ನಗರದ ಅಂಬೇವಾಡಿ ಭಾಗದಲ್ಲಿ ಏಳು ವರ್ಷಗಳ ಹಿಂದೆ ಆರಂಭವಾದ ಆಶ್ರಯ ಮನೆ ನಿರ್ಮಾಣ ಕಾಮಗಾರಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಬಡವರು ತೊಂದರೆ ಅನುಭವಿಸುವಂತಾಗಿದೆ.
ದಾಂಡೇಲಿ (ಫೆ.16) : ನಗರದ ಅಂಬೇವಾಡಿ ಭಾಗದಲ್ಲಿ ಏಳು ವರ್ಷಗಳ ಹಿಂದೆ ಆರಂಭವಾದ ಆಶ್ರಯ ಮನೆ ನಿರ್ಮಾಣ ಕಾಮಗಾರಿ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಬಡವರು ತೊಂದರೆ ಅನುಭವಿಸುವಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ(Dandeli) ನಗರದಲ್ಲಿ ಜಿ+2 ಆಶ್ರಯ ಯೋಜನೆ(G+2 ashrayamane Scheme)ಯಡಿ 1100 ಮನೆಗಳನ್ನು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಂಜೂರು ಮಾಡಲಾಗಿದ್ದು, ನಗರಸಭೆಯವರು ಅರ್ಹ ಫಲಾನುಭವಿಗಳಿಂದ ಮುಂಗಡ ಹಣವನ್ನು ಕಟ್ಟಿಸಿಕೊಂಡಿದ್ದಾರೆ. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ(ST)ದವರಿಂದ .50 ಸಾವಿರ ಮತ್ತು ಸಾಮಾನ್ಯ ವರ್ಗದವರಿಂದ .70 ಸಾವಿರದಂತೆ ಸುಮಾರು 700 ಫಲಾನುಭವಿಗಳು ಹಣ ತುಂಬಿದ್ದಾರೆ. ಆದರೆ ಇಲ್ಲಿಯವರೆಗೆ ಮನೆಗಳು ನಿರ್ಮಾಣಗೊಂಡು ಫಲಾನುಭವಿಗಳಿಗೆ ಸಿಕ್ಕಿಲ್ಲ. ಕೆಲವರು ಸಾಲ ಮಾಡಿ ಹಣ ಭರಣ ಮಾಡಿದ್ದಾರೆ. ಇನ್ನೂ ಕೆಲವರು ಮಹಿಳೆಯರ ಒಡವೆಗಳನ್ನು ಒತ್ತೆ ಇಟ್ಟಿದ್ದಾರೆ. ಇಲ್ಲಿಯವರೆಗೂ ಮನೆ ಕೆಲಸ ಸಂಪೂರ್ಣವಾಗಿ ಮುಗಿದಿರುವುದರಿಂದ ಅಂಥವರು ಕಷ್ಟಕ್ಕೆ ಸಿಲುಕಿದ್ದಾರೆ.
undefined
BIG-3 ಬಿಗ್ ಇಂಪ್ಯಾಕ್ಟ್: 74 ಫಲಾನುಭವಿಗಳಿಗೆ ಆಶ್ರಯ ಮನೆ ಹಸ್ತಾಂತರ
ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಗರಸಭೆಗೆ ಭೇಟಿ ನೀಡಿ ವಿಚಾರಿಸಲಾಗಿ, 240 ಮನೆಗಳ ಕೆಲಸ ಮುಗಿದಿದೆ. ಅವುಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮ ವಹಿಸುತ್ತೇವೆ ಎಂದು ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಆದರೆ ಇನ್ನೂ ಉಳಿದ ಮನೆಗಳ ಕೆಲಸ ಯಾವಾಗ ಮುಗಿಯುತ್ತದೆ ಎನ್ನುವ ಬಗ್ಗೆ ಖಚಿತ ಉತ್ತರ ಸಿಕ್ಕಿಲ್ಲ. ನಗರಸಭೆಯಿಂದ 10 ಎಕರೆ ಭೂಮಿಯನ್ನು ಮನೆ ನಿರ್ಮಾಣಕ್ಕೆ ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಸುಮಾರು .53 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು.
2016ರಲ್ಲಿ ಆರ್.ವಿ. ದೇಶಪಾಂಡೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನೂ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಕೆಲಸಗಳು ಮುಗಿದಿಲ್ಲ. ಶೀಘ್ರ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸಂಬಂಧಪಟ್ಟಇಲಾಖೆಯ ಯಾವ ಅಧಿಕಾರಿಯೂ ಪರಿಶೀಲನೆ ಮಾಡಿಲ್ಲ. ಫಲಾನುಭವಿಗಳು ಮಾತ್ರ ನಗರಸಭೆ ಮತ್ತು ಬ್ಯಾಂಕುಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ.
ಮುಂದಿನ ಕಂತಿಗಾಗಿ ಬ್ಯಾಂಕ್‌ನಿಂದ ಸಾಲ ಮಂಜೂರು ಮಾಡಬೇಕಾಗಿದೆ. ಸಂಬಂಧಪಟ್ಟಅಧಿಕಾರಿಗಳಿಗೆ ಫಲಾನುಭವಿಗಳು ಶಾಪ ಹಾಕುತ್ತಿದ್ದಾರೆ. ಚುನಾವಣೆ ಬಂದಾಗ ರಾಜಕೀಯ ನಾಯಕರು ನಮ್ಮ ಮನೆಗಳಿಗೆ ಅಲೆದಾಡುತ್ತಾರೆ. ಚುನಾವಣೆ ಮುಗಿದ ಆನಂತರ ಯಾರೂ ಮಾತನಾಡಿಸುವವರಿಲ್ಲ. ಬಡವರ, ಕೂಲಿಕಾರ್ಮಿಕರ ಗೋಳು ಕೇಳುವವರೇ ಇಲ್ಲ. ಗುತ್ತಿಗೆದಾರ ತಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಫಲಾನುಭವಿಗಳು ಆತಂಕ ಪಡುತ್ತಿದ್ದಾರೆ.
ಅನಧಿಕೃತ ‘ಆಶ್ರಯ ಮನೆ: ಕ್ರಿಮಿನಲ್ ಕೇಸ್ ಫಿಕ್ಸ್
ಬಡಜನರಿಗಾಗಿ ನಿರ್ಮಾಣಗೊಳ್ಳುತ್ತಿರುವ ಒಂದು ಉತ್ತಮ ಬೃಹತ್ ಯೋಜನೆ ಇದಾಗಿದ್ದು, ಸಂಬಂಧಪಟ್ಟಅಧಿಕಾರಿಗಳು ಕಾಮಗಾರಿಯ ಬಗ್ಗೆ ಲಕ್ಷ್ಯವಹಿಸಿ ಬಡವರಿಗೆ ಮನೆಗಳು ಬೇಗ ಸಿಗುವಂತೆ ಕೆಲಸ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.