
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಸೆ.21): ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೆಸರುವಾಸಿ, ಪ್ರವಾಸಿ ತಾಣಗಳಲ್ಲಿ ಒಂದಾದ ಬಾಬಾಬುಡನ್ ಗಿರಿ ಮಾರ್ಗದಲ್ಲಿ ಬರೋ ಹತ್ತಾರು ಗ್ರಾಮಗಳ ಸಮಸ್ಯೆಯನ್ನು ಕೇಳೋರೆ ಇಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಈ ಗ್ರಾಮಗಳಿಗೆ ಬಸ್ ಸೌಲಭ್ಯವೇ ಇಲ್ಲದಂತಾಗಿದೆ. ಇರೋ ಒಂದು ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡಿ ನಗರ ಸೇರುವ ಸ್ಥಿತಿ ಇಲ್ಲಿನ ಜನರದ್ದು, ಆ ಬಸ್ ಕೈ ಕೊಟ್ರೆ ಅಂದು ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜ್ ಗಳಿಗೆ ರಜೆ ಎನ್ನುವ ಪರಿಸ್ಥಿತಿ ಇದೆ.
25ಕ್ಕೂ ಹೆಚ್ಚು ಗ್ರಾಮಗಳ ಜನರ ಪರದಾಟ: ಕಾಫಿ ನಾಡಿನ ಇನಾಂ ದತ್ತಾತ್ರೇಯ ಪೀಠ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ. ಚಿಕ್ಕಮಗಳೂರಿನಿಂದ 28 ಕಿಲೋಮೀಟರ್ ದೂರದಲ್ಲಿದೆ ಐ.ಡಿ ಪೀಠ..ಇಲ್ಲಿಗೆ ನಿತ್ಯ ನೂರಾರು ವಾಹನದಲ್ಲಿ ಪ್ರವಾಸಿಗರು ಬರ್ತಾರೆ..ಪ್ರವಾಸಿಸ್ಥಳ ನೋಡೋದಷ್ಟೆ ಮಾತ್ರ ಅವ್ರದ್ದು.ಈ ಸಾಲಿನಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಹಳ್ಳಿಗಳಿವೆ..ಅವ್ರಿಗೆ ಪ್ರಮುಖವಾಗಿ ಎದುರಾಗಿರೋ ಸಮಸ್ಯೆಯೇ ಸಾರಿಗೆ ವ್ಯವಸ್ಥೆ..ಈಗ ಸದ್ಯಕ್ಕೆ ಖಾಸಗಿ ವಾಹನಗಳೇ ಇವ್ರ ಜೀವನಾಡಿಯಾಗಿದೆ. ಅತ್ತಿಗುಂಡಿ,ಮಹಲ್ ಸೇರಿದಂತೆ ಸುತ್ತಮುತ್ತಲಿನ ಜನ್ರು ನಗರಕ್ಕೆ ಬರೋಕೆ ಖಾಸಗಿಯನ್ನೇ ಅವಲಂಭಿತರಾಗಿದ್ದಾರೆ.
ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು, ಸಿ.ಟಿ.ರವಿ ಸಿಎಂ ಆಗಬೇಕು: ಗಣಪತಿ ಹುಂಡಿಯಲ್ಲಿ ಬೇಡಿಕೆಯ ಚೀಟಿಗಳು
ಇರೋದೊಂದೇ ಪ್ರೈವೇಟ್ ಬಸ್. ಈ ಬಸ್ ಬರೋದು ಬೆಳಗ್ಗೆ, ಸಂಜೆ ಒಂದೊಂದು ಟ್ರಿಪ್ ಅಷ್ಟೆ. ಇಲ್ಲಿನ ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟೋರ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಇಲ್ಲಿನ ನಿವಾಸಿಗಳು ಖಾಸಗಿ ವಾಹನಗಳ ಮೋರೆ ಹೋಗ್ತಿದ್ದಾರೆ. ಜನಪ್ರತಿನಿಧಿಗಳು ಮತ ಕೇಳೋಕೆ ಮಾತ್ರ ಈ ಭಾಗಕ್ಕೆ ಹೋಗಿ ಬಂದ್ರೆ ಮತ್ತೆ ಹೋಗಿಬರೋದು ಇಲ್ಲಿನ ಪ್ರವಾಸಿ ತಾಣಗಳನ್ನ ನೋಡೋಕೆ ಅಷ್ಟೆ ಅಂತಾ ಸ್ಥಳೀಯರ ಆಕ್ರೋಶ ಹೊರಹಾಕುತ್ತಾರೆ.
ಸರ್ಕಾರಿ ಮಿನಿ ಬಸ್ ಸಂಚಾರಕ್ಕೆ ಗಿರಿ ಪ್ರದೇಶದ ಜನರ ಆಗ್ರಹ: ಬಸ್ಸಿಗಾಗಿ ಇಲ್ಲಿನ ಜನರು ಮೂರ್ನಾಲ್ಕು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ಇದೆ. ಇಲ್ಲಿರೋ ಒಂದೇ ಒಂದು ಖಾಸಗಿ ಬಸ್ ಬಂದಾಗ್ಲೆ ಬಂತು ಎಂದರ್ಥ. ಬೆಳಗ್ಗೆ 8ಕ್ಕೆ ಬರೋ ಬಸ್ 10ಕ್ಕೆ ಬಂದ್ರು ಕೇಳೋರಿಲ್ಲ. ನಗರಕ್ಕೆ ಬರುವಷ್ಟರಲ್ಲಿ ಅರ್ಧ ದಿನ ಕಳೆದೋಗಿರುತ್ತೆ, ಶಾಲಾ-ಕಾಲೇಜುಗಳಿಗೆ ಹೋಗಿ ಬರೋ ವಿದ್ಯಾರ್ಥಿಗಳಿಗೂ ಸಾಕಷ್ಟು ತೊಂದರೆ ಅನುಭವಿಸಬೇಕು. ಇಲ್ಲಿರೋ ಒಂದು ಖಾಸಗಿ ಬಸ್ ಒಂದು ಟ್ರಿಪ್ ಗೆ ನೂರು ಜನರನ್ನು ತುಂಬುತ್ತಾರೆ.ಇದನ್ನು ಗಮನಿಸಿದ ಜಿಲ್ಲಾಡಳಿತ 2019 ರಲ್ಲಿ ಒಂದು ಕೆ ಎಸ್ ಆರ್ ಟಿ ಸಿ ಬಸ್ ನ ವ್ಯವಸ್ಥೆ ಕಲ್ಪಿಸಿತ್ತು.
ಗಲಭೆಗೆ ಸರ್ಕಾರದ ವೈಫಲ್ಯವೇ ಕಾರಣ: ಕಾಂಗ್ರೆಸ್ ನಾಯಕರಿಗೆ ಆರ್.ಅಶೋಕ್ ತಿರುಗೇಟು
ಕೆಲ ತಿಂಗಳು ಕಾಲ ಸಂಚಾರ ನಡೆಸಿದ ಕೆ ಎಸ್ ಆರ್ ಟಿ ಸಿ ಬಸ್ ತನ್ನ ಸೇವೆವನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮ ಇಲ್ಲಿನ ಜನರು ಮತ್ತೆ ಖಾಸಗಿ ಬಸ್ ಮೊರೆ ಹೋಗಿದ್ದಾರೆ. ಬೆಟ್ಟಗುಡ್ಡಗಳ ನಡುವಿನ ರಸ್ತೆಗಳ ತುಂಬಾ ಕಿರಿದಾಗಿದ್ದು, ಸಾಕಷ್ಟು ತಿರುವುಗಳಿದ್ದು ಸ್ವಲ್ಪ ಯಾಮಾರಿದ್ರು ಬಸ ಪಾತಾಳ ಸೇರೋದು ಗ್ಯಾರಂಟಿ. ಮುಂದೊಂದು ದಿನ ದೊಡ್ಡ ಮಟ್ಟದ ಅನಾಹುತ ಸಂಭವಿಸೋ ಮೊದಲು ಸಂಬಂಧಪಟ್ಟೋರು ಇತ್ತ ಗಮನ ಹರಿಸಿ ಈ ಭಾಗಕ್ಕೆ ನಾಲ್ಕೈದು ಸರ್ಕಾರಿ ಬಸ್ನ ಹಾಕಿಕೊಟ್ರೆ ಈ ಭಾಗದ ಜನರು ನೆಮ್ಮದಿಯಿಂದ ಬದುಕುತ್ತಾರೆ.