ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು, ಸಿ.ಟಿ.ರವಿ ಸಿಎಂ ಆಗಬೇಕು: ಗಣಪತಿ ಹುಂಡಿಯಲ್ಲಿ ಬೇಡಿಕೆಯ ಚೀಟಿಗಳು

Published : Sep 21, 2024, 06:09 PM IST
ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು, ಸಿ.ಟಿ.ರವಿ ಸಿಎಂ ಆಗಬೇಕು: ಗಣಪತಿ ಹುಂಡಿಯಲ್ಲಿ ಬೇಡಿಕೆಯ ಚೀಟಿಗಳು

ಸಾರಾಂಶ

ಕಾಣಿಕೆ ಹುಂಡಿ‌ ಎಣಿಕೆ ಮಾಡುವ ಸಮಯದಲ್ಲಿ ಕೆಲವೊಂದು ಚೀಟಿಗಳನ್ನು ಬರುವುದನ್ನು ನೋಡಿದ್ದೇವೆ. ಆ ಚೀಟಿಯಲ್ಲಿ ದೇವರೇ ಮದುವೆ ಮಾಡು. ಬೇಗ ಹುಡುಗಿ ಸಿಗಲಿ. ಪರೀಕ್ಷೆಯಲ್ಲಿ ಪಾಸ್ ಮಾಡು. ನನ್ನ ಪ್ರೀತಿ ಗೆಲ್ಲುವಂತೆ ಮಾಡು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.21): ಕಾಣಿಕೆ ಹುಂಡಿ‌ ಎಣಿಕೆ ಮಾಡುವ ಸಮಯದಲ್ಲಿ ಕೆಲವೊಂದು ಚೀಟಿಗಳನ್ನು ಬರುವುದನ್ನು ನೋಡಿದ್ದೇವೆ. ಆ ಚೀಟಿಯಲ್ಲಿ ದೇವರೇ ಮದುವೆ ಮಾಡು. ಬೇಗ ಹುಡುಗಿ ಸಿಗಲಿ. ಪರೀಕ್ಷೆಯಲ್ಲಿ ಪಾಸ್ ಮಾಡು. ನನ್ನ ಪ್ರೀತಿ ಗೆಲ್ಲುವಂತೆ ಮಾಡು. ಸರ್ಕಾರಿ ಕೆಲಸ ಸಿಗಲಿ ಅಂತೆಲ್ಲಾ ನಾನಾ ರೀತಿಯ ಬೇಡಿಕೆಯನ್ನ ಬರೆದು ಚೀಟಿಯನ್ನ ಕಾಣಿಕೆ ಹುಂಡಿಯಲ್ಲಿ ಹಾಕಿರೋದನ್ನ ನೋಡಿರ್ತೀವಿ. ಆದರೆ, ಇದೇ ಮೊದಲ ಬಾರಿಗೆ ಭಕ್ತರು ನಾನಾ ಬೇಡಿಕೆಗಳನ್ನ ಗಣಪತಿ ಮುಂದೆ ಇಟ್ಟಿದ್ದಾರೆ. ಅದು ಕೂಡ ಹಿಂದೂ ಧರ್ಮದ ಬಗ್ಗೆಯೂ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ವಿಸರ್ಜನೆ ಮೆರವಣಿಗೆಯಲ್ಲಿ 20 ಸಾವಿರಕ್ಕೂ ಜನರು ಭಾಗಿ: ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ  ಓಂಕಾರೇಶ್ವರ ದೇಗುಲದ ಪಕ್ಕದಲ್ಲಿ ಇಟ್ಟಿದ್ದ ಹಿಂದೂ ಮಹಾ ಸಭಾ ಗಣಪತಿಯನ್ನ ಇದೇ ತಿಂಗಳು 18ರಂದು ವಿಸರ್ಜನೆ ಮಾಡಿದ್ದರು. ವಿಸರ್ಜನೆ ಮೆರವಣಿಗೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಅದರ, ಹುಂಡಿ ಹಣ ಏಣಿಕೆ ಕಾರ್ಯವನ್ನ ಇಂದು ಹಮ್ಮಿಕೊಂಡಿದ್ದರು. ಆದರೆ, ಹುಂಡಿಯಲ್ಲಿ ಹಣದ ಜೊತೆ ನಾನಾ ಬೇಡಿಕೆಯ ಚೀಟಿಗಳು ಪತ್ತೆಯಾಗಿವೆ.

3,923 ಎಕರೆ ಅತಿಕ್ರಮಣ ತೆರವಿಗೆ ವಿಶೇಷ ನ್ಯಾಯಾಲಯ ಆದೇಶ, 84 ಜನರಿಗೆ ಶಿಕ್ಷೆ: ನ್ಯಾ.ಬಿ.ಎ.ಪಾಟೀಲ

ಕಾಣಿಕೆ ಹಾಕುವ ಬದಲು ಚೀಟಿ ಹಾಕಿರುವ ಭಕ್ತರು: ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. 140 ಕೋಟಿ ಜನರೂಭಾರತೀಯರಾಗಬೇಕೆಂದು ಭಕ್ತನೋರ್ವ ಗಣಪತಿ ಕಾಣಿಕೆ ಹುಂಡಿಗೆ ಕಾಣಿಕೆ ಬದಲು ಚೀಟಿ ಬರೆದು ಹಾಕಿ ಬೇಡಿಕೊಂಡಿದ್ದಾನೆ. ಮಾಜಿಸಚಿವ ಸಿ.ಟಿ.ರವಿ ಮುಂದಿನ ಸಿಎಂ ಆಗಬೇಕು.ಮುಸ್ಲಿಮರ ಈದ್ ಮಿಲಾದ್ ಮೆರವಣಿಗೆಗಿಂತ ಹಿಂದೂಗಳ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆ ಜೋರಾಗಬೇಕು. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಇರಬೇಕು ಜೊತೆಗೆ ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು ಎಂದು ಭಕ್ತರು ನಾನಾ ರೀತಿ ಬೇಡಿಕೊಂಡಿದ್ದಾರೆ. ಅದರಲ್ಲಿ ಮತ್ತೋರ್ವ ಭಕ್ತ ಮಾತ್ರ ನನ್ನ ಮಗನಿಗೆ ಮದುವೆ ಮಾಡು, ಮುಂದಿನ ವರ್ಷ ನಿನ್ನ ಸೇವೆ ಮಾಡ್ತೀನಿ ಎಂದು ಬರೆದು ಹಾಕಿದ್ದಾರೆ.

PREV
Read more Articles on
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು