ಚಿಕ್ಕಮಗಳೂರು (ಅ.8) : ಜಿಲ್ಲಾ ಕೇಂದ್ರಕ್ಕೆ ಶುಕ್ರವಾರ ಆಗಮಿಸಿದ ಕಿತ್ತೂರು ಉತ್ಸವದ ಜ್ಯೋತಿಯನ್ನು ಜಿಲ್ಲಾಡಳಿತ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಬಳಿಕ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕಿತ್ತೂರು ಉತ್ಸವದ ಜ್ಯೋತಿಯನ್ನು ವೀರಗಾಸೆ ಕುಣಿತದೊಂದಿಗೆ ಬರಮಾಡಿಕೊಳ್ಳಲಾಯಿತು. ಹೂವಿನಹಾರಹಾಕಿ ಪುಷ್ಪಾರ್ಚನೆ ನೆರವೇರಿಸಿ ನಂತರ ಬೀಳ್ಕೊಡಲಾಯಿತು.
.23ರಿಂದ 3 ದಿನ ಕಿತ್ತೂರು ಉತ್ಸವ: ಈ ಬಾರಿ ಎಲ್ಲ ಜಿಲ್ಲೆಗಳಿಗೆ ಜ್ಯೋತಿ, ಸಚಿವ ಕಾರಜೋಳ
ಬೆಳಗಾವಿ ಜಿಲ್ಲೆಯ ಕಿತ್ತೂರು ಚೆನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿ ವೀರಮರಣ ಹೊಂದಿದ್ದು, ಅದರ ನೆನಪಿಗಾಗಿ ಕಿತ್ತೂರು ಉತ್ಸವನ್ನು ಅಲ್ಲಿನ ಜಿಲ್ಲಾಡಳಿತ ಹಮ್ಮಿಕೊಂಡು ಬರುತ್ತಿದೆ. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸುತ್ತಾಡುತ್ತಿದ್ದ ಜ್ಯೋತಿಯನ್ನು ಈ ವರ್ಷ ರಾಜ್ಯಾದ್ಯಂತ ಸಂಚರಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ್ಯೋತಿಗೆ ಅ.2ರಂದು ಚಾಲನೆ ನೀಡಿದ್ದು, 8 ಜಿಲ್ಲೆಗಳನ್ನು ಸಂಚರಿಸಿದ ಜ್ಯೋತಿಯು ಶುಕ್ರವಾರ ಕಾಫಿನಾಡಿಗೆ ಆಗಮಿಸಿತು. ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜ್ಯೋತಿಗೆ ಶಾಸಕ ಟಿ.ಡಿ.ರಾಜೇಗೌಡ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.
ಜಿಲ್ಲಾಧಿಕಾರಿ ಅವರು ಜ್ಯೋತಿ ಯಾತ್ರೆಗೆ ಹಸಿರು ನಿಶಾನೆ ತೋರುವ ಮೂಲಕ ಮುಂದಿನ ಜಿಲ್ಲೆಗೆ ತೆರಳಲು ಅನುವು ಮಾಡಿಕೊಟ್ಟರು. ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ನಾಡೆಂದು ಪ್ರಸಿದ್ಧಿ ಪಡೆದಿರುವ ಕಿತ್ತೂರಿನ ಉತ್ಸವಕ್ಕೆ ಅಲ್ಲಿ ನೆರೆದಿದ್ದ ಅಧಿಕಾರಿಗಳು ಮತ್ತು ನೌಕರರು ಜೈಕಾರ ಹಾಕಿದರು. ರಾಜ್ಯಾದ್ಯಂತ ಸಂಚರಿಸುವ ಕಿತ್ತೂರು ಉತ್ಸವದ ಜ್ಯೋತಿ ಅ.23ಕ್ಕೆ ಬೆಳಗಾವಿ ಜಿಲ್ಲೆಗೆ ತೆರಳಿದೆ. ಉತ್ಸವ ಅ.23ರಿಂದ 25ರವರೆಗೆ ನಡೆಯಲಿದೆ. ಬಯಲು ಹೊಂಗಲದ ಮುಖ್ಯಾಧಿಕಾರಿ ಉತ್ಸವ ಜ್ಯೋತಿಯೊಂದಿಗೆ ಆಗಮಿಸಿದ್ದರು.
ಪ್ರಾಧಿಕಾರಗಳಿಗೆ ಬಿಸಿ ಮುಟ್ಟಿಸಿದ ಬೊಮ್ಮಾಯಿ, 45 ಲಕ್ಷದಲ್ಲಿ ಕಿತ್ತೂರು ಅರಮನೆ-ಕೋಟೆ ಅಭಿವೃದ್ಧಿ
ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಕಾಯಕ ಮತ್ತು ಹೋರಾಟವನ್ನು ಯುವ ಪೀಳಿಗೆಗೆ ತಿಳಿಸಿಕೊಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಿತ್ತೂರು ಜ್ಯೋತಿ ಸಹಕಾರಿಯಾಗಲಿದೆ ಎಂದು ಹೇಳಿದರು.