ಪ್ರಧಾನಿ ಮೋದಿ ಆಡಳಿತದಲ್ಲಿ ಹಗರಣಗಳಿಗೆ ಅವಕಾಶವಿಲ್ಲ; ಶಾಸಕ ಅರುಣ್ ಪೂಜಾರ

By Kannadaprabha News  |  First Published Sep 18, 2022, 12:57 PM IST

ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಎಂಟು ವರ್ಷಗಳಿಂದ ಯಾವುದೇ ಹಗರಣಗಳಿಗೆ ಅವಕಾಶವಿಲ್ಲದಂತೆ ಹಾಗೂ ಸಮಾನತೆ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತ ಬಂದಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.


ರಾಣಿಬೆನ್ನೂರು (ಸೆ.18) : ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಎಂಟು ವರ್ಷಗಳಿಂದ ಯಾವುದೇ ಹಗರಣಗಳಿಗೆ ಅವಕಾಶವಿಲ್ಲದಂತೆ ಹಾಗೂ ಸಮಾನತೆ ಹಾದಿಯಲ್ಲಿ ದೇಶವನ್ನು ಮುನ್ನಡೆಸುತ್ತ ಬಂದಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. ನಗರದ ತಾಪಂ ಸಭಾಭವನದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ವತಿಯಿಂದ ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕಿನ ಎಲ್ಲ ಕ್ಷಯರೋಗಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

Latest Videos

undefined

ದೌಪ್ರದಿ ಮುರ್ಮು ರಾಷ್ಟ್ರಪತಿಯಾದ ನಂತರ ಕ್ಷಯ ರೋಗ ಮುಕ್ತ ಭಾರತ ಮಾಡುವ ಶಪಥ ಮಾಡಿದ್ದಾರೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಿಜೆಪಿಯು ಒಬ್ಬ ಜನಪ್ರತಿನಿಧಿ, ಕನಿಷ್ಠ ಇಬ್ಬರು ಕ್ಷಯರೋಗಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸೂಚಿಸಿದೆ. ಆದರೆ, ನಾನು ತಾಲೂಕಿನ ಎಲ್ಲ ಕ್ಷಯ ರೋಗಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ. ಕ್ಷಯ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೆ ಪೌಷ್ಟಿಕ ಆಹಾರ ತೆಗೆದುಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕು. ಬಿಜೆಪಿ ಬಡವರ ಹಾಗೂ ದೀನ ದಲಿತರ ಬಗ್ಗೆ ಕಾಳಜಿ ಹೊಂದಿರುವ ಪಕ್ಷವಾಗಿದೆ. ಯಾರು ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾರೋ ಅವರಿಗೆ ತಮ್ಮ ಬೆಂಬಲ ನೀಡಬೇಕು ಎಂದರು.

ತಾಪಂ ಇಒ ಟಿ.ಆರ್‌. ಮಲ್ಲಾಡದ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಜಿಪಂ ಮಾಜಿ ಸದಸ್ಯೆ ಮಂಗಳಗೌರಿ ಪೂಜಾರ, ಚೋಳಪ್ಪ ಕಸವಾಳ, ಮಂಜುನಾಥ ಓಲೇಕಾರ, ಬಸವರಾಜ ಹುಲ್ಲತ್ತಿ, ದೀಪಕ ಹರಪನಹಳ್ಳಿ, ಬಸವರಾಜ ಕೇಲಗಾರ, ನಗರಸಭೆ ಸದಸ್ಯರಾದ ಗಂಗಮ್ಮ ಹಾವನೂರು, ಮಂಜುಳಾ ಹತ್ತಿ, ಮುಖಂಡರಾದ ಭಾರತಿ ಅಳವಂಡಿ, ಮಮತಾ ಜಾಧವ, ರಮೇಶ ಗುತ್ತಲ, ಕ್ಷಯ ರೋಗ ವಿಭಾಗದ ಗಿರೀಶ ಮುರನಾಳ, ಜಗದೀಶ ಪಾಟೀಲ ಮತ್ತಿತರರಿದ್ದರು.

ಬಿಜೆಪಿ ಸರ್ಕಾರದ ಭ್ರಷ್ಟಚಾರ ಹಗರಣ; 224 ಕ್ಷೇತ್ರದ ಜನರಿಗೂ ತಿಳಿಸಲಾಗುವುದು: ಡಿ.ಕೆ.ಶಿವಕುಮಾರ್

click me!