ಆರ್ಥಿಕ-ಸಾಮಾಜಿಕ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ ಎಂದು ಸಂಸದೆ ಸುಮಲತಾ ಅಂಬರೀಷ್ ಬಣ್ಣಿಸಿದರು. ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಮಹಿಳೆಯರಿಗೆ ಕುಟುಂಬದ ನಿರ್ವಹಣೆ ಜೊತೆಗೆ ಮಕ್ಕಳಿಗೆ ಮೊದಲ ಶಿಕ್ಷಕರಾಗಿ ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂದರು.
ಮಂಡ್ಯ (ಸೆ.15): ಆರ್ಥಿಕ-ಸಾಮಾಜಿಕ ಸುಧಾರಣೆಗೆ ಮಹಿಳೆಯರ ಪಾತ್ರ ಅಪಾರ ಎಂದು ಸಂಸದೆ ಸುಮಲತಾ ಅಂಬರೀಷ್ ಬಣ್ಣಿಸಿದರು. ತಾಲೂಕಿನ ಬಿ.ಹೊಸೂರು ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹೊರಾವರಣ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ 2022-22ನೇ ಸಾಲಿನ ವಾರ್ಷಿಕ ದಿನಾಚರಣೆ, ಸ್ನಾತಕ ಪದವಿ ಉದ್ಘಾಟನೆ ಹಾಗೂ ಜ್ಞಾನಕಾವೇರಿ ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.
ಸಮಾಜ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಅಪಾರ. ಮಹಿಳೆಯರಿಗೆ ಕುಟುಂಬದ ನಿರ್ವಹಣೆ ಜೊತೆಗೆ ಮಕ್ಕಳಿಗೆ ಮೊದಲ ಶಿಕ್ಷಕರಾಗಿ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಈ ಎಲ್ಲವನ್ನು ನಿಭಾಯಿಸುವ ಶಕ್ತಿ ಮಹಿಳೆಯರಿಗಿದೆ ಎಂದರು. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕಷ್ಟುನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಹಿಂದೆ ಹೆಣ್ಣು ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸುತ್ತಿರಲಿಲ್ಲ. ಮದುವೆ ಮಾಡಿ ಕಳುಹಿಸಿದರೆ ಸಾಕು ಎಂದು ಪೋಷಕರು ಭಾವಿಸಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.
Mandya: ಕೇಂದ್ರೀಯ ಶಾಲೆಗೆ ಕಾಯಂ ಶಿಕ್ಷಕರ ನೇಮಕ: ಸಂಸದೆ ಸುಮಲತಾ
ನಿಮಗೆಲ್ಲ ಉತ್ತಮ ಅವಕಾಶಗಳು ಲಭಿಸಿವೆ. ಇದರ ಸದುಪಯೋಗ ಪಡೆದುಕೊಂಡು ಉನ್ನತ ಸ್ಥಾನ ಗಳಿಸಿ ಎಂದು ಶುಭ ಹಾರೈಸಿದರು. ನನಗೆ ಎಲ್ಲವೂ ಸಿಕ್ಕಿದೆ. ಪದವೀಧರೆಯಾಗಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ಕೊರಗಿದೆ. ನಿಮಗೆ ಆ ಅವಕಾಶ ಸಿಕ್ಕಿದೆ. ನೀವೇ ಅದೃಷ್ಟವಂತರು ಎಂದರು. ಅಂಬರೀಷ್ ಅವರು ವಸತಿ ಸಚಿವರಾಗಿದ್ದ ಅವಧಿಯಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಗೆ 18 ಎಕರೆ ಜಾಗ ಗುರುತಿಸಿ 6 ತಿಂಗಳ ಅವಧಿಯಲ್ಲಿ ವಿವಿಗೆ ಕೊಡಿಸಿದ್ದಾರೆ. ನೂತನ ಕಟ್ಟಡ ನಿರ್ಮಾಣ ಮಾಡಿಸಿದ್ದಾರೆ ಎಂದರು ಸುಮಲತಾ.
ಕಾಲೇಜಿಗೆ ಲೈಬ್ರರಿ, ಕುಡಿಯುವ ನೀರಿನ ವ್ಯವಸ್ಥೆ, ಬಿಸಿಎಂ ಹಾಸ್ಟೆಲ್ ಹಾಗೂ ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಸಿಕೊಡುವಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಸಂಸದರ ಅನುದಾನದಿಂದ ಆ ಕೆಲಸಗಳನ್ನು ಮಾಡಿಸಿಕೊಡುವ ಭರವಸೆ ನೀಡಿದರು. ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಸಚಿವ ಬಿ.ಎಸ್.ನಾವಿ, ಕುಲಪತಿ ಬಿ.ಕೆ.ತುಳಸಿಮಾಲ, ವಿಶೇಷಾಧಿಕಾರಿ ಪ್ರೊ. ಎಚ್.ಎಂ.ಹೇಮಲತಾ, ಕನ್ನಡ ವಿಭಾಗದ ಉಪನ್ಯಾಸಕಿ ಡಾ.ಗೀತಾಮಣಿ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ನಾನು ಭ್ರಷ್ಟಳಾಗಿದ್ದರೆ ಬಹಿರಂಗ ಚರ್ಚೆಗೆ ಸಿದ್ಧ: ನಾನು ಭ್ರಷ್ಟಳಾಗಿದ್ದರೆ ಅಥವಾ ಭ್ರಷ್ಟಾಚಾರವೆಸಗಿದ್ದರೆ ದಾಖಲೆಗಳೊಂದಿಗೆ ಬನ್ನಿ. ಯಾವಾಗಲಾದರೂ ಎಲ್ಲಿಯಾದರೂ ಬಹಿರಂಗ ಚರ್ಚೆಗೆ ಸಿದ್ಧಳಿದ್ದೇನೆ. 24*7 ಯಾವಾಗ ಚರ್ಚೆಗೆ ಬರಲು ನಾನು ರೆಡಿಯಾಗಿದ್ದೇನೆ. ಇದು ನಾನು ನಿಮ್ಮ ಮುಂದಿಡುತ್ತಿರುವ ಸವಾಲು ಎಂದು ಸಂಸದೆ ಸುಮಲತಾ ಅಂಬರೀಶ್ ಜೆಡಿಎಸ್ ಶಾಸಕರ ವಿರುದ್ಧ ಗುಡುಗಿದರು. ಬಿ.ಹೊಸೂರು ಕಾಲೋನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬರೀಶ್ ಅವರ ಕುಟುಂಬದಲ್ಲಿ ಭ್ರಷ್ಟಾಚಾರ ಎನ್ನುವುದಿಲ್ಲ. ಈ ಜನ್ಮದಲ್ಲಿ ಭ್ರಷ್ಟಾಚಾರ ಮಾಡುವುದೂ ಇಲ್ಲ. ದೇವರು ನಮ್ಮನ್ನು ಚೆನ್ನಾಗಿ ಇಟ್ಟಿದ್ದಾನೆ. ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಕಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ: ಸುಮಲತಾ ವಿರುದ್ಧ ಅನ್ನದಾನಿ ಕಿಡಿ
ನನ್ನ ವಿರುದ್ಧ ಆರೋಪ ಮಾಡುವವರು ಜಾಮೀನಿನ ಮೇಲೆ ಇದ್ದಾರೆ. ಹಲ್ಲು ಕೀಳಿಸಿಕೊಳ್ಳಲು ಲಂಡನ್‌ಗೆ ಹೋಗುವುದಾಗಿ ಸಿಬಿಐ ಕೋರ್ಚ್ ಪರ್ಮಿಷನ್ ತಗೊಂಡಿದ್ದಾರೆ. ಅವರ ಮೇಲೆ ಎಂತೆಂಥಾ ಆರೋಪ ಇದೆ. ಅದು ನಾನು ಮಾಡಿರೋ ಆರೋಪ ಅಲ್ಲ. ಸಿಬಿಐ ನ್ಯಾಯಾಲಯದಲ್ಲಿದೆ ಅವರ ಅವ್ಯವಹಾರ. ಮೊನ್ನೆಯಷ್ಟೇ ಸಿಬಿಐ ಐದು ಮಂದಿ ಕ್ರಿಮಿನಲ್‌ಗಳಿಗೆ ಶಿಕ್ಷೆ ಕೊಟ್ಟಿದೆ. ನಾಳೆ ಇವರಿಗೂ ಅದೇ ಗತಿಯಾದರೆ ಏನು ಮಾಡುವರು. ಇಂತಹವರಿಂದ ನನ್ನ ಮೇಲೆ ಆರೋಪ ಬರುವುದು ಯಾವ ನ್ಯಾಯ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.