Koppal: ನಗರದಲ್ಲಿ ಓಡಾಡದ ಸಿಟಿ ಬಸ್‌ಗಳು: ಸಂಚಾರ ಸ್ಥಗಿತದಿಂದ ತೊಂದರೆ

By Govindaraj SFirst Published May 5, 2022, 4:42 PM IST
Highlights

ಆ ಸಿಟಿಯಲ್ಲಿ ಸಾರ್ವಜನಿಕರು ಕಡಿಮೆ ದರದಲ್ಲಿ ಸಂಚರಿಸುವ ಅನುಕೂಲಕ್ಕಾಗಿ ಸರಕಾರ ಸಿಟಿ ಬಸ್‌ಗಳನ್ನು ನೀಡಿದೆ. ಆದರೆ ಅಧಿಕಾರಗಳ ಬೇಜವಾಬ್ದಾರಿ ನಡೆಯಿಂದಾಗಿ ಇದೀಗ ಆ ಸಿಟಿಯಲ್ಲಿ  ಸಿಟಿ ಬಸ್‌ಗಳೇ ಸಂಚಾರ ಮಾಡುತ್ತಿಲ್ಲ. 

ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಮೇ.05): ಆ ಸಿಟಿಯಲ್ಲಿ ಸಾರ್ವಜನಿಕರು ಕಡಿಮೆ ದರದಲ್ಲಿ ಸಂಚರಿಸುವ ಅನುಕೂಲಕ್ಕಾಗಿ ಸರಕಾರ (Government) ಸಿಟಿ ಬಸ್‌ಗಳನ್ನು (City Bus) ನೀಡಿದೆ. ಆದರೆ ಅಧಿಕಾರಗಳ ಬೇಜವಾಬ್ದಾರಿ ನಡೆಯಿಂದಾಗಿ ಇದೀಗ ಆ ಸಿಟಿಯಲ್ಲಿ  ಸಿಟಿ ಬಸ್‌ಗಳೇ ಸಂಚಾರ ಮಾಡುತ್ತಿಲ್ಲ. ಅಷ್ಟಕ್ಕೂ ಯಾವ ಊರಲ್ಲಿ ಸಿಟಿ ಬಸ್‌ಗಳು ಓಡಾಡುತ್ತಿಲ್ಲ ನೋಡೋಣ ಈ ರಿಪೋರ್ಟ್‌ನಲ್ಲಿ.

ಯಾವ ಊರಲ್ಲಿ ಸಿಟಿ ಬಸ್ ಇಲ್ಲ: ಕೊಪ್ಪಳ‌ (Koppal) ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಗರವಾಗಿದೆ. ಈ ನಗರದ ಬೆಳವಣಿಗೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅವರು ಸಿಟಿ ಬಸ್‌ಗಳನ್ನು ನೀಡಿದ್ದಾರೆ. ಆದರೆ ಸದ್ಯ ಕೊಪ್ಪಳ ನಗರದಲ್ಲಿ ಸಿಟಿ ಬಸ್‌ಗಳು ಸಂಚಾರ ಮಾಡುತ್ತಿಲ್ಲ.
 
ಸಿಟಿ ಸಂಚಾರ ಸ್ಥಗಿತ  ಗ್ರಾಮೀಣಕ್ಕೆ ಜಿಗಿತ: ಸಿಟಿ ಬಸ್‌ಗಳು ನಗರದಲ್ಲಿ ಸಂಚಾರ ಮಾಡಬೇಕು. ಆದರೆ ಸಿಟಿ ಸಂಚಾರ ಸ್ಥಗಿತಗೊಳಿಸಿ ಅನ್ಯ ಜಿಲ್ಲೆ ಮತ್ತು ಅನ್ಯ ತಾಲೂಕುಗಳಿಗೆ ಸಂಚರಿಸುತ್ತಿರುವುದು ವಿಪರ್ಯಾಸದ ಸಂಗತಿ. ನಗರದಲ್ಲಿ ಸಿಟಿ ಬಸ್‌ಗಳ ಕೊರತೆ ಆಗಿದೆ. ಸಿಟಿ ಬಸ್‌ಗಳಿಲ್ಲದೇ ಸಮಯ ಮತ್ತು ಹಣ ಎರಡು ವ್ಯರ್ಥ ಆಗುತ್ತಿದೆ. ಹಾಗಾಗಿ ಸಿಟಿ ಬಸ್‌ಗಳನ್ನು ನಗರಗಳಲ್ಲಿ ಸಂಚರಿಸಿ, ಪ್ರಯಾಣಕ್ಕೆ ಅನುಕೂಲ ಕಲಿಸಬೇಕು.

ಕೊಪ್ಪಳ: ಊರ ಹಸಿರು ಮಾಡಲು ಹೊರಟ ಯುವಕರ ತಂಡ

ಎಲ್ಲೆಲ್ಲಿ ಸಿಟಿ ಬಸ್ ಸಂಚರಿಸುತ್ತಿದ್ದವು: ನಗರದಲ್ಲಿರುವ ಗವಿಸಿದ್ದೇಶ್ವರ ಮಠ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲಾಡಳಿತ ಭವನ, ಜಿಲ್ಲಾಸ್ಪತ್ರೆ, ಭಾಗ್ಯನಗರ, ಕಿನ್ನಾಳ ರಸ್ತೆ, ಬಸವನಗರ ಹಾಗೂ ಅಶೋಕವೃತ್ತ, ಗಡಿಯಾರ ಕಂಬ, ಬಸವೇಶ್ವರ ವೃತ್ತಗಳಿಗೆ ಸೇರಿದಂತೆ ನಗರದ ಪ್ರದೇಶದ ಎಲ್ಲ ಭಾಗಗಳಿಗೆ ಒಟ್ಟು 10 ಮಾರ್ಗಗಳಿಗೆ ಸಿಟಿ ಬಸ್‌ಗಳನ್ನು ಬಿಡಲಾಗಿತ್ತು. ಇದರಿಂದಾಗಿ ನಗರದ ಯಾವ ಭಾಗಕ್ಕೆ ಹೋಗಬೇಕಾದರೂ ಸಿಟಿ ಬಸ್‌ಗಳಲ್ಲಿ ಜನರು ಪ್ರಯಾಣಿಸುತ್ತಿದ್ದರು.

ಎಲ್ಲೆಲ್ಲಿಗೆ ಸಿಟಿ ಬಸ್‌ಗಳನ್ನು ಬಿಡಲಾಗಿದೆ: ನಗರದಲ್ಲಿ ಸಂಚರಿಸಲು ಅನುಕೂಲ ಆಗಲಿ ಎಂದು ಸಾರಿಗೆ ಇಲಾಖೆ 17 ಸಿಟಿ ಬಸ್ ಖರೀದಿಸಿತ್ತು. ಆದರೆ, ಮೂರ್ನಾಲ್ಕು ಸಿಟಿ ಬಸ್ ಮಾತ್ರ ನಗರ ಪ್ರದೇಶದಲ್ಲಿ ಸಂಚರಿಸುತ್ತಿವೆ. 4 ಸಿಟಿ ಬಸ್ ತಡೆ ರಹಿತವಾಗಿ ಅನ್ಯ ಜಿಲ್ಲೆ ವಿಜಯನಗರಕ್ಕೆ ಸಂಚರಿಸುತ್ತಿವೆ. ಇನ್ನುಳಿದ ಸಿಟಿ ಬಸ್‌ಗಳು ಹುಲಗಿ, ಹ್ಯಾಟಿ, ಓಜನಹಳ್ಳಿ, ಗೊಂಡಬಾಳ ಸೇರಿದಂತೆ ಗ್ರಾಮೀಣ ಭಾಗಗಗಳಿಗೆ ಸಂಚರಿಸುತ್ತಿವೆ. ಮೂರು ವಾಹನ ಹೆಚ್ಚುವರಿಯಾಗಿ ಇರಿಸಲಾಗಿದೆ. 

ಸಿಟಿ ಬಸ್ ಸಂಚಾರ ಸ್ಥಗಿತದಿಂದ ತೊಂದರೆ: ವೃದ್ಧರು, ನಗರ ಪ್ರದೇಶದಲ್ಲಿ ಸಂಚರಿಸುವ ವಿದ್ಯಾರ್ಥಿಗಳ, ಮಹಿಳೆಯರು, ಅಂಗವಿಕಲರು, ಉದ್ಯೋಗಿಗಳಿಗೆ ಅನುಕೂಲಕ್ಕಾಗಿಯೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಟಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಹುತೇಕ ಜನರು ಸಿಟಿ ಬಸ್‌ಗಳಲ್ಲಿಯೇ ಸಂಚರಿಸುತ್ತಿದ್ದರು. ಆದರೆ ಅನಿವಾರ್ಯವಾಗಿ ಪ್ರಯಾಣಿಕರು ಆಟೋ ವಿವಿಧ ವಾಹನಗಳಲ್ಲಿ ಸೇರಿದಂತೆ ವಿವಿಧ ವಾಹನಗಳಲ್ಲಿ ಸಂಚರಿಸಿ, ಸಂಸ್ಥೆಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

Koppal: ಉಪನ್ಯಾಸಕರ ಕೈಲಿ ಚಾಕ್ ಪೀಸ್ ಬದಲು ಕಸಬರಿಗೆ: ಏನಿದು..?

ಸಾರ್ವಜನಿಕರಿಗೆ ಹೊರೆ: ಸಿಟಿ ಬಸ್ ಸಂಚಾರಕ್ಕೆ ಕನಿಷ್ಠ 5 ರೂಪಾಯಿ ಹಾಗೂ ಗರಿಷ್ಠ 10 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಇದೀಗ ಸಿಟಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರು ದುಬಾರಿ ಬೆಲೆ ನೀಡಿ ಆಟೋ ಗೆ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಸ್ತುತ ನಗರಗಳಲ್ಲಿ ಕೆಲವ ಇನ್ನು ಮುಂದಾದರೂ ಸಿಟಿ ಬಸ್‌ಗಳನ್ನು ಪ್ರಯಾಣಿಕರಿಗೆ ಬೆರಳೆಣಿಕೆಯ ಸಿಟಿ ಬಸ್‌ಗಳು ಸಂಚರಿಸುತ್ತಿದ್ದು, ಇನ್ನು ಮುಂದೆ ಎಲ್ಲಾ ಸಿಟಿ ಬಸ್‌ಗಳನ್ನು ನಗರಗಳಲ್ಲಿ ಸಂಚರಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

click me!