ಅಯ್ಯೋ..! ಜಿಲ್ಲಾಧಿಕಾರಿ ಮನೆ ಮುಂಭಾಗದ ರಸ್ತೆನೂ ಹೀಗೆನಾ?

By Kannadaprabha News  |  First Published Oct 8, 2022, 8:56 AM IST
  • ಅಯ್ಯೋ..! ಜಿಲ್ಲಾಧಿಕಾರಿ ಮನೆ ಮುಂಭಾಗದ ರಸ್ತೆನೂ ಹೀಗೆನಾ?
  • ರಸ್ತೆ ಸುರಕ್ಷತಾ ಪ್ರಾಧಿಕಾರ ಅಧ್ಯಕ್ಷರಿವರು ಫುಟ್‌ಪಾತ್‌, ಮಳೆ ನೀರು ಹೋಗಲು ಚರಂಡಿನೇ ಇಲ್ಲ

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಅ.8) : ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ವ್ಯಾಪಕ ಕ್ರಮಗಳ ಕೈಗೊಳ್ಳಲು ಶಾಸನ ಬದ್ಧ ಅಧಿಕಾರ ಹೊಂದಿರುವ ಜಿಲ್ಲಾಧಿಕಾರಿ ಮನೆ ಮುಂಭಾಗದ ರಸ್ತೆ ಪರಿಸ್ಥಿತಿನೂ ಉಳಿದ ರಸ್ತೆಗಳ ರೀತಿಯೇ ಇದ್ದು ಚರಂಡಿ, ಫುಟ್‌ಪಾತ್‌ ಎಲ್ಲಿದೆ ಎಂದು ಹುಡುಕಬೇಕು. ಊರಿಗೆಲ್ಲ ಆಗಿದ್ದು ನಮ್‌ ಮನೆ ಬಾಗಿಲಲ್ಲೂ ಆಗಲಿ ಅಂದುಕೊಂಡರಾ ಜಿಲ್ಲಾಧಿಕಾರಿ?

Latest Videos

undefined

ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆಗಳು: 'ದುರ್ಗಾದೇವಿ' ವೇಷ ತೊಟ್ಟು ಬಾಲಕಿ ವಿಭಿನ್ನ ಅಭಿಯಾನ

ಡಿಡಿಪಿಐ ಕಚೇರಿಯಿಂದ ಸಂತ ಜೋಸೆಫರ ಕಾನ್ವೆಂಟ್‌ವರೆಗೂ ಹೊಸದಾಗಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಹೆಚ್ಚು ಕಡಿಮೆ ಮುಕ್ತಾಯದ ಹಂತಕ್ಕೆ ಬಂದಿದೆ. ಕೇವಲ ಎರಡು ವರ್ಷಗಳ ಹಿಂದೆಯಷ್ಟೇ ಈ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ಚೆನ್ನಾಗಿಯೇ ಇತ್ತು. ಆದರೆ ಕಾಂಕ್ರೀಟ್‌ ಎಂಬ ಆಧುನಿಕ ಜಗತ್ತಿನ ಪರಿಕಲ್ಪನೆಗೆ ಗಟ್ಟಿಮುಟ್ಟಾದ ರಸ್ತೆಗಳು ಕೂಡಾ ಜೆಸಿಬಿಯಿಂದ ಕುಟ್ಟಿಸಿಕೊಂಡು ರೂಪಾಂತರಗೊಳ್ಳುತ್ತಿವೆ.

ಡಿಡಿಪಿಐ ಕಚೇರಿಯಿಂದ ಡಿವೈಎಸ್ಪಿ ಮನೆವರೆಗೆ ಹಾಲಿ ಸಿಸಿ ರಸ್ತೆ ಮಾಡಲಾಗಿದೆ. ಆದರೆ ಸಂತ ಜೋಸೆಫರ ಕಾನ್ವೆಂಟ್‌ವರೆಗೆ ಯಾವಾಗ ಮಾಡುತ್ತಾರೋ, ಇಷ್ಟಕ್ಕೆ ಅನುದಾನವೇನಾದರೂ ಮುಗಿಯಿತೇ ಅಥವಾ ಶಾಲೆಗ ರಜೆ ಬಿಟ್ಟಾಗ ಉಳಿದ ಕಾಮಗಾರಿ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಹಾಲಿ ಮಾಡಲಾಗಿರುವ ಸಿಸಿ ರಸ್ತೆ ಎರಡು ಬದಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಇರಬೇಕಿತ್ತು. ಅದು ಕಾಣಿಸುತ್ತಿಲ್ಲ. ಡಿಡಿಪಿಐ ಕಚೇರಿಯಿಂದ ತುಸು ಮುಂದಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ನಿವಾಸದ ತಿರುವು ಬರುತ್ತದೆ. ಈ ತಿರುವು ಅರಂಭವಾಗುವ ಕಡೆಯಿಂದ ಚರಂಡಿ ಇದೆ. ಈ ತಿರುವಿನ ತನಕ ರಸ್ತೆ ಮೇಲೆ ಹರಿದು ಬರುವ ನೀರು ಚರಂಡಿಗಳಿಗೆ ಹೋಗುತ್ತವೆ.

ಪೂರ್ತಿ ಕಾಂಕ್ರೀಟ್‌ ಹರಡಿದೆ:

ನಿಜಲಿಂಗಪ್ಪ ಅವರ ನಿವಾಸದ ಎದುರಿಗೆ ಇರುವ ಡಿಸಿ ನಿವಾಸದ ಕಾಂಪೌಂಡ್‌ ಪಕ್ಕದಲ್ಲಿಯೇ ಚರಂಡಿ ಇದ್ದು ಅಲ್ಲಿಗೂ ನೀರು ಹೋಗುತ್ತದೆ. ಆದರೆ ಡಿಸಿ ಮನೆ ಮುಂಭಾಗದಿಂದ ಕಾನ್ವೆಂಟ್‌ ವರೆಗೆ ಹೋಗುವ ರಸ್ತೆ ಪರಿಸ್ಥಿತಿ ಬೇರೆಯದೇ ಇದೆ. ಸಂತ ಜೋಸೆಫರ ಕಾನ್ವೆಂಟ್‌ಗೆ ನಿತ್ಯ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಈ ರಸ್ತೆ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತದೆ. ಹಾಗಾಗಿ ಈ ರಸ್ತೆ ಎರಡು ಬದಿಗಳಲ್ಲಿ ವಿದ್ಯಾರ್ಥಿಗಳು ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಈ ಮೊದಲು ಫುಟ್‌ಪಾತ್‌ ಇತ್ತು. ಈಗ ಫುಟ್‌ಪಾತ್‌ ಕಿತ್ತು ಪೂರ್ತಿ ಕಾಂಕ್ರೀಟ್‌ ಹರಡಲಾಗಿದೆ. ಚರಂಡಿಗೂ ಜಾಗ ಬಿಟ್ಟು ಕೊಳ್ಳಲಾಗಿಲ್ಲ.

ಚಿಕ್ಕಮಗಳೂರು: ದಶಕಗಳಿಂದ ಹದಗೆಟ್ಟ ರಸ್ತೆ: ರಿಪೇರಿಗೆ ಆಗ್ರಹಿಸಿ ರೋಡ್‌ನಲ್ಲಿ ಗಿಡನೆಟ್ಟು ಮಹಿಳೆಯರ ಪ್ರತಿಭಟನೆ

ಜಿಲ್ಲಾಧಿಕಾರಿ ಮನೆ ಪಕ್ಕ ಜಿಲ್ಲಾ ಪಂಚಾಯಿತಿ ಸಿಇಒ ನಿವಾಸವಿದೆ. ನಂತರÜ ಉಪ ವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಅವರ ನಿವಾಸದ ಪಕ್ಕ ಡಿವೈಎಸ್ಪಿ ಸರ್ಕಾರಿ ಕ್ವಾಟ್ರಸ್‌ಗಳಿವೆ. ಡಿಸಿ ಮನೆ ಮುಂಭಾಗದಿಂದ ಬರುವ ನೀರು ಈ ಎಲ್ಲರ ಮುಂಭಾಗದÜ ರಸ್ತೆ ಮೇಲೆ ಹರಿದು ನಂತರ ಕಾನ್ವೆಂಟ್‌ ಮುಂಭಾಗದಿಂದ ಎಸ್ಪಿ ಕಚೇರಿವರೆಗೆ ಹೋಗಿ ಅಲ್ಲಿರುವ ಚರಂಡಿಗೆ ಸೇರ್ಪಡೆಯಾಗುತ್ತದೆ.

ಮಳೆ ನೀರು ಹರಿದು ಹೋಗುವುದು ಒತ್ತಟ್ಟಿಗಿರಲಿ, ಆದರೆ ಸಾವಿರಾರು ವಿದ್ಯಾರ್ಥಿಗಳು ಓಡಾಡುವ ಈ ಜಾಗದಲ್ಲಿ ಫುಟ್‌ಪಾತ್‌ ಬೇಡವೇ. ಡಿವೈಎಸ್ಪಿ ಮನೆ ಮುಂಭಾಗ ವಿದ್ಯುತ್‌ ಕಂಬ ಸ್ಥಳಾಂತರಿಸದೇ ರಸ್ತೆ ಮಾಡಲಾಗಿದೆ. ಇಡೀ ಚಿತ್ರದುರ್ಗದ ತುಂಬಾ ಸುತ್ತಾಡಿ ರಸ್ತೆಗಳು ಹೇಗಿವೆ ಎಂಬುದ ನೋಡಲು ಜಿಲ್ಲಾಧಿಕಾರಿಗೆ ಸಾಧ್ಯವಾಗದೇ ಇರಬಹುದು. ಆದರೆ ತಮ್ಮ ಮನೆ ಮುಂಭಾಗ ನಡೆಯುವ ಕಾಮಗಾರಿ ಕಾರಲ್ಲಿ ಕುಳಿತೇ ನೋಡಬಹುದಿತ್ತು. ಜಿಲ್ಲೆಯ ಆಯಕಟ್ಟಿನ ಅಧಿಕಾರಿಗಳ ಮನೆ ಮುಂಭಾಗದ ರಸ್ತೆಗಳೇ ಇಷ್ಟೊಂದು ಅಧ್ವಾನವಾಗಿ ರೂಪುಗೊಂಡರೆ ಉಳಿದ ಕಡೆ ಹೇಗಿರಬೇಡ?

click me!