ಚಿಕ್ಕಬಳ್ಳಾಪುರ ಕ್ಷೇತ್ರದ ಜನರಿಗೆ ಮೆಗಾ ಆರೋಗ್ಯ ಶಿಬಿರ ಆಯೋಜಿಸಿದ ಡಾ.ಕೆ.ಸುಧಾಕರ್

By Suvarna News  |  First Published May 5, 2022, 3:44 PM IST

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದ ಜನರಿಗೆ ಮೆಗಾ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದಾರೆ. ಮೇ ತಿಂಗಳ 14 ಮತ್ತು 15 ರಂದು  ಶ್ರೀ ಆದಿ ಚುಂಚನಗಿರಿ ಮಠದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ನಡೆಯಲಿದೆ.


ವರದಿ: ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣನ್ಯೂಸ್

ಚಿಕ್ಕಬಳ್ಳಾಪುರ (ಮೇ.5): ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Dr K Sudhakar) ಚಿಕ್ಕಬಳ್ಳಾಪುರ ( Chikkaballapura) ಕ್ಷೇತ್ರದ ಜನರಿಗೆ ಮೆಗಾ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದಾರೆ. ಮೇ ತಿಂಗಳ 14 ಮತ್ತು 15 ರಂದು ಚಿಕ್ಕಬಳ್ಳಾಪುರ ನಗರದ ಶ್ರೀ ಆದಿ ಚುಂಚನಗಿರಿ (Adichunchanagiri) ಮಠದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ನಡೆಯಲಿರುವ ಉಚಿತ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಚಿತ ಆರೋಗ್ಯ ಚಿಕಿತ್ಸೆ ಮತ್ತು ಔಷಧೋಪಾಚಾರ ಸೇವೆ ನೀಡುವುದಾಗಿ ಹೇಳಿದ್ದಾರೆ.

Tap to resize

Latest Videos

ರಾಜ್ಯದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಲ್ಲಿನ ನುರಿತ ವೈದ್ಯರು ಈ ಆರೋಗ್ಯ ಮೇಳದಲ್ಲಿ ಭಾಗವಹಿಸಲಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಜನರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಚಿವ ಡಾ. ಕೆ. ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಸಚಿವ ಡಾ.ಕೆ. ಸುಧಾಕರ್ ಅವರ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಈ ಶಿಭಿರ ನಡೆಯುತ್ತಿದ್ದು, 1.5 ಲಕ್ಷ ಜನರನ್ನು ನೊಂದಾಯಿಸಿ ಅವರಿಗೆ ಆರೋಗ್ಯ ತಪಾಸಣೆ ಮಾಡೋ ಉದ್ದೇಶ ಈ ಮೇಗಾ ಆರೋಗ್ಯ ಮೇಳದ್ದಾಗಿದೆ. ಇನ್ನೂ ಈ ಆರೋಗ್ಯ ಮೇಳದಲ್ಲಿ ಭಾಗವಹಿಸಲು ಆನ್ ಲೈನ್ ನೊಂದಣಿ ಕಡ್ಡಾಯವಾಗಿದೆ. 

ನೋಂದಣಿ ಹೇಗೆ: ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷರು, ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು, ಮನೆ ಮನೆ ಭೇಟಿ ಮಾಡಿ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯವಿರುವವರ ಮಾಹಿತಿಯನ್ನುಸಂಗ್ರಹಿಸಿ ಆನ್ ಲೈನ್ ಮೂಲಕ ನೋಂದಾಯಿಸುತ್ತಿದ್ದಾರೆ.  

ಶಾಸಕ ಅರವಿಂದ ಬೆಲ್ಲದ ಅಕ್ರಮಗಳನ್ನು ಬಯಲಿಗೆ ಎಳೆಯುವೆ: ನಾಗರಾಜ್ ಗೌರಿ

ಉಚಿತ ವಾಹನ ವ್ಯವಸ್ಥೆ: ಆರೋಗ್ಯ ಸೇವೆ ಪಡೆಯಲು ಮೇಳದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಜನರು ನೋಂದಾಯಿಸಿಕೊಳ್ಳುವ ಸಾಧ್ಯತೆಯಿದೆ. ನೋಂದಾಯಿಸಿಕೊಂಡವರಿಗೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಿಂದ ಎಸ್.ಜೆ.ಸಿ.ಐ.ಟಿ ಕಾಲೇಜಿನವರೆಗೂ ಉಚಿತ ವಾಹನ ವ್ಯವಸ್ಥೆಯನ್ನು ಮೇಳ ನಡೆಯುವ ಎರಡು ದಿನಗಳಲ್ಲಿ ಪ್ರತಿ ಎರಡು ಗಂಟೆಗೊಮ್ಮೆ ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಸಾರ್ವಜನಿಕರನ್ನು ಮೇಳಕ್ಕೆ ಕರೆದೊಯ್ಯುದು ಮತ್ತೆ ಅವರವರ ಗ್ರಾಮ ಪಂಚಾಯಿತಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  
 
ಸಾವಿರಕ್ಕೂ ಹೆಚ್ಚು ವೈದ್ಯರು ಮೇಳದಲ್ಲಿ ಭಾಗಿ: ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳ ಸಾವಿರಕ್ಕೂ ಹೆಚ್ಚು ತಜ್ಞ ವೈದ್ಯರು ಮೇಳದಲ್ಲಿ ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. 150 ಕ್ಕೂ ಹೆಚ್ಚು ತಪಾಸಣಾ ಕೌಂಟರ್ ಗಳನ್ನು ತೆರೆದು ನೋಂದಾಯಿತ ಎಲ್ಲರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ ಸ್ಥಳದಲ್ಲಿಯೇ ಸೂಕ್ತ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಚಿಕಿತ್ಸೆಗಳನ್ನು ನೀಡಲಿದ್ದಾರೆ. 

ಮಂಗಳೂರಿನಲ್ಲಿ ಬುರ್ಖಾಧಾರಿಗಳ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣು!

ಸಮಿತಿಗಳ ರಚನೆ: ಬೃಹತ್ ಆರೋಗ್ಯ ಮೇಳವನ್ನು ಸಮರ್ಪಕವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಲು ನೋಂದಣಿ ಸಮಿತಿ ಸೇರಿದಂತೆ ವಾಹನ, ಸ್ವಾಗತ, ವೇದಿಕೆ, ಪ್ರಚಾರ, ಔಷಧಿ ಹಾಗೂ ಜಿಲ್ಲಾ ನೋಡಲ್ ಸಮಿತಿಗಳನ್ನು ರಚಿಸಿ ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೇಳದ ಕರ್ತವ್ಯಕ್ಕೆ ಸ್ವಯಂ ಸೇವಕರು, ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು, ನೆಹರೂ ಯುವ ಕೇಂದ್ರದ ಕಾರ್ಯಕರ್ತರು ಸೇರಿದಂತೆ 1000 ಕ್ಕೂ ಹೆಚ್ಚು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಮೇಳದಲ್ಲಿ ಏನೇನು ಇರಲಿದೆ: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ  (ಎಬಿ-ಎಆರ್ ಕೆ) ನೋಂದಣಿ ಹಾಗೂ ಕಾರ್ಡ್ ವಿತರಣೆ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ತಪಾಸಣೆ, ಎಕೋ ಟೆಸ್ಟ್, ಆಂಜಿಯೋಗ್ರಾಮ್ ಚಿಕಿತ್ಸೆ, ಮೂಳೆ, ದಂತ, ಕಿವಿ ಮತ್ತು ಗಂಟಲು ತಪಾಸಣೆ, ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ, ಉಚಿತ ಕನ್ನಡಕ ವಿತರಣೆ, ಬಾಯಿಯ ಕ್ಯಾನ್ಸರ್ ತಪಾಸಣೆ ಸೇರಿ ಎಲ್ಲಾ ರೀತಿಯ ರಕ್ತದ ಪರೀಕ್ಷೆಗಳು ಲಭ್ಯವಿರಲಿದೆ.

click me!