ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ರೈತ : ಹಲವರ ಬದುಕಿಗೆ ಬೆಳಕು

Published : Dec 14, 2019, 10:39 AM ISTUpdated : Dec 14, 2019, 10:56 AM IST
ಸಾವಿನಲ್ಲೂ ಸಾರ್ಥಕತೆ ಮೆರೆದ ಯುವ ರೈತ : ಹಲವರ ಬದುಕಿಗೆ ಬೆಳಕು

ಸಾರಾಂಶ

ಹಾಸನದ ಯುವ ರೈತನೋರ್ವ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಲವರ ಜೀವನಕ್ಕೆ ಈ ಮೂಲಕ ಬೆಳಕಾಗಿದ್ದಾರೆ. 

ಬೆಂಗಳೂರು/ಹಾಸನ [ಡಿ.14]: ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಯುವ ರೈತನೋರ್ವ ಮೃತಪಟ್ಟಿದ್ದು ಸಾವಿನಲ್ಲೂ  ಸಾರ್ಥಕತೆ ಮೆರೆದಿದ್ದಾರೆ. 

ಗೊರಗುಂಟೆ ಪಾಳ್ಯದ ಸ್ಪರ್ಷ ಆಸ್ಪತ್ರೆಯಲ್ಲಿ ಯುವ ರೈತ ವಿಕಾಸ್ ನಿಧನರಾಗಿದ್ದು, ಅಂಗಾಂಗ ದಾನ ಮಾಡಿದ್ದಾರೆ. ಕಳೆದ 8 ದಿನಗಳಿಂದ ಕೋಮಾದಲ್ಲಿದ್ದ ರೈತ ವಿಕಾಸ್ ಅವರ ಅಂಗಾಂಗ ದಾನದಿಂದ 8 ಜನರ ಬದುಕಿಗೆ ಬೆಳಕಾಗಿದ್ದಾರೆ. 

ಹಾಸನ ಜಿಲ್ಲೆಯ ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಳ್ಳಿ ಮೂಲದ ಪುಟ್ಟಸ್ವಾಮಿ ಗೌಡ ಹಾಗೂ ದಿ.ಶಶಿಕಲಾ ದಂಪತಿಯ ಪುತ್ರ ವಿಕಾಸ್ ಅವರು ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬಿಜಿಎಸ್  ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ವಿಕಾಸ್ ಅವರ ಅಂಗಾಂಗ ರವಾನೆ ಮಾಡಲಾಗಿದೆ. 

ರೈತಾಪಿ ವರ್ಗಕ್ಕೆ ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಜಮಾ...

ಸ್ಪರ್ಷ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ,'ಜೀವ ಸಾರ್ಥಕತೆ'  ಯೋಜನೆಗೆ ದಾನ ಮಾಡಿದ್ದಾರೆ. 

ಈ ಹಿಂದೆಯೂ ಕೂಡ ಈ ರೀತಿಯ ಹೃದಯ ಸೇರಿದಂತೆ ಅಂಗಾಂಗ ದಾನ ಪ್ರಕ್ರಿಯೆಗಳು ನಡೆದು ಹಲವರ ಬದುಕಿಗೆ ಬೆಳಕಾಗಿದ್ದ ಉದಾಹರಣೆಗಳಿದ್ದು ಇದೀಘ ಯುವ ರೈತನ ಸಾವು ಅಂಗಾಂಗ ದಾನದ ಮೂಲಕ ಸಾರ್ಥಕವಾಗಿದೆ.

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು