ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಹುಂಡಿ ಒಡೆದು ಲಕ್ಷ ಲಕ್ಷ ಕಳ್ಳತನ

Suvarna News   | Asianet News
Published : Dec 14, 2019, 10:41 AM ISTUpdated : Dec 14, 2019, 10:56 AM IST
ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಹುಂಡಿ ಒಡೆದು ಲಕ್ಷ ಲಕ್ಷ ಕಳ್ಳತನ

ಸಾರಾಂಶ

ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ದೋಚಲಾಗಿದೆ. ದೇವಾಲಯದ‌ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡಾಗಿದೆ.

ಕೋಲಾರ(ಡಿ.14): ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂಪಾಯಿ ದೋಚಲಾಗಿದೆ. ದೇವಾಲಯದ‌ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡಾಗಿದೆ.

ಕೋಲಾರ ಜಿಲ್ಲೆಯ ಪ್ರಸಿದ್ದ ಅಂತರಗಂಗೆ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಕೋಲಾರ ನಗರಕ್ಕೆ ಹೊಂದಿಕೊಂಡಂತಿರುವ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದ ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯದ‌ ಬಾಗಿಲು ಮುರಿದು ಹುಂಡಿ ಕಳ್ಳತನ ಮಾಡಲಾಗಿದೆ. ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ದೋಚಲಾಗಿದ್ದು, ಇತ್ತೀಚೆಗಷ್ಟೇ ಕಾರ್ತಿಕಮಾಸ ಜಾತ್ರೆ, ಹಾಗೂ ಲಕ್ಷ ದೀಪೋತ್ಸವಕ್ಕೆ ಲಕ್ಷಾಂತರ ಜನ ಭಕ್ತರು ದೇವಾಲಯಕ್ಕೆ ಬಂದಿದ್ದರು.

ಕೆಎಸ್ಸಾರ್ಟಿಸಿ ಅಧಿಕಾರಿ ಖಾತೆಗೆ ಕನ್ನ : ಲಕ್ಷಾಂತರ ರು.ಕಳಕೊಂಡ್ರು

ಹುಂಡಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಇರುವುದನ್ನು ತಿಳಿದಿದ್ದ ಕಳ್ಳರು ಹುಂಡಿ ಕಳ್ಳತನ ಮಾಡಿದ್ದು, ಹುಂಡಿ ಅಗೆಯಲು ತಂದಿದ್ದ ಹಾರೆಯನ್ನು ಬಿಟ್ಟು ಹೋಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮದುವೆ ಬಳಿಕದ ಜೀವನಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದ ಪ್ರೇಮಿಗಳು

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!