ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.26} : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ರಣಮಳೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ ಎಂದು ಭಾವಿಸಿ ಆತನ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಲು ಸಿದ್ದತೆಯಲ್ಲಿ ಇರುವಾಗ ಆತ ಪ್ರತ್ಯಕ್ಷವಾಗಿರುವ ಪ್ರಸಂಗವೊಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಸತ್ತೇ ಹೋದ ಎಂದು ಭಾವಿಸಿದ ಆ ವ್ಯಕ್ತಿದಿಢೀರ್ ಪ್ರತ್ಯಕ್ಷವಾಗಿ ಅಧಿಕಾರಿಗಳಿಗೆ ಶಾಕ್ ಮೂಡಿಸಿದ್ದಾನೆ.
ತುಮಕೂರಿನಲ್ಲಿ ಮಳೆ ಅವಾಂತರ: ಚರಂಡಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ
ಪರಿಹಾರ ಚೆಕ್ ವಿತರಣೆ ಮಾಡಲು ಅಧಿಕಾರಿಗಳು ಸಿದ್ದತೆ : ವ್ಯಕ್ತಿ ಜೀವಂತ :
ಕಾಫಿನಾಡು(Coffee Nadu) ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಕಳೆದ 14 ದಿನಗಳ ಹಿಂದೆ ರಣ ಮಳೆ(Heavy Rain), ಆ ಮಳೆಗೆ ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿಯಿತ್ತು. ಚಿಕ್ಕಮಗಳೂರು ನಗರದಲ್ಲಿ 14 ದಿನಗಳ ಹಿಂದೆಯೇ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆಂದು ನಗರಸಭೆ, ಅಗ್ನಿಶಾಮಕ, ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕ ಸಿಬ್ಬಂದಿ ಹಳ್ಳದಲ್ಲಿ ಹುಡುಕಾಡುತ್ತಿದ್ದರೆ ಕೊಚ್ಚಿ ಹೋದ ವ್ಯಕ್ತಿ ಆರಾಮಾಗಿ ರಸ್ತೆಯಲ್ಲಿ ಓಡಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸತ್ತು ಹೋಗಿದ್ದಾನೆಂದು ಭಾವಿಸಿದ್ದ ವ್ಯಕ್ತಿಯನ್ನ ರಸ್ತೆಯಲ್ಲಿ ಕಂಡು ಅಧಿಕಾರಿಗಳೇ ಮೂಕವಿಸ್ಮಿತರಾಗಿದ್ದಾರೆ. ಜುಲೈ ಎರಡನೇ ವಾರದಲ್ಲಿ ಜಿಲ್ಲಾದ್ಯಂತ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿತ್ತು. ಈ ವೇಳೆ ಚಿಕ್ಕಮಗಳೂರು ನಗರದ ಉಂಡೇದಾಸರಹಳ್ಳಿ ಬಳಿ ವ್ಯಕ್ತಿಯೋರ್ವ ಹಳ್ಳ ದಾಟುವಾಗ ಕೊಚ್ಚಿ ಹೋಗಿದ್ದನು. ಅವನ ಜೊತೆಯಲ್ಲಿದ್ದ ಪತ್ನಿ ಸೂರಿ...ಸೂರಿ.... (ಸುರೇಶ್) ಗೋಳಾಡುತ್ತಿದ್ದಳು. ಕಣ್ಣೀರಿಡುತ್ತಿದ್ದಳು. ಕೂಡಲೇ ನೀರಿನ ವೇಗ ಅಬ್ಬರಿಸಿ ಬೊಬ್ಬರಿಯುತ್ತಿದ್ದರು ಕೂಡ ನಗರಸಭೆ, ಅಗ್ನಿಶಾಮಕ ಸಿಬ್ಬಂದಿಗಳು ಇಡೀ ಹಳ್ಳ ಹುಡುಕಿದ್ದರು.14 ದಿನಗಳ ಕಾಲ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದು ಇಂದು ಕೂಡ ಹುಡುಕುತ್ತಿದ್ದರು. ಆದರೆ, ನಾಪತ್ತೆಯಾದವನ ಶೋಧ ಮಾತ್ರ ಆಗಿರಲಿಲ್ಲ. ಆದರೂ ಕಾರ್ಯಚರಣೆ ನಿಲ್ಲಿಸಿರಲಿಲ್ಲ.
ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು: ಮೂವರ ಶವಪತ್ತೆ ಮೂವರು ನಾಪತ್ತೆ
ನಗರಸಭಾ ಅಧ್ಯಕ್ಷರ ಸಿಟಿ ರೌಂಡ್ಸ್(City round) ನಲ್ಲಿ ಮೃತ ಪಟ್ಟ ವ್ಯಕ್ತಿ ಪತ್ತೆ:
ಇಂದು ಬೆಳಗ್ಗೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್(Venu Gopal) ಸಿಟಿ ರೌಂಡ್ಸ್ನಲ್ಲಿ ಇದ್ದ ವೇಳೆ ಹಳ್ಳದಲ್ಲಿ ಹುಡುಕಾಡುತ್ತಿದ್ದ ಸುರೇಶ ತನ್ನ ಪತ್ನಿ ಜೊತೆ ಆರಾಮಾಗಿ ಓಡಾಡ್ಕಂಡಿದ್ದ. ನೋಡಿದ ಕೂಡಲೇ ಗಾಡಿ ನಿಲ್ಲಸಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿಚಾರಿಸಿದಾಗ ಅರ್ಧಂಬರ್ಧ ಮಾತನಾಡಿ ಎಸ್ಕೇಪ್ ಆಗಿದ್ದಾರೆ. ಅವರಿಗೆ ಪರಿಹಾರದ ಹಣ ಐದು ಲಕ್ಷ ಕೊಡಲು ಜಿಲ್ಲಾಡಳಿತ ಕೂಡ ಸಿದ್ಧವಾಗಿತ್ತು. ಆದರೆ, ಸತ್ತಿದ್ದಾನೆಂದು ಭಾವಿಸಿದ್ದವನು ಬದುಕಿರೋದನ್ನ ಕಂಡ ವೇಣುಗೋಪಾಲ್ ಕೂಡಲೇ ಪೊಲೀಸರು, ತಹಶೀಲ್ದಾರ್, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಲ್ಲರಿಗೂ ವಿಷಯ ಮುಟ್ಟಿಸಿದ್ದಾರೆ. ಬಹುಶಃ ಐದು ಲಕ್ಷದ ಪರಿಹಾರದ ಹಣಕ್ಕೆ ಹೀಗೆ ಸಾವಿನ ನಾಟಕ ಮಾಡಿರಬಹುದು ಎಂದು ಶಂಕಿಸಲಾಗಿದೆ. ಗಂಡ-ಹೆಂಡತಿಯ ನಾಟಕ ನೋಡಿ ಅಧಿಕಾರಿಗಳೂ ಒಳ್ಳೆ ಹುಚ್ಚರ ಸಹವಾಸವಾಯ್ತು ಎಂದು ಸುಮ್ಮನಾಗಿದ್ದಾರೆ. ಅಲ್ಲದೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಸುರೇಶ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸತ್ತಿದ್ದಾನೆಂದು ತಿಳಿದಿದ್ದ ವ್ಯಕ್ತಿ ಕಂಡು ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.