Shivamogga: ಕ್ರೀಡಾಕೂಟದಲ್ಲಿ ರಾಜಕೀಯ ಮನೋಭಾವ ಇರಬಾರದು: ಬಿ.ವೈ.ರಾಘವೇಂದ್ರ

Published : Jun 05, 2022, 08:45 PM IST
Shivamogga: ಕ್ರೀಡಾಕೂಟದಲ್ಲಿ ರಾಜಕೀಯ ಮನೋಭಾವ ಇರಬಾರದು: ಬಿ.ವೈ.ರಾಘವೇಂದ್ರ

ಸಾರಾಂಶ

ವಿಶ್ವ ಪರಿಸರ ದಿನಾಚರಣೆ 2022 ಅಂಗವಾಗಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಶಿಕಾರಿಪುರ ತಾಲೂಕು ಕ್ರೀಡಾಂಗಣದಲ್ಲಿ 'ಚಂಪಕ ಸಸಿಯನ್ನು' ನೆಡುವ ಮೂಲಕ ಪರಿಸರ ದಿನಕ್ಕೆ ಚಾಲನೆ ನೀಡಿದರು. 

ವರದಿ: ರಾಜೇಶ್ ಕಾಮತ್, ಶಿವಮೊಗ್ಗ

ಶಿವಮೊಗ್ಗ (ಜೂ.05): ವಿಶ್ವ ಪರಿಸರ ದಿನಾಚರಣೆ 2022 ಅಂಗವಾಗಿ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಶಿಕಾರಿಪುರ ತಾಲೂಕು ಕ್ರೀಡಾಂಗಣದಲ್ಲಿ 'ಚಂಪಕ ಸಸಿಯನ್ನು' ನೆಡುವ ಮೂಲಕ ಪರಿಸರ ದಿನಕ್ಕೆ ಚಾಲನೆ ನೀಡಿದರು. ಒಂದು ಗ್ರಾಮ ಪಂಚಾಯಿತಿಗೆ ವಿವಿಧ ಯೋಜನೆಯ ಮೂಲಕ 1 ಕೋಟಿ ಮೊತ್ತ ಸಿಗುತ್ತಿದೆ ಎಂದು ನಡೆಯುತ್ತಿರುವ ಕ್ರೀಡಾಕೂಟ ಮಾದರಿಯಾಗಿ ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ಕ್ರೀಡಾ ಸ್ಫೂರ್ತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಮಾಜಿ ಪ್ರಧಾನಿ ಅಟಲ್ ಜಿ ಅವರ ಮಾತಿನಂತೆ ರಾಜಕೀಯದಲ್ಲಿ ಕ್ರೀಡಾ ಮನೋಭಾವವಿರಲಿ, ಆದರೆ ಕ್ರೀಡಾಕೂಟದಲ್ಲಿ ರಾಜಕೀಯ ಮನೋಭಾವ ಇರಬಾರದು ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ, ತಳಮಟ್ಟದಿಂದ ಕ್ರೀಡಾ ಸ್ಫೂರ್ತಿಯ ಉತ್ತೇಜನ ನೀಡುವ ಮೂಲಕ, 1000 ಖೇಲೋ ಇಂಡಿಯಾ ಕೇಂದ್ರಗಳಲ್ಲಿ 360 ಖೇಲೋ ಇಂಡಿಯಾ ಕೇಂದ್ರಗಳು ಈಗಾಗಲೇ ಅಧಿಸೂಚಿತಗೊಂಡಿವೆ. 'ರಾಷ್ಟ್ರೀಯ, ಪ್ರಾದೇಶಿಕ , ರಾಜ್ಯ ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ' ಅಡಿಯಲ್ಲಿ 236 ಕ್ರೀಡಾ ಅಕಾಡೆಮಿಗಳನ್ನು ಮಾನ್ಯಗೊಳಿಸಿ, 8 ರಿಂದ 14 ವರ್ಷ ವಯೋಮಿತಿಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು 20 ಕ್ರೀಡಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಮುಂಗಾರು ಖುಷಿ ಕಸಿದ ರಸಗೊಬ್ಬರ ಬೆಲೆ ಏರಿಕೆ: ರೈತರು ಕಂಗಾಲು

ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಮೃತ ಯೋಜನೆಯ ಮೂಲಕ ದೇಶದಲ್ಲಿ  'ಕಾರ್ಬನ್ 0' ಅಭಿಯಾನವನ್ನು ತೆಗೆದುಕೊಂಡಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗಿದೆ. ಎಲೆಕ್ಟ್ರಿಕ್ ಕಾರು ಎಲೆಕ್ಟ್ರಿಕ್ ಬೈಕ್ ಸೇವೆಗಳು ಮತ್ತು ಬ್ಯಾಟರಿ ಚಾಲಿತ ವಾಹನಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗಲಿದೆ. ಡೀಸೆಲ್‌ನಲ್ಲಿ ಎಥೆನಾಲ್ ಮಿಕ್ಸ್ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟುವ ದೃಡ ನಿರ್ಧಾರ ತೆಗೆದುಕೊಂಡಿದ್ದಾರೆ. ಪರಿಸರ ಪ್ರೇಮವನ್ನು ಭಾಷಣದಲ್ಲಿ ತೋರಿಸದೆ ಕಾರ್ಯರೂಪಕ್ಕೆ ನಮ್ಮ ಕೇಂದ್ರ ರಾಜ್ಯ ಸರ್ಕಾರವೂ ಬದ್ದವಾಗಿದೆ ಎಂದರು.
 
ಶಿಕಾರಿಪುರದ ತಾಲ್ಲೂಕು ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಜಿಲ್ಲಾ ಪಂಚಾಯತ್‌ ಶಿವಮೊಗ್ಗ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಒಲಂಪಿಕ್ ಅಸೋಸಿಯೇಷನ್, ತಾಲ್ಲೂಕು ಪಂಚಾಯತ್, ಶಿಕಾರಿಪುರ. ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಇವರುಗಳ ಸಹಯೋಗದೊಂದಿಗೆ"ಶಿಕಾರಿಪುರ ತಾಲ್ಲೂಕು ಮಟ್ಟದ ಪಂಚಾಯತ್ ಕ್ರೀಡಾಕೂಟ 2022"ನ್ನು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಕ್ರೀಡಾ ಧ್ವಜರೋಹಣವನ್ನು ನೆರವೇರಿಸಿ, ಶಾಟ್ ಪುಟ್ ಎಸೆಯುವ ಮೂಲಕ ಚಾಲನೆ ನೀಡಿದರು.

ಹುಚ್ಚಾ ಅಯೋಗ್ಯ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ, ಏಕವಚನದಲ್ಲಿ ಈಶ್ವರಪ್ಪ ವಾಗ್ದಾಳಿ

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರು ಡಿ.ಎಸ್‌. ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್. ಗುರುಮೂರ್ತಿ, ಕೊಳಗಿ ರೇವಣಪ್ಪ ತೊಗರ್ಸಿ ಹನುಮಂತಪ್ಪ, ಕಾರ್ಯನಿರ್ವಹಣಾ ಅಧಿಕಾರಿಗಳು ವಿವಿಧ ಅಧಿಕಾರಿಗಳು  ಶಿಕಾರಿಪುರ ತಾಲೂಕಿನ  ಗ್ರಾಮಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ