Mandya : ಚಿರತೆ ಸೆರೆಗೆ ಕಾರ್ಯಾಚರಣೆ ಚುರುಕು

By Kannadaprabha NewsFirst Published Nov 9, 2022, 5:33 AM IST
Highlights

ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆಹಾಗೂ ಬೃಂದಾವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಕಾರ್ಯಚರಣೆ ಚುರುಕುಗೊಳಿಸಿದ್ದಾರೆ.

 ಶ್ರೀರಂಗಪಟ್ಟಣ (ನ.09):  ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆಹಾಗೂ ಬೃಂದಾವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಸೆರೆ ಹಿಡಿಯಲು ಅಧಿಕಾರಿಗಳು ಕಾರ್ಯಚರಣೆ ಚುರುಕುಗೊಳಿಸಿದ್ದಾರೆ.

ಭಾನುವಾರದಿಂದ ನಿರಂತರವಾಗಿ ಚಿರತೆ (Leopard) ಪ್ರತ್ಯಕ್ಷವಾಗುತ್ತಿರುವ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ಆರ್‌ಎಫ್‌ಒ  (RFO) ಅನಿತಾ ಹಾಗೂ ಪಾಂಡವಪುರ ಆರ್‌ಎಫ್‌ಒ ಪುಟ್ಟಸ್ವಾಮಿ, ಸಿಬ್ಬಂದಿಗಳ ಜೊತೆ ಸ್ಥಳದಲ್ಲೆ ಮೊಕ್ಕಾಂ ಹೂಡಿ ಚಿರತೆ ಸೆರೆಗೆ ಅಣೆಕಟ್ಟೆಮುಖ್ಯದ್ವಾರದ ಎಡಭಾಗದಲ್ಲಿ ಹೆಚ್ಚುವರಿ ಬೋನ್‌ ಸೇರಿದಂತೆ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಒಟ್ಟು ನಾಲ್ಕು ಬೋನ್‌ ಇರಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ಚಿರತೆ ಚಲನವಲನಗಳ ವೀಕ್ಷಣೆಗೆæ 4 ಟ್ರಾಪ್‌ ಕ್ಯಾಮರಾ, ಚಿರತೆ ಕಂಡರೆ ಬಲೆ ಹಾಕಲು ಎರಡು ಬಲೆ ಸೇರಿದಂತೆ ವಾಹನಗಳ ಸಮೇತ ಹಾಜರಿದ್ದರೆ ಚಿರತೆ ಮಾತ್ರ ಇವರಿಗೆ ಚಳ್ಳೆ ಹಣ್ಣು ತಿನ್ನಿಸಿ ದಿನ ಒಂದುಕಡೆ ಓಡಾಟ ನಡೆಸಿ ಅಧಿಕಾರಿಗಳ ನಿದ್ದೆಗೆಡಿಸಿದೆ. ಅಲ್ಲದೇ ಬೃಂದಾವನದ ವಿವಿಧ ಸ್ಥಳದಲ್ಲಿ ಚಿರತೆ ಓಡಾಟ ಮಾಡಿದ ಸ್ಥಳಗಳಲ್ಲಿ ಬೆಳದಿದ್ದ ಗಿಡ-ಗುಂಟೆಗಳನ್ನು ಕಾವೇರಿ ನೀರಾವರಿ ನಿಗಮದ ವತಿಯಿಂದ ಜೆಸಿಬಿ ಬಳಸಿ ತೆರವುಗೊಳಿಸುವ ಕಾರ್ಯಚರಣೆ ಮುಂದುವರೆದಿದೆ.

ಜಿಲ್ಲಾಧಿಕಾರಿ ಡಾ.ವೇಣುಗೋಪಾಲಸ್ವಾಮಿ ಈ ಸಂಬಂಧ ಪ್ರತಿಕ್ರಿಯೆ ನೀಡಿ, ಕೆಆರ್‌ಎಸ್‌ ಅಣೆಕಟ್ಟೆಹಾಗೂ ಬೃಂದಾವನ ಬಳಿ ಚಿರತೆ ಸುಳಿದಾಡುತ್ತಿರುವ ಸಂಬಂಧ ಸ್ಥಳೀಯ ತಹಸೀಲ್ದಾರ್‌ ಅವರಿಂದ ಮಾಹಿತಿ ಪಡೆದಿದ್ದೇನೆ. ಹಿರಿಯ ಅರಣ್ಯಾಧಿಕಾರಿಗಳ ಜೊತೆಗೆ ಚರ್ಚಿಸಿ ಶೀಘ್ರ ಚಿರತೆ ಸೆರೆ ಹಿಡಿದು ಪ್ರವಾಸಿಗರಿಗೆ ಬೃಂದಾವನಕ್ಕೆ ಮುಕ್ತ ಅವಕಾಶಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನಿಗಮ ಮಂಡ್ಯ ವೃತ್ತ ಅಧೀಕ್ಷಕ ಅಭಿಯಂತರ ಆನಂದ್‌ ಮಾತನಾಡಿ, ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷಗೊಂಡ ಹಿನ್ನಲೆಯಲ್ಲಿ ಎಂಡಿ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಬೃಂದಾವನದಲ್ಲಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಮತ್ತು ಅಣೆಕಟ್ಟೆಸುತ್ತಮುತ್ತ ಅನಾವಶ್ಯಕವಾಗಿ ಬೆಳದಿದ್ದ ಗಿಡ-ಗುಂಟೆಗಳನ್ನು ತೆರವುಗೊಳಿಸಲಾಗುತ್ತಿದೆ. ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಮುಂದಿನ ನಿರ್ದೇಶನದ ತನಕ ಬೃಂದಾವನ ಪ್ರವೇಶ ನಿರ್ಬಂದ ಮಾಡಲಾಗಿದೆ. ಕಾರ್ಯಚರಣೆ ಚುರುಕು ಮಾಡುವಂತೆ ತಿಳಿಸಲಾಗಿದೆ ಎಂದು ಹೇಳಿದರು

 ನಿಲ್ಲದ ಉಪಟಳ

ಹೊನ್ನಾವರ (ಅ.22) : ತಾಲೂಕಿನ ಸಾಲ್ಕೋಡದಲ್ಲಿ ಮೇಯಲು ಹೋದ ಜಾನುವಾರಿನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಗುರುವಾರ ನಡೆದಿದೆ. ಅದೃಷ್ಟವಶಾತ್‌ ಜಾನುವಾರು ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದೆ. ಕೊಟ್ಟಿಗೆಗೆ ಬಂದ ದನವನ್ನು ಮಾಲೀಕರು ಗಮನಿಸಿದಾಗ ಚಿರತೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ. ಕಳೆದೆರಡು ದಿನಗಳ ಹಿಂದೆ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ದಾಳಿಯಲ್ಲಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಸಾಲ್ಕೋಡಿನ ಸುತ್ತಮುತ್ತ ಇದೀಗ ಎಲ್ಲೆಡೆ ಚಿರತೆ ದಾಳಿ ಭಯ ಶುರುವಾಗಿದೆ. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ವಾಹನಸವಾರರು ಓಡಾಡಲು ಹಿಂಜರಿಯುವ ಪರಿಸ್ಥಿತಿ ಎದುರಾಗಿದೆ.

ಬೆಳಗಾವಿ ಚಿರತೆ ಸೆರೆಗೆ 200 ಜನ!: ಕಾರ್ಯಾಚರಣೆಗೆ 2 ಆನೆ ಕೂಡ ಬಳಕೆ

ಸಾಲ್ಕೋಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು

ಸಾಲ್ಕೋಡ ಭಾಗದಲ್ಲಿ ಸಂಜೆಯಿಂದ ರಾತ್ರಿವರೆಗೆ ಒಂದು ವಾರಗಳ ಕಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸಂಚರಿಸುವ ಕಾರ್ಯ ಆರಂಭಿಸಿದ್ದೇವೆ. ಸಾರ್ವಜನಿಕರು ಸಂಚರಿಸುವಾಗ ಎಚ್ಚರಿಕೆಯಿಂದ ಇರುವ ಜೊತೆ ಇಲಾಖೆಗೆ ಸಹಕರಿಸಬೇಕಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ. ಸುದರ್ಶನ ಹೇಳಿದರು.

ತಾಲೂಕಿನ ಸಾಲ್ಕೋಡ್‌ ಗ್ರಾಮದಲ್ಲಿ ಮೇಯಲು ತೆರಳಿದ ಆಕಳಿನ ಮೇಲೆ ಚಿರತೆ ದಾಳಿ ದಾಳಿಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಈಗಾಗಲೇ ಇದೇ ಗ್ರಾಮದಲ್ಲಿ ಒಂದು ಚಿರತೆ ಈ ವಾರದಲ್ಲೇ ಸೆರೆ ಹಿಡಿಯಲಾಗಿದೆ. ಮತ್ತೆ ಜಾನುವಾರು, ಮನುಷ್ಯರ ಮೇಲೆ ದಾಳಿ ಮಾಹಿತಿ ಅರಿತು ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಸಂಜೆ ಮತ್ತೆ ಎರಡು ಬೋನ್‌ ತಂದು ಗ್ರಾಮದಲ್ಲಿ ಇಡುವ ಮೂಲಕ ಸೆರೆ ಹಿಡಿಯಲು ಪ್ರಯತ್ನ ಮುಂದುವರೆಸುತ್ತೇವೆ. ಜಾನುವಾರು ಹಾನಿ ಸಂಭವಿಸಿದಂತೆ ಮಾಲಕರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಪರಿಹಾರಕ್ಕೆ ವ್ಯವಸ್ಥೆ ಇದೆ ಎಂದರು.

ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ: ಸಿಸಿ ಕ್ಯಾಮರಾದಲ್ಲಿ ಚಲನವಲನ ಸೆರೆ

ಕಾಂಗ್ರೆಸ್‌ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ, ಇಂತಹ ಅನಾಹುತ ಸಂಭವಿಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಇರುವ ಬಗ್ಗೆ ಮಾಹಿತಿ ನೀಡಿ ಸಂಬಂಧಿಸಿದ ಅಧಿಕಾರಿಗಳು ದೂರವಾಣಿ ಸಂಖ್ಯೆ ನೀಡಿದ್ದಾರೆ. ಹೆಚ್ಚಿನ ಬೋನ್‌ ವ್ಯವಸ್ಥೆ ಕಲ್ಪಿಸಿ ಚಿರತೆ ಸೆರೆ ಹಿಡಿಯುವ ಪ್ರಯತ್ನ ಮುಂದುವರೆಸುವ ಭರವಸೆ ನೀಡಿದ್ದಾರೆ.

ಅಲ್ಲದೆ ಹಂದಿ, ಮಂಗ ಮುಂತಾದ ಪ್ರಾಣಿಯಿಂದ ತೆಂಗಿನಕಾಯಿ, ಅಡಿಕೆ, ತೆಂಗು, ಬಾಳೆ ಸಸಿ ಹಾನಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ರೈತರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

click me!