ಬಿಜೆಪಿಯನ್ನು ಸೋಲಿಸದೆ ಬೇರೆ ದಾರಿ ಇಲ್ಲ: ಸಿಪಿಐ ನಾಯಕಿ ಮಿನಾಕ್ಷಿ

By Kannadaprabha News  |  First Published Dec 25, 2023, 9:32 AM IST

ಪ್ರಜಾ ಪ್ರಭುತ್ವ ಉಳಿಯ ಬೇಕಾದರೆ ಸರ್ವಧಿಕಾರಿ ಮತ್ತು ನಿರಂಕುಶ ಅಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಪಕ್ಷವನ್ನು ಸೋಲಿಸದೆ ಬೇರೆದಾರಿ ಇಲ್ಲ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ: ಮಿನಾಕ್ಷಿ ಸುಂದರಂ ತಿಳಿಸಿದರು.


  ತುಮಕೂರು :  ಪ್ರಜಾ ಪ್ರಭುತ್ವ ಉಳಿಯ ಬೇಕಾದರೆ ಸರ್ವಧಿಕಾರಿ ಮತ್ತು ನಿರಂಕುಶ ಅಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಪಕ್ಷವನ್ನು ಸೋಲಿಸದೆ ಬೇರೆದಾರಿ ಇಲ್ಲ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ: ಮಿನಾಕ್ಷಿ ಸುಂದರಂ ತಿಳಿಸಿದರು.

ಶನಿವಾರ ಸಿಪಿಐ(ಎಂ) ತುಮಕೂರು ಜಿಲ್ಲಾ ಸಮಿತಿಯು ಪಾರ್ಲಿಮೆಂಟಟ್‌ನಲ್ಲಿ 146 ಜನ ವಿರೋಧ ಪಕ್ಷಗಳ ಸಂಸತ್‌ ಸದಸ್ಯರನ್ನು ಅಮಾನತ್ತು ಮಾಡಿರುವ ಪ್ರಜಾ ಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

Tap to resize

Latest Videos

undefined

ವಿರೋಧಿ ಪಕ್ಷಗಳ ನ್ಯಾಯೋಚಿತ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಲು ಬಿಡದೆ, ಸಂಸದರನ್ನು ಹೊರ ಹಾಕಿ ಜನತೆ ಬದುಕಿಗೆ ಮಾರಕವಾಗುವ ಶಾಸನಗಳನ್ನು ಚರ್ಚೆಗೆ ಅವಕಾಶ ನೀಡದೆ ಅಂಗಿಕರಿಸುವ ನಡೆ ಜನತೆ ಗಮನಸಬೇಕೆಂದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷ ಡಾ. ಮಿನಾಕ್ಷಿ ಬಾಳಿ ಮಾತನಾಡಿ, ಬಿಜೆಪಿ ಅಧಿಕಾರಕ್ಕಾಗಿ ಜನತೆ ಐಕ್ಯತೆ ಮುರಿದು ದೇವರ- ಧರ್ಮದ ಅಧಾರದಲ್ಲಿ ಜನತೆಯಲ್ಲಿ ಬಡಿದಾಟ ಮಾಡಿಸಿ ಅಮಾಯಕರ ಸಾವುಗಳಿಗೆ ಕಾರಣವಾಗುತ್ತಿದಾರೆ. ರಾಮ ನಿಮ್ಮ ಅಸ್ತಿಯಲ್ಲ ಅತ್ಮ ರಾಮನನ್ನು, ಹನುಮ, ಸೇರಿದಂತ ಎಲ್ಲಾ ದೇವರುಗಳನ್ನು ತಮ್ಮ ಅಧಿಕಾರದಾಸೆಗಾಗಿ ಬಿಜೆಪಿ ಮತ್ತು ಸಂಘ ಪರಿವಾರ ಮಲಿನ ಮಾಡಿದ್ದಾರೆ ಎಂದು ಅಪಾದಿಸಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜಿಬ್ ಮಾತನಾಡಿ, ಬಿಜೆಪಿ ಪಕ್ಷ ನಾಯಕರು ಕರ್ನಾಟಕ ವಿಧಾನಸಭೆಯಲ್ಲಿ ಹಾಸಿಗೆ ದಿಂಬುಗಳ ಸಮೇತ ಮಲಗಿತ್ತು, ಅದು ವಿರೋಧ ಪಕ್ಷದಲ್ಲಿ ಇರುವಾಗ ಬಂದು ಬಣ್ಣ ಅಡಳಿತ ಪಕ್ಷದಲ್ಲಿ ಇರುವಾಗ ಒಂದು ಬಣ್ಣ ಈ ದುರಂಗಿ ಅಟವನ್ನು ಜನತೆ ಅರಿತು ಅವರಿಗೆ 2024 ಚುನಾವಣೆಗಳಲ್ಲಿ ಸರಿಯಾದ ಪಾಠ ಕಲಿಸುವುದು ಅಗತ್ಯ ಎಂದರು.

ಎನ್.ಕೆ. ಸುಬ್ರಮಣ್ಯ ಮಾತನಾಡಿ, ಬಿಜೆಪಿ ನಿರಂಕುಶ ಅಡಳಿತ ನಡೆಸಿ ಪ್ರಜಾಪ್ರಭುತ್ವದ ಕಗ್ಗೋಲೆ ಮಾಡಹೋರಟಿದೆ ಎಂದು ಅಪಾದಿಸಿದರು. ಹಿರಿಯ ಮುಖಂಡ ಬಿ. ಉಮೇಶ್, ದಲಿತ ಹಕ್ಕುಗಳ ಸಮಿತಿಯ ರಾಜಣ್ಣ, ಸೌರ್ಹಾದ ಕರ್ನಾಟಕದ ರಾಜಶೇಖರ್ ಮೂರ್ತಿ, ಸಿಐಟಿಯುನ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಟ ಶೆಟ್ಟ, ಬೀಡಿ ಕಾರ್ಮಿಕ ಸಂಘ ಇಂತಿಯಾಜ್, ಜೆಎಂಎಸ್‌ನ ಟಿ.ಆರ್. ಕಲ್ಪನಾ, ಕಟ್ಟಡ ಕಾರ್ಮಿಕರ ಸಂಘ ಕಲೀಲ್, ಹೋರಾಟಗಾರ್ತಿ ಪ್ರಭಾ ಬೆಳವಂಗಲ, ಪ್ರಾಂತ ರೈತ ಸಂಘದ ನಾಗರಾಜು ಮುಂತಾದವರು ಭಾಗವಹಿಸಿದರು.

click me!