲವು ದಿನಗಳಿಂದ ಟಿಕೆಟ್‌ ಗೊಂದಲವಾದ ಕಾರಣ ಕಳೆದ ಎರಡು ತಿಂಗಳಿನ ಹಿಂದೆಯೇ ಟಿಕೆಟ್‌ ಬೇಡ ಬೇರೆಯವರಿಗೆ ನೀಡಿ ಎಂದು ಹೇಳಿದ್ದೆ. ಈಗ ಟಿಕೆಟ್‌ ನೀಡಿರುವ ಬಗ್ಗೆ ನನಗೇನು ಬೇಸರವಿಲ್ಲ. ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ. ಯಾವುದೇ ಹುದ್ದೆಯ ಬೇಡಿಕೆ ಇಟ್ಟಿಲ್ಲ. ಟಿ.ಬಿ.ಜಯಚಂದ್ರ ಅವರ ಜೊತೆಗೆ ಅಭಿವೃದ್ಧಿಗೆ ಕೈಜೋಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.

Tap to resize

Latest Videos

ಮುಖಂಡ ಲಿಂಗದಹಳ್ಳಿ ಸುಧಾಕರ್‌ ಗೌಡ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಡಿಪೊ್ಲೕಮಾ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆದ್ದರಿಂದ ನಾವು ಕಾಂಗ್ರೆಸ್‌ ಸೇರ್ಪಡೆಯಾಗಲು ನಿರ್ಧರಿಸಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಸೀಗಲಹಳ್ಳಿ ವೀರೇಂದ್ರ, ಮುದ್ದುಕೃಷ್ಣೇಗೌಡ, ಟಿ.ವಿನಯ್‌, ಹೊಸಹಳ್ಳಿ ರಾಮಚಂದ್ರಪ್ಪ, ನೇರಹಳ್ಳಿ ಶ್ರೀಧರ್‌, ಜಯಣ್ಣ, ಶಿವಕುಮಾರ್‌ ಚಿನ್ನಿ, ರಜಿನಿ ಸೇರಿದಂತೆ ಹಲವರು ಹಾಜರಿದ್ದರು.

ನೂರಾರು ಮಂದಿ ಕಾಂಗ್ರೆಸ್‌ಗೆ

ಚಿಕ್ಕಮಗಳೂರು(ಏ.06):  ಕಾಫಿನಾಡಿನಲ್ಲಿ ಜಂಪಿಂಗ್ ಪಾಲಿಟಿಕ್ಸ್ ಜೋರಾಗಿದೆ. ಅದರಲ್ಲೂ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ನಡೆಯತ್ತಿದ್ದು ಹಾಲಿ ಶಾಸಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೊಪ್ಪ ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ  ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಶಾಸಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ವಿಜಯಾನಂದ ಕಾಂಗ್ರೆಸ್ ಸೇರ್ಪಡೆಯಾದರು. 

ಲೋಕಾಯುಕ್ತಕ್ಕೆ ದೂರು ನೀಡಿ ವಾಪಸ್‌ ಪಡೆದಿದ್ದ ವಿಜಯಾನಂದ ಕಾಂಗ್ರೆಸ್‌ಗೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚುನಾವಣಾ ಉಸ್ತುವಾರಿ ಹಾಗೂ ಪ್ರಚಾರ ಸಮಿತಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಮುಖಂಡ ಪ್ರಕಾಶ್ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಈ ಹಿಂದೆ ಜೆಡಿಎಸ್ ಸೇರಿದ್ದ ಸುನಿಲ್ ನಿಡುವಾನೆ ಹಾಗೂ ಟಿ. ಡಿ ರಾಜೇಗೌಡ ಅವರ ವಿರುದ್ಧ ಸಿದ್ಧಾರ್ಥ್ ಹೆಗಡೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಾಜಿ ಶಾಸಕ ಜೀವರಾಜ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವಿಜಯಾನಂದ  ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ವಿಜಯಾನಂದ್ ಈ ಹಿಂದೆ ಕೊಪ್ಪ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಾಜಿ ಶಾಸಕ ಜೀವರಾಜ್ ಅವರ ಆಪ್ತ ವಲಯದಲ್ಲಿ ಕೂಡ ಗುರುತಿಸಿಕೊಂಡಿದ್ದ ವಿಜಯಾನಂದ ಅವರು ಅಕ್ರಮ ಆಸ್ತಿ ಸಂಬಂಧಿಸಿದಂತೆ ಟಿ. ಡಿ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಸಿ.ಟಿ.ರವಿಯೇ ಗೆಲ್ಲೋದು, ಕಾಂಗ್ರೆಸ್ ಮುಖಂಡನ ಆಡಿಯೋ ವೈರಲ್: ಪಕ್ಷದಿಂದ ವಜಾ

ದಿವಂಗತ ಸಿದ್ದಾರ್ಥ್ ಒಡೆತನದ ಕಾಫಿ ತೋಟ ಖರೀದಿ ಅಕ್ರಮ ಆರೋಪ : 

ದಿವಂಗತ ಸಿದ್ಧಾರ್ಥ್ ಒಡೆತನದ ಕಾಫಿತೋಟದ ಆಸ್ತಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಸಲ್ಲಿಸಿದ್ದರು. ಶಾಸಕ ಟಿ. ಡಿ ರಾಜೇಗೌಡ 200 ಕೋಟಿ ಆಸ್ತಿ ಹೊಂದಿದ್ದು, 13 ಕೋಟಿ ಮುದ್ರಾಂಕ ಶುಲ್ಕ ಹಾಗೂ 60 ಕೋಟಿ ಆದಾಯ ತೆರಿಗೆ ಕಟ್ಟದೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ವಿಜಯಾನಂದ ದೂರು ನೀಡಿದ್ದಾರೆ ಎಂದು ಮಾಜಿ ಶಾಸಕ ಜೀವರಾಜ್ ಆರೋಪಿಸಿದ್ದರು ಆ ಕೇಸ್ ಗೆ ಸಂಬಂಧಿಸದಂತೆ ಜೀವರಾಜ್ ಬೀಸಿದ ಆಮಿಷದ ಬಲೆಗೆ ನಾನು ಬಲಿಯಾಗಿ ಸಹಿ ಮಾಡಿದ್ದೇನೆ. ಜೀವರಾಜ್ ಅವರು ದೂರಿನ ವಿವರಣೆ ಅಥವಾ ಪ್ರತಿಯನ್ನಾಗಲಿ ನನಗೆ ತೋರಿಸಿಲ್ಲ. ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ನಾನು ಲೋಕಾಯುಕ್ತಕ್ಕೆ ಸಲ್ಲಿಸಿದ್ದ ದೂರನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳಿದ್ದರು.

ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿ ಹಲಸೂರಿನಲ್ಲಿ 211 ಎಕರೆ ಜಾಮೀನನ್ನು ಶಾಸಕ ಟಿ.ಡಿ.ರಾಜೇಗೌಡ ಅವರು ತಮ್ಮ ಪತ್ನಿ ಮತ್ತು ಮಗನ ಹೆಸರಿನಲ್ಲಿ ಖರೀದಿಸಿದ್ದಾರೆ. ಪ್ರಸ್ತುತ ಶಭಾನ್ ರಂಜಾನ್ ಟ್ರಸ್ಟ್ನಲ್ಲಿ ನಾಲ್ವರು ಪಾಲುದಾರರಿದ್ದು, ಇಬ್ಬರು ನಿವೃತ್ತಿ ಹೊಂದುತ್ತಿದ್ದಂತೆ ಶಾಸಕರ ಪತ್ನಿ ಪಾಲುದಾರರಾಗುತ್ತಾರೆ. ಕೆಲವು ದಿನಗಳ ಬಳಿಕ ಮತ್ತಿಬ್ಬರು ನಿವೃತ್ತಿ ಹೊಂದಿದ್ದು, ಶಾಸಕರ ಮಗ ರಾಜ್ದೇವ್ ಟ್ರಸ್ಟ್ ಪ್ರವೇಶಿಸಲಿದ್ದಾರೆ. ಈ ಮೂಲಕ ಶಾಸಕರ ಪತ್ನಿ ಮತ್ತು ಮಗ ಅರ್ಧದಷ್ಟು ಪಾಲುದಾರಿಕೆ ಪಡೆಯಲಿದ್ದಾರೆ ಎಂದು ದೂರಿದ್ದರು.

click me!