: ಕಟ್ಟಡ ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಸದಸ್ಯರು ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿಗೆ ಮನವಿ ಸಲ್ಲಿಸಿದರು.
ಸವಣೂರು (ಸೆ.18) : ಕಟ್ಟಡ ಕಾರ್ಮಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಎಲ್ಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಸದಸ್ಯರು ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿ ಸೂರ್ಯಪ್ಪ ಡಂಬರಮತ್ತೂರ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಗೋಕಾಕ ಭವನದಲ್ಲಿ ಸೂಮಾರು 600 ಅಧಿಕ ಕಟ್ಟಡ ಕಾರ್ಮಿಕರು ಸಮ್ಮುಖದಲ್ಲಿ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಮಹ್ಮದ ಜಾಫರ ಗವಾರಿ ಮನವಿ ಸಲ್ಲಿಸಿದರು.
ಕಟ್ಟಡ ಕಾರ್ಮಿಕರಿಗಾಗಿ Mobile Clinic : 3 ಜಿಲ್ಲೆಗಳಲ್ಲಿ ‘ಶ್ರಮಿಕ ಸಂಜೀವಿನಿ’ ಜಾರಿ
undefined
ಕಾರ್ಮಿಕರ ಮಕ್ಕಳಿಗೆ ನೀಡುವ ಸ್ಕಾಲರ್ ಶಿಪ್ ಶೀಘ್ರ ನೀಡಬೇಕು. ಕಾರ್ಮಿಕರ ಮಕ್ಕಳು ಮದುವೆ ಆದರೆ ಮದುವೆ ಸಹಾಯಧನದ ಬಾಂಡ್ ನೀಡಬೇಕು. 2018 ರಿಂದ ಸ್ಥಗಿತಗೊಳಿಸಿರುವ ಸಹಾಯಧನದ ಬಾಂಡ್ ಕೊಡಬೇಕು. 2021ರಿಂದ ಹೆರಿಗೆ ಸಹಾಯಧನ ನೀಡಿಲ್ಲ. ಸಕಾಲದಲ್ಲಿ ಅರ್ಜಿ ನೀಡಿದರೂ ಈವರೆಗೂ ಹೆರಿಗೆ ಭತ್ಯೆ ನೀಡಿಲ್ಲ, ವೈದ್ಯಕೀಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದರೂ ಈವರೆಗೂ ಯಾರಿಗೂ ನೀಡಿಲ್ಲ, ಕೂಡಲೇ ನೀಡಬೇಕು.
60 ವರ್ಷ ಮೇಲ್ಪಟ್ಟಕಟ್ಟಡ ಕಾರ್ಮಿಕರಿಗೆ ಶೀಘ್ರದಲ್ಲಿ ಪಿಂಚಣಿ ನೀಡಬೇಕು, ಹೊಸದಾಗಿ ಕಾರ್ಮಿಕ ಕಾರ್ಡ್ ಪಡೆದವರಿಗೆ ಮನೆ ಕಟ್ಟಲು . 2 ಲಕ್ಷ ಸಹಾಯಧನ ನೀಡಿದ್ದು, ಹಳೇ ಕಾರ್ಡ್ ಹೊಂದಿದವರಿಗೆ ಮನೆ ಕಟ್ಟಲು ಸಹಾಯಧನ ನೀಡುತ್ತಿಲ್ಲ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮನೆ ಕಟ್ಟಲು . 5 ಲಕ್ಷ ಸಹಾಯಧನ ನೀಡಬೇಕು. ಕಾರ್ಮಿಕರ ಕಾರ್ಡ್ ಹೊಂದಿರುವ ಎಲ್ಲ ಕುಟುಂಬಗಳಿಗೆ ಶೇ. 75 ಯೂನಿಟ್‌ವರೆಗೆ ವಿದ್ಯುತ್ ಸಬ್ಸಿಡಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯ ಒದಗಿಸಿಕೊಡಲು ಸಿದ್ದತೆ
ಪ್ರತಿಭಟನೆಯಲ್ಲಿ ಪ್ರಮುಖರಾದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ಮಾರುತಿ ಭೋವಿ, ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಹೊನ್ನಪ್ಪ ಮರಿಯನ್ನವರ, ಐ.ವೈ. ಪೀರಜಾದೆ, ಸಲೀಂ ಕಿಲ್ಲೆದಾರ್, ಮುಸ್ತಾಕ ಅಹ್ಮದ, ಚನ್ನವೀರಯ್ಯ ಹಿರೇಮಠ, ಕಟ್ಟಡ ಕಾರ್ಮಿಕ ರಾಜ್ಯ ಅಧ್ಯಕ್ಷರಾದ ಜಿ.ಎಚ್. ಉಮೇಶ, ಗೌರವ ಚಪ್ಪರದ, ಮೀನಾಕ್ಷಿ ಸೊರಟೂರ ಹಾಗೂ 600 ಅಧಿಕ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.