ಜೊಯಿಡಾ : ಆತಂಕ ಸೃಷ್ಟಿಸಿದ್ದ ಹುಲಿ ಕೊನೆಗೂ ಬೋನಿಗೆ ಸೆರೆ

By Ravi Janekal  |  First Published Dec 19, 2022, 2:30 PM IST

ರಾತ್ರೋರಾತ್ರಿ ಮನೆಮುಂದೆ ಕಟ್ಟಿಹಾಕಿದ ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ವ್ಯಾಘ್ರ ಕೊನೆಗೂ ಬಲೆಗೆ ಬಿದ್ದಿದೆ. ಕಳೆದ ಕೆಲವು ವಾರಗಳಿಂದ ಹುಲಿ ದಾಳಿ ಆತಂಕದಲ್ಲಿದ್ದ ಜೊಯಿಡಾ ಭಾಗದ ಸುತ್ತಮುತ್ತಲಿನ ಹಳ್ಳಿಗಳ ರೈತಾಪಿ ವರ್ಗ, ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. 


ಕಾರವಾರ, ಉತ್ತರಕನ್ನಡ (ಡಿ.19): ರಾತ್ರೋರಾತ್ರಿ ಮನೆಮುಂದೆ ಕಟ್ಟಿಹಾಕಿದ ಜಾನುವಾರುಗಳನ್ನು ಬೇಟೆಯಾಡುತ್ತಿದ್ದ ವ್ಯಾಘ್ರ ಕೊನೆಗೂ ಬಲೆಗೆ ಬಿದ್ದಿದೆ. ಕಳೆದ ಕೆಲವು ವಾರಗಳಿಂದ ಹುಲಿ ದಾಳಿ ಆತಂಕದಲ್ಲಿದ್ದ ಜೊಯಿಡಾ ಭಾಗದ ಸುತ್ತಮುತ್ತಲಿನ ಹಳ್ಳಿಗಳ ರೈತಾಪಿ ವರ್ಗ, ಸ್ಥಳೀಯರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. 

ಕಳೆದೊಂದು ವಾರದಿಂದ ಪಣಸೋಲಿ, ಗುಂದ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದ ವ್ಯಾಘ್ರ ಹತ್ತು ದಿನಗಳಲ್ಲಿ 5 ಜಾನುವಾರುಗಳನ್ನು ಹೊತ್ತೊಯ್ದಿತ್ತು. ಹುಲಿ ದಾಳಿಯ ಆತಂಕದಲ್ಲಿ ರೈತರು ಕೃಷಿ ಚಟುವಟಿಕೆ ನಿಲ್ಲಿಸಿ ಮನೆಯಲ್ಲೇ ಕೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

Tap to resize

Latest Videos

ಜೋಯಿಡಾ: ಅರಣ್ಯ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ

ಹುಲಿಯನ್ನು ಸೆರೆ ಹಿಡಿಯುವಂತೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಆರ್.ವಿ.ದೇಶ್‌ಪಾಂಡೆ ಅರಣ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಹಿನ್ನೆಲೆ ಕಾರ್ಯಪ್ರವೃತ್ತರಾಗಿದ್ದ ಅರಣ್ಯಾಧಿಕಾರಿಗಳು ಅಯಾಕಟ್ಟಿನಲ್ಲಿ ಬೋನುಗಳನ್ನಿಟ್ಟು ಹುಲಿ ಸೆರೆಗೆ ಕಾಯುತ್ತಿದ್ದರು. ಕೊನೆಗೂ ಹುಲಿರಾಯ ಬೋನಿಗೆ ಬಿದ್ದಿದೆ. ಗುಂದ ಅರಣ್ಯ ವ್ಯಾಪ್ತಿಯ ಹೆಣಕೋಳ ಬಳಿ ಬೋನಿನಲ್ಲಿ ಸಿಲುಕಿಕೊಂಡ ಹುಲಿ. ಭಾನುವಾರ ರಾತ್ರಿ ಬೋನಿನೊಳಗೆ ಬಿದ್ದಿರುವ ಹುಲಿ. ಹುಲಿ ಸೆರೆ ಸಿಕ್ಕ ಸುದ್ದಿ ಕೇಳಿ ಜೊಯಿಡಾ ಜನರು ನಿಟ್ಟುಸಿರು ಬಿಟ್ಟರು.

ಹುಲಿ ಸೆರೆ ಸಿಕ್ಕಿರುವ ಜೊಯಿಡಾ ತಾಲೂಕಿನ ಗುಂದ ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೆ ಇದೆ. ನಿನ್ನೆ ರಾತ್ರಿ ಬೋನಿಗೆ ಬಿದ್ದಿರುವ ಹುಲಿಗೆ ಮೈಮೇಲೆ ಸ್ವಲ್ಪ ಗಾಯ ಆಗಿರುವುದರಿಂದ ಚಿಕಿತ್ಸೆ ನೀಡಲಾಗಿದೆ. ಹಂಪಿ ಮೃಗಾಲಯಕ್ಕೆ ಕಳುಹಿಸುವುದಾಗಿ ಅರಣ್ಯ ಇಲಾಖೆ ನಿರ್ಧರಿಸಿದೆ. 

ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದವನನ್ನು ಎಳೆದೊಯ್ದ ಮೊಸಳೆ!

ನೀರಿಗೆ ಇಳಿದ ಅಪರಿಚಿತ ಮೊಸಳೆ ಪಾಲು:

ಕಾರವಾರ: ದಾಂಡೇಲಿ ಈಶ್ವರ ದೇವಾಲಯದ ಹತ್ತಿರ ಕಾಳಿ ನದಿಯಲ್ಲಿ ನೀರಿಗೆ ಇಳಿದ ಅಪರಿಚಿತ ವ್ಯಕ್ತಿಯೊಬ್ಬನನ್ನು ಎರಡು ಮೊಸಳೆಗಳು ಎಳೆದುಕೊಂಡು ಹೋದ ಘಟನೆ  ಇಂದು ಬೆಳಗ್ಗೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಗಮಿಸಿ ವ್ಯಕ್ತಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ.

click me!