ಈ ಬಾರಿ ಮೈಸೂರಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಮಹದೇವಪ್ಪ

By Kannadaprabha News  |  First Published Jul 30, 2023, 9:23 PM IST

ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಮುಂಗಾರು ಹಂಗಾಮಿಗೆ ಯಾವುದೇ ಬಿತ್ತನೆ ಬೀಜದ ಕೊರತೆ ಉಂಟಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು. 
 


ಮೈಸೂರು (ಜು.30): ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಮುಂಗಾರು ಹಂಗಾಮಿಗೆ ಯಾವುದೇ ಬಿತ್ತನೆ ಬೀಜದ ಕೊರತೆ ಉಂಟಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು. ನಗರದ ಜಲದರ್ಶಿನಿ ಅತಿಥಿಗೃಹ ಆವರಣದಲ್ಲಿ ಶನಿವಾರ ರೈತರಿಗೆ ಬಿತ್ತನೆ ಬೀಜ ವಿತರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ 198.10 ವಾಡಿಕೆ ಮಳೆಗೆ 207.2ಮಿ.ಮೀ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಮುಂಗಾರು ವಾಡಿಕೆಯಂತೆ 202.1 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 166.05 ಮಿ.ಮೀ. ಮಳೆ ಮಾತ್ರವಾಗಿದ್ದು, ಶೇ. -17.61 ಮಳೆ ಕೊರತೆ ಉಂಟಾಗಿದೆ. ಅಂದರೆ ಒಟ್ಟಾರೆ 407.03 ಮಿ.ಮೀ. ವಾಡಿಕೆ ಮಳೆಗೆ 378.0 ಮಿ.ಮೀ. ಮಳೆಯಾಗಿದ್ದು, ಶೇ. - 7.19 ಮಳೆ ಕೊರತೆ ಉಂಟಾಗಿದೆ ಎಂದು ವಿವರಿಸಿದರು.

ಮುಂಗಾರು ಹಂಗಾಮಿಗೆ 3,97,879 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಪ್ರಸ್ತುತ 2,11,170 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಜಿಲ್ಲೆಯಲ್ಲಿ ಭತ್ತ (1,03,200 ಹೆಕ್ಟೇರ್‌), ರಾಗಿ (63,525 ಹೆ.), ಮುಸುಕಿನ ಜೋಳ (36,140 ಹೆ.), ಹತ್ತಿ (42,900 ಹೆ.), ತಂಬಾಕು (66,335 ಹೆ.), ದ್ವಿದಳ ಧಾನ್ಯ (40,614 ಹೆ.), ಸೂರ್ಯಕಾಂತಿ (4,615 ಹೆ.) , ಕಬ್ಬು (12,520 ಹೆ.) ಬೆಳೆಯಲಾಗುತ್ತದೆ ಎಂದರು. 2023ರ ಮುಂಗಾರು ಹಂಗಾಮಿನಲ್ಲಿ 3,97,879 ಹೆ. ಬಿತ್ತನೆ ಪ್ರದೇಶಕ್ಕೆ, ಒಟ್ಟು 88,786 ಕ್ವಿಂಟಾಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದಿತ್ತು. ಪ್ರಸ್ತುತ 88,930 ಕ್ವಿಂಟಾಲ್‌ ಬಿತ್ತನೆ ಬೀಜ ಲಭ್ಯವಿದೆ. ರೈತ ಸಂಪರ್ಕ ಕೇಂದ್ರಗಳಿಗೆ 11,449 ಕ್ವಿಂಟಾಲ್‌ ಪೂರೈಸಲಾಗಿದ್ದು, ಈವರೆಗೆ 2,137.1 ಕ್ವಿಂಟಾಲ್‌ ವಿತರಿಸಲಾಗಿದೆ.

Tap to resize

Latest Videos

ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೇಡ: ಸಂಸದ ಮುನಿಸ್ವಾಮಿ

ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆ ಬೀಜದ ವಿತರಣೆ ಕಾರ್ಯ ಪ್ರಗತಿಯಲ್ಲಿದೆ. ಪ್ರಸಕ್ತ ಸಾಲಿನಿಂದ ಬಿತ್ತನೆ ಬೀಜಗಳನ್ನು ರೈತರಿಗೆ ಕೆ- ಕಿಸಾನ್‌ ವೆಬ್‌ಸೈಟ್‌ ಮೂಲಕ ಕ್ಯೂಆರ್‌ ಕೋಡ್‌ ಬಳಸಿಕೊಂಡು ವಿತರಿಸಲಾಗುತ್ತಿದೆ. ಈ ವಿಧಾನದಿಂದ ಯಾವ ರೈತರಿಗೆ ಯಾವ ಬೆಳೆ, ಯಾವ ತಳಿ ಮತ್ತು ಯಾವ ಲಾಟ್‌ ನಂಬರ್‌ನ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿ ದಾಖಲಾಗುತ್ತದೆ ಎಂದರು. ಭತ್ತಕ್ಕೆ ಪ್ರತಿ ಒಂದು ಚೀಲಕ್ಕೆ ಸಾಮಾನ್ಯ ವರ್ಗದವರಿಗೆ . 8 ಸಹಾಯ ಧನ, ಪ.ಜಾತಿ, ಪ.ಪಂಗಡಕ್ಕೆ . 12 ಸಹಾಯ ಧನ ನೀಡಲಾಗುತ್ತದೆ. 

2023-24ನೇ ಸಾಲಿನ ಮುಂಗಾರು ಹಂಗಾಮಿನ ಬೇಡಿಕೆ 1.27 ಲಕ್ಷ ಮೆ.ಟನ್‌, ಜು. 27ರ ಅಂತ್ಯದ ಲಭ್ಯತೆ 1.28 ಲಕ್ಷ ಮೆಟ್ರಿಕ್‌ ಟನ್‌, ಈವರೆಗೆ 0.866 ಲಕ್ಷ ಮೆಟ್ರಿಕ್‌ ಟನ್‌, ಪ್ರಸ್ತುತ 0.42 ಲಕ್ಷ ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ರಸಗೊಬ್ಬರವು ಖಾಸಗಿ ಮಾರಾಟಗಾರರು ಮತ್ತು ಸಹಕಾರ ಸಂಘಗಳಲ್ಲಿ ದಾಸ್ತಾನಿದೆ. ರೈತ ಮಹಿಳೆರಿಗೆ ಪ್ರಶಸ್ತಿ: ಕೃಷಿಯಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸಲು ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿ ಕೃಷಿ ಪ್ರಶಸ್ತಿ ನೀಡಲಾಗುತ್ತಿದೆ. ಆದ್ದರಿಂದ ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪ್ರಶಸ್ತಿ ಯೋಜನೆಯ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಆ. 30ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬೇಕು.

ರಾಜ್ಯದಲ್ಲಿ ಕರಪ್ಷನ್‌ ಸರ್ಕಾರ ಹೋಗಿ, ಕಂಡೀಷನ್‌ ಸರ್ಕಾರ ಬಂದಿದೆ: ಮುಖ್ಯಮಂತ್ರಿ ಚಂದ್ರು

ಮುಂಗಾರು ಹಂಗಾಮಿನಲ್ಲಿ ಸುಮಾರು 9,80,602 ತಾಕುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಿದ್ದು, ರೈತರೇ ಅವರ ಜಮೀನಿನ ಬೆಳೆ ಮಹಿತಿಯನ್ನು ಆಪ್‌ ಮೂಲಕ ಬೆಳೆ ಸಮೀಕ್ಷೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಬೆಳೆಯುವ 19 ಬೆಳೆಗಳನ್ನು ಅಧಿಸೂಚಿಸಲಾಗಿದೆ. ಈ ಪೈಕಿ 4 ತೋಟಗಾರಿಕೆ ಬೆಳೆ ಸೇರುತ್ತದೆ. ರೈತರು ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್‌. ಚಂದ್ರಶೇಖರ್‌, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌. ಮೂರ್ತಿ, ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಮೊದಲಾದವರು ಇದ್ದರು.

click me!