ನಂಜನಗೂಡು: ಸುಸಜ್ಜಿತ ಆಸ್ಪತ್ರೆ ಇದೆ; ಆದರೆ ವೈದ್ಯರೇ ಇಲ್ಲ!

Published : Feb 04, 2023, 05:35 AM IST
ನಂಜನಗೂಡು: ಸುಸಜ್ಜಿತ ಆಸ್ಪತ್ರೆ ಇದೆ; ಆದರೆ ವೈದ್ಯರೇ ಇಲ್ಲ!

ಸಾರಾಂಶ

ಸುಸಜ್ಜಿತ ಆಸ್ಪತ್ರೆ ಕಟ್ಟಡ ಇದೆ. ಅದರೆ, ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಅಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ವೈದ್ಯರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮತ್ತೊಬ್ಬ ವೈದ್ಯರನ್ನು ನೇಮಕ ಮಾಡಲಾಗಿತ್ತು. ಅದರೆ ಸುಮಾರು 8 ತಿಂಗಳಿಂದ ವೈದ್ಯರು ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿರುವುದ್ದರಿಂದ ರೋಗಿಗಳು ಪರದಾಡುವಂತಾಗಿದೆ

ನಂಜನಗೂಡು (ಫೆ.4) : ಸುಸಜ್ಜಿತ ಆಸ್ಪತ್ರೆ ಕಟ್ಟಡ ಇದೆ. ಅದರೆ, ವೈದ್ಯರಿಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮ(Hallare village)ದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ಅಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ವೈದ್ಯರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮತ್ತೊಬ್ಬ ವೈದ್ಯರನ್ನು ನೇಮಕ ಮಾಡಲಾಗಿತ್ತು. ಅದರೆ ಸುಮಾರು 8 ತಿಂಗಳಿಂದ ವೈದ್ಯರು ಆಸ್ಪತ್ರೆಗೆ ಬಾರದೆ ನಿರ್ಲಕ್ಷ್ಯ ವಹಿಸುತ್ತಿರುವುದ್ದರಿಂದ ರೋಗಿಗಳು ಪರದಾಡುವಂತಾಗಿದೆ. ಈ ಆಸ್ಪತ್ರೆ ವ್ಯಾಪ್ತಿಗೆ ಸುಮಾರು 5 ಗ್ರಾಮಗಳು ಬರುತ್ತಿದ್ದು ಸರಿಯಾಗಿ ಚಿಕಿತ್ಸೆ ಇಲ್ಲದೆ ರೋಗಿಗಳು ಸುಮಾರು 30 ಕಿ.ಮೀ ದೂರದಷ್ಟುತೆರಳುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡರು.

ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಸರ್ಕಾರ ಬಡವರ ಹಿತ ದೃಷ್ಟಿಯಿಂದ ಕೊಂಟ್ಯಾಂತರ ಹಣ ಖರ್ಚು ಮಾಡಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಅದರೆ ಅದು ಪ್ರಯೋಜನ ಇಲ್ಲವಂತಾಗಿದೆ. ಹಲವು ಬಾರಿ ವೈದ್ಯರನ್ನು ನೇಮಿಸಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂಯಾವುದೇ ಪ್ರಯೋಜನವಾಗಿಲ್ಲ. ವೈದ್ಯರ ಸಮಸ್ಯೆಯಿಂದ ರೋಗಿಗಳಿಗೆ ಚಿಕಿತ್ಸೆ ಇಲ್ಲದೆ ಪರದಾಡುವಂತಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ 8 ಜನ ಸಿಬ್ಬಂದಿ ಇದ್ದು ಅವರು ಸಣ್ಣ ಪುಟ್ಟಚಿಕಿತ್ಸೆ ನೀಡುತ್ತಿದ್ದು ಈಗಾಗಲೇ ಕೆಮ್ಮು, ನೆಗಡಿ ಹೆಚ್ಚಾಗಿದ್ದು ಇದಕ್ಕೆ ಚಿಕಿತ್ಸೆ ನೀಡದೆ ಇರುವುದರಿಂದ ರೋಗಿಗಳಿಗೆ ಪರದಾಟ ಉಂಟಾಗಿದೆ.

ಈ ಭಾಗದಲ್ಲಿ ಹೆಚ್ಚು ಬಡ ಕುಟುಂಬಗಳಿವೆ. ಸರ್ಕಾರಿ ಆಸ್ಪತ್ರೆಯು ತುಂಬಾ ಅನುಕೂಲತೆ ಇದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ವೈದ್ಯರನ್ನು ನೇಮಿಸಿ ಬಡ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಅಬ್ಬಬ್ಬಾ..ಮೂರು ಹೊತ್ತು ಕೂದಲನ್ನೇ ತಿನ್ತಿದ್ಲಾ? ಬಾಲಕಿ ಹೊಟ್ಟೆಯಲ್ಲಿತ್ತು ಬರೋಬ್ಬರಿ 1 ಕೆಜಿ ಕೂದಲು!

ಈಗಾಗಲೇ ಅಲ್ಲಿ ನಿರ್ವಾಹಿಸುತ್ತಿದ್ದ ವೈದ್ಯರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಇದ್ದು ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು ಕೆಲವೇ ದಿನಗಳಲ್ಲಿ ವೈದ್ಯರನ್ನು ನೇಮಿಸಲಾಗುವುದು.

- ಡಾ. ಈಶ್ವರ್‌, ತಾಲೂಕು ವೈದ್ಯಾಧಿಕಾರಿ.

PREV
Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ