ಹಣ, ಚಿನ್ನ ಕದಿಯೋಕೆ ಬಂದವ್ರು ವಿದೇಶಿ ಮದ್ಯ ದೋಚಿದ್ರು..!

Kannadaprabha News   | Asianet News
Published : Mar 07, 2020, 08:55 AM IST
ಹಣ, ಚಿನ್ನ ಕದಿಯೋಕೆ ಬಂದವ್ರು ವಿದೇಶಿ ಮದ್ಯ ದೋಚಿದ್ರು..!

ಸಾರಾಂಶ

ಕಾಫಿ ತೋಟದ ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ರಾತ್ರಿವೇಳೆ ಮನೆಯ ಹೆಂಚು ತೆಗೆದು ಒಳನುಗಿದ್ದ ಕಳ್ಳರಿಗೆ ನಗನಗದು ಸಿಗದಿದ್ದಾಗ ಕಂಚಿನ ದೀಪ ಹಾಗೂ ಮದ್ಯದ ಬಾಟಲಿಯನ್ನೇ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.  

ಮಡಿಕೇರಿ(ಮಾ.07): ಕಾಫಿ ತೋಟದ ಮಾಲೀಕರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ರಾತ್ರಿವೇಳೆ ಮನೆಯ ಹೆಂಚು ತೆಗೆದು ಒಳನುಗಿದ್ದ ಕಳ್ಳರಿಗೆ ನಗನಗದು ಸಿಗದಿದ್ದಾಗ ಕಂಚಿನ ದೀಪ ಹಾಗೂ ಮದ್ಯದ ಬಾಟಲಿಯನ್ನೇ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಅತ್ತೂರು ನಲ್ಲೂರು ಗ್ರಾಮದ ಮತ್ತಿಕಾಡಿನ ದೇವಿ ಎಸ್ಟೇಟ್‌ನ ಮಾಲೀಕರಾದ ಚೊಟ್ಟೇರ ಶಾರದಾ ಮೇದಪ್ಪ ಅವರು ಅನಾರೋಗ್ಯದ ನಿಮಿತ್ತ ಬೆಂಗಳೂರಿಗೆ ಚಿಕಿತ್ಸೆಗೆ ತೆರಳಿದ್ದರು.

ಬೆಂಗಳೂರು-ಗೋವಾ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಎಲ್ಲೆಲ್ಲಿ..?

ರಾತ್ರಿವೇಳೆ ಮನೆಯಲ್ಲಿ ಯಾರು ಇರದಿದ್ದುದನ್ನು ಗಮನಿಸಿದ ಚೋರರು ಮನೆ ಹಿಂಬಾಗಿಲಿನ ಹೆಂಚು ತೆಗೆದು ಒಳನುಗ್ಗಿ ಕಬ್ಬಿಣದ ಕಪಾಟು, ಗೊದ್ರೆಜ್‌ನ್ನು ಒಡೆಯಲು ಪ್ರಯತ್ನಿಸಿದ್ದು, ಅದು ಸಫಲರಾಗದಿದ್ದಾಗ ಮನೆಯಲ್ಲಿದ್ದ ದೊಡ್ಡ ಕಂಚಿನ ದೀಪ, 5 ಬಾಟಲಿ ವಿದೇಶಿ ಮದ್ಯ, ಚಾಕು, ಕತ್ತಿ ಹಾಗೂ ಬ್ಯಾಗನ್ನು ಅಪಹಸಿದ್ದಾರೆಂದು ಸುಂಟಿಕೊಪ್ಪ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು