ಈ ಜಿಲ್ಲೆಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿ ಭಾಗ್ಯ ಕಲ್ಪಿಸಿದೆ. ಆದ್ರೆ ಇಲ್ಲಿಗೆ ವಾಹನಗಳು ಬಂದ್ರೆ ವಾಪಸ್ ಗುಜರಿಗೆ ಹೋಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ.
ವರದಿ: ಪುಟ್ಟರಾಜು. ಆರ್.ಸಿ, ಏಷ್ಯಾನೆಟ್ ಸುವರ್ಣನ್ಯೂಸ್, ಚಾಮರಾಜನಗರ
ಚಾಮರಾಜನಗರ (ಅ.17): ಈ ಜಿಲ್ಲೆಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಾದೇಶಿಕ ಸಾರಿಗೆ ಕಚೇರಿ ಭಾಗ್ಯ ಕಲ್ಪಿಸಿದೆ. ಆದ್ರೆ ಇಲ್ಲಿಗೆ ವಾಹನಗಳು ಬಂದ್ರೆ ವಾಪಸ್ ಗುಜರಿಗೆ ಹೋಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಆರ್‌ಟಿಓ ಕಚೇರಿ ರಸ್ತೆ ಪೂರ್ತಿ ಗುಂಡಿ ಬಿದ್ದಿದ್ದು, ಕಚೇರಿಯಲ್ಲಿ ಇತರ ಸಮಸ್ಯೆಗಳು ಬೆಟ್ಟದಷ್ಟಿವೆ. ಸಾರಿಗೆ ಕಚೇರಿಗೆ ತುರ್ತಾಗಿ ಆಪರೇಷನ್ ಆಗಬೇಕಿದೆ. ಅದೆಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಇದು ಗಡಿ ಜಿಲ್ಲೆ ಚಾಮರಾಜನಗರದ ಆರ್‌ಟಿಓ ಕಚೇರಿಗೆ ಹೋಗುವವರ ದುಸ್ಥಿತಿ. ನಗರದಿಂದ ಸುಮಾರು ಆರು ಕಿ.ಮೀ. ದೂರ ಇರುವ ಇದು ನಗರದ ಹೊರವಲಯದಲ್ಲಿದ್ದು ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಸರಿ ಇಲ್ಲ.
undefined
ಈ ಕಛೇರಿಗೆ ಹೋಗಿ ಬರಲು ರಸ್ತೆಯನ್ನೆ ಮಾಡಿಲ್ಲ. ಈ ಕಛೇರಿ ಪ್ರಾರಂಭವಾಗಿ ಸುಮಾರು ಆರು ವರ್ಷಗಳೆ ಕಳೆದಿದ್ದರು ರಸ್ತೆ ಮಾಡುವ ಯೋಚನೆಯನ್ನೆ ಯಾವ ಅಧಿಕಾರಿಯು ಮಾಡಿಲ್ಲ ಈಗ ಇರುವ ಕಚ್ಚಾ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಹಳ್ಳ ಕೊಳ್ಳಗಳಿಂದ ಕೂಡಿದ್ದು ಬೆಟ್ಟ ಗುಡ್ಡ ಏರಿ ಹೋದಂತಾಗುತ್ತದೆ. ವಿಪರ್ಯಾಸ ಅಂದ್ರೆ ಇಲ್ಲಿಗೆ ಬಂದ ಸಾರ್ವಜನಿಕರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದರೆ ಇದೇ ಇರ್ಬೇಕು ಡ್ರೈವಿಂಗ್ ಟೆಸ್ಟ್ ಎಂದು ಲೇವಡಿ ಮಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸುಂದರವಾಗಿ ಕಟ್ಟಡ ನಿರ್ಮಾಣ ಮಾಡಿದರೆ ಸಾಕೆ ಅಲ್ಲಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು ಬೇಡವೆ ರಸ್ತೆ, ಕುಡಿಯುವ ನೀರು ಹೋಗಿ ಬರಲು ವಾಹನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರಿತಪಿಸುವಂತಾಗಿದೆ.
Chamarajanagar: ಅತಿವೃಷ್ಟಿ ವಿಧಿಯಾಟದ ಮುಂದೆ ಮಂಡಿಯೂರಿದ ರೈತ
ಜನರು ಜೀವ ಕೈಯಲ್ಲಿ ಹಿಡಿದು ಇಲ್ಲಿಗೆ ಬರುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ರಸ್ತೆ ಹಾಗೂ ಕುಡಿಯುವ ನೀರಿನ ಘಟಕ ತೆರೆದರೆ ಸಾಕು ಎನ್ನುತ್ತಾರೆ ಸಾರ್ವಜನಿಕರು. ಚಾಮರಾಜನಗರ ಆರ್‌ಟಿಒ ಕಚೇರಿಗೆ ಬರಲು ಇಷ್ಟೊಂದು ಪ್ರಯಾಸ ಪಡಬೇಕಾದರೆ ಇನ್ನು ಕಚೇರಿಯಲ್ಲೂ ಸಮಸ್ಯೆಗಳ ಆಗರವೇ ಇದೆ. ಕಚೇರಿಯಲ್ಲಿ ಅವಶ್ಯಕ ಸಿಬ್ಬಂದಿ ಕೊರತೆಯೂ ಇದ್ದು ಡಿ ದರ್ಜೆ ನೌಕರರಿಲ್ಲದೆ ಯಾವ ಕೆಲಸಗಳು ಆಗುತ್ತಿಲ್ಲ. ಕಛೇರಿಯಲ್ಲಿ ಕೆಲವು ಕೊಠಡಿಗಳು ಖಾಲಿ ಬಿದಿದ್ದು ಧೂಳು ತುಂಬಿದೆ ಇನ್ನು ಸಾಕಷ್ಟು ಪೀಠೋಪಕರಣಗಳು ಸಿಬ್ಬಂದಿಗಳು ಬರಬೇಕಿದೆ. ಕಚೇರಿಯಲ್ಲಿ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಪ್ರಾದೇಶಿಕ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಚಾಮರಾಜನಗರದ ಪ್ರವಾಸೋದ್ಯಮ ಇಲಾಖೆಗೆ ಉಪ ನಿರ್ದೇಶಕರಿಲ್ಲ: ಖಾಯಂ ಅಧಿಕಾರಿ ನೇಮಿಸದೆ ಸರ್ಕಾರದ ನಿರ್ಲಕ್ಷ್ಯ
ಇಲ್ಲಿಗೆ ಬರುವ ಜನರು ಕೈ ಕಾಲು ಪೆಟ್ಟು ಮಾಡಿಕೊಂಡಿರುವುದನ್ನು ನಾವು ಕೂಡ ನೋಡಿದ್ದೇವೆ. ಅಲ್ಲದೆ ನಮ್ಮ ಆರ್‌ಟಿಓ ಅಧಿಕಾರಿಗಳೇ ಬಿದ್ದಿರುವ ಉದಾಹರಣೆಗಳು ಸಹ ಇವೆ. ಹೀಗಾಗಿ ನಾನು ಜಿಲ್ಲಾಧಿಕಾರಿಗಳ ಗಮನಕ್ಕೂ ಕೂಡ ಈ ವಿಚಾರ ತಂದಿದ್ದು ಮೂಲ ಸೌಕರ್ಯ ಹಾಗೂ ಮುಖ್ಯವಾಗಿ ರಸ್ತೆ ಸಂಪರ್ಕ ಕಲ್ಪಿಸಿ ಎಂದು ಮನವಿ ಕೂಡ ಮಾಡಿದ್ದೇನೆ ಎನ್ನುತ್ತಾರೆ ಚಾಮರಾಜನಗರ ಆರ್‌ಟಿಓ ಅಧಿಕಾರಿ. ಒಟ್ಟಾರೆ ರಸ್ತೆಗಳಲ್ಲಿ ನಿಂತು ವಾಹನ ತಪಾಸಣೆ ನಡೆಸುವ ಅಧಿಕಾರಿಗಳ ಕಚೇರಿಗೆ ಇಂತಹ ಪರಿಸ್ಥಿಯಾದರೆ ಇನ್ನೂ ಜಿಲ್ಲೆಯಲ್ಲಿರುವ ಬೇರೆ ರಸ್ತೆಗಳ ಗತಿ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇನ್ನಾದರು ಸರ್ಕಾರ ಆರ್‌ಟಿಒ ಕಛೇರಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಿಕೊಡುತ್ತಾ ಕಾದು ನೋಡಬೇಕಾಗಿದೆ.