9 ದಿನಗಳಿಂದ ಅಹೋರಾತ್ರಿ ಧರಣಿ : ಕಬ್ಬು ಬೆಳೆಗಾರರ ಜೊತೆ ಸರ್ಕಾರ ಸಭೆ

By Kannadaprabha News  |  First Published Nov 9, 2022, 5:24 AM IST

ಕಬ್ಬು ದರ ಹೆಚ್ಚುವರಿ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ನ.10 ರಂದು ಸಭೆ ಕರೆದಿದೆ. ಸರ್ಕಾರದ ತೀರ್ಮಾನದ ಬಳಿಕ ಮುಂದಿನ ನಿರ್ಧಾರ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭರವಸೆ ನೀಡಿದರು.


  ಮೈಸೂರು (ನ.09): ಕಬ್ಬು ದರ ಹೆಚ್ಚುವರಿ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ನ.10 ರಂದು ಸಭೆ ಕರೆದಿದೆ. ಸರ್ಕಾರದ ತೀರ್ಮಾನದ ಬಳಿಕ ಮುಂದಿನ ನಿರ್ಧಾರ ಮಾಡುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಭರವಸೆ ನೀಡಿದರು.

ರಾಜ್ಯ (Karnataka)  ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ಕಳೆದ 9 ದಿನಗಳಿಂದ ಜಿಲ್ಲಾಧಿಕಾರಿ (DC)  ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಮಂಗಳವಾರ ಸಂಜೆ ರೈತ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ತೀರ್ಮಾನಿಸುವುದಾಗಿ ಹೇಳಿದರು.

Latest Videos

undefined

ಬಣ್ಣಾರಿ ಕಾರ್ಖಾನೆ ಕಟಾವು ಸಾಗಾಣಿಕೆ ವೆಚ್ಚವನ್ನು ರೈತರಿಂದ ಹೆಚ್ಚುವರಿ ವಸೂಲಿ ಮಾಡಬಾರದು. ಮಾಡಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಳೆದ ವರ್ಷಕ್ಕಿಂತ . 150 ಏರಿಕೆ ಆಗಿದೆ. ಕಬ್ಬಿನ ಕಟಾವು 16 ತಿಂಗಳ ತನಕ ಕಟಾವು ವಿಳಂಬವಾಗಿ ರೈತರಿಗೆ ನಷ್ಟಉಂಟಾಗುತ್ತಿರುವುದು ವಿಳಂಬದ ಅವಧಿಗೆ ಹೆಚ್ಚುವರಿ ಬಡ್ಡಿ ಸೇರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಕಬ್ಬಿನ ಎಫ್‌ಆರ್‌ಪಿ ಹೆಚ್ಚುವರಿ ದರ ನಿಗದಿ ಮಾಡಬೇಕು. ಸಕ್ಕರೆ ಇಳುವರಿ ಆಧರಿಸಿ ಕಬ್ಬು ಬೆಲೆ ನಿಗದಿ ಮಾಡುವ ಮಾನದಂಡ ಜಾರಿಯಾದ ಮೇಲೆ ಸಕ್ಕರೆ ಇಳುವರಿಯಲ್ಲಿ ಮೋಸವಾಗುತ್ತಿದ್ದು, ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಕಬ್ಬು ಬೆಳೆ ಹೊಸದಾಗಿ ಬೆಳೆಯುವ ರೈತರ ಕಬ್ಬು ಬಣ್ಣಾರಿ ಕಾರ್ಖಾನೆ ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಈ ಭಾಗದಲ್ಲಿ ಹೊಸ ಕಾರ್ಖಾನೆ ಆರಂಭಕ್ಕೆ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ಕೊಡಬೇಕು. ಗಣಕೀಕರಣವಾಗುವಾಗ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ರಿಯಲ್‌ ಎಸ್ಟೇಟ್‌ ದಳ್ಳಾಳಿಗಳು ದಾಖಲಾತಿಗಳನ್ನು ಸೃಷ್ಟಿಮಾಡಿ ರೈತರನ್ನು ಮೋಸಗೊಳಿಸುತ್ತಿರುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಅತಿವೃಷ್ಟಿಮಳೆ ಹಾನಿ ಬೆಳೆ ನಷ್ಟಪರಿಹಾರ ರೈತರಿಗೆ ಭಿಕ್ಷೆಯಲ್ಲ, ನೈಜ ನಷ್ಟಪರಿಹಾರ ಕೊಡಬೇಕು. ಎಸ್ಕಾಂಗಳ ನಿರ್ಲಕ್ಷದಿಂದ ಹತ್ತಕ್ಕೂ ಹೆಚ್ಚು ಜನ ರೈತರು ಆಕಸ್ಮಿಕ ಅಪಘಾತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು. ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ . 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌. ಮಂಜುನಾಥಸ್ವಾಮಿ, ಕಬ್ಬು ಬೆಳೆಗಾರರ ಸಂಘದ ಮುಖಂಡ ಪಿ.ಸೋಮಶೇಖರ್‌, ಬರಡನಪುರ ನಾಗರಾಜ್‌, ಕಿರಗಸೂರು ಶಂಕರ್‌, ಕುರುಬೂರು ಸಿದ್ದೇಶ್‌, ಹಾಡ್ಯ ರವಿ, ಮಂಜು, ಸಿದ್ದರಾಮು, ಮಂಜುನಾಥ್‌, ಪ್ರಸಾದ್‌ನಾಯಕ, ಮಹದೇವಸ್ವಾಮಿ ಮೊದಲಾದವರು ಇದ್ದರು.

ವಿಜಯಪುರದಲ್ಲಿಯೂ ಕಬ್ಬು ಬೆಳೆಗಾರರ ಅಸಮಾಧಾನ

ವಿಜಯಪುರ (ನ.3): ರೈತರ ಕಬ್ಬಿಗೆ ಸೂಕ್ತ ದರ ನಿಗದಿ ಮಾಡುವ ವಿಚಾರ ವಿಜಯಪುರ ಜಿಲ್ಲೆಯಲ್ಲಿ ಕಗ್ಗಂಟಾಗಿದೆ. ಮೊನ್ನೆಯಷ್ಟೆ ಮುದ್ದೇಬಿಹಾಳ ತಾಲೂಕಿನ ಯರಗಲ್-ಮದರಿ ಬಳಿಯ ಬಾಲಾಜಿ ಶುಗರ್ಸ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ನಡೆದಿತ್ತು.‌‌ ಕೂದಲೆಳೆ ಅಂತರಲ್ಲಿ ಪ್ರತಿಭಟನೆಗೆ ಇಳಿದಿದ್ದ ರೈತರ ಜೀವ ಉಳಿದಿತ್ತು. ದೊಡ್ಡದಾದ ಪ್ರಮಾದ ತಪ್ಪಿತ್ತು. ಆದರೀಗ ಕಾರಜೋಳ ಬಸವೇಶ್ವರ ಶುಗರ್ಸ್ ವಿರುದ್ಧವು ರೈತರ ಅಸಮಾಧಾನ ಕೇಳಿ ಬರ್ತಿದೆ. ಪ್ರಸಕ್ತ ಹಂಗಾಮುವಿಗೆ ಕಬ್ಬಿನ ದರ ನಿಗದಿಪಡಿಸುವ ಸಂಬಂಧ ತಹಶಿಲ್ದಾರ ಪಿ.ಜಿ.ಪವಾರ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಕಬ್ಬು ಬೆಳೆಗಾರರ ಬೇಡಿಕೆಯಂತೆ ದರ ಘೋಷಿಸಲು ಸ್ಪಷ್ಟ ನಿಲುವು ಪ್ರಕಟಿಸದ ಕಾರಣ ಸದ್ಯ ಕಟಾವಾಗಿ ಕಾರ್ಖಾನೆ ಆವರಣದಲ್ಲಿ ನಿಂತಿರುವ ಕಬ್ಬನ್ನು ನುರಿಸಿ ಮುಂದೆ ಕಾರ್ಖಾನೆಯವರು ಕಬ್ಬಿನ ದರ ನಿಗದಿಪಡಿಸಿ ಘೋಷಿಸುವವರೆಗೂ ಕಬ್ಬು ನುರಿಸುವಿಕೆಯನ್ನು ಬಂದ್ ಮಾಡಬೇಕೆಂದು ಸಭೆಯಲ್ಲಿ ಕಬ್ಬು ಬೆಳಗಾರರು ಆಗ್ರಹಿಸಿದರು.

ರೈತರ ಬೇಡಿಕೆ ಏನು?
ಸಭೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳಗಾರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಸೋಮು ಬಿರಾದಾರ ಹಾಗೂ ರೈತ ಮುಖಂಡ ನಂದಬಸಪ್ಪ ಚೌದ್ರಿ ಅವರು ಮಾತನಾಡಿ, ಮುಧೋಳ ಭಾಗದ ಸಕ್ಕರೆ ಕಾರ್ಖಾನೆಗಳು ನೀಡುವ ದರದಂತೆ ಬಸವೇಶ್ವರ ಸಕ್ಕರೆ ಕಾರ್ಖಾನೆಯವರು ಪ್ರತಿ ವರ್ಷ ರೈತರಿಗೆ ಕಬ್ಬಿನ ದರ ನೀಡುತ್ತಾ ಬಂದಿದ್ದು, ಈ ವರ್ಷವೂ ಮುಧೋಳ ಭಾಗದ ರೈತರು ನಿರ್ಧರಿಸುವ ದರದಂತೆ ಬಸವೇಶ್ವರ ಕಾರ್ಖಾನೆಯವರು ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. 

ಬಸವೇಶ್ವರ ಶುಗರ್ಸ್ ಆಡಳಿತ ಮಂಡಳಿ ಮಾತೇನು..!?
ಇದಕ್ಕೆ ಸಭೆಯಲ್ಲಿ ಹಾಜರಿದ್ದ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಸ್.ಸಿ.ಪಾಟೀಲ್ ಹಾಗೂ ಕೇನ್ ಮ್ಯಾನೇಜರ್ ರಾಜು ಬಿರಾದಾರ ಪ್ರತಿಕ್ರಿಯಿಸಿ ಈಗಾಗಲೇ ಸರ್ಕಾರ ಆದೇಶಿಸಿರುವ ಎಫ್.ಆರ್.ಪಿ ದರದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರ ನೀಡುತ್ತಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಎಲ್ಲರಿಗಿಂತ ಮೊದಲು ಪ್ರತಿ ಟನ್ ಕಬ್ಬಿಗೆ 2,700 ದರ ಘೋಷಿಸಲಾಗಿತ್ತು. ಎರಡ್ಮೂರು ದಿನಗಳಲ್ಲಿ ಬಾಗಲಕೋಟೆಯಲ್ಲಿ ಸಭೆ ಜರುಗಲಿದ್ದು, ಸಭೆಯಾದ ನಂತರ ಕಾರ್ಖಾನೆ ಚೇರ್ಮನ್ ಅವರೊಂದಿಗೆ ಚರ್ಚಿಸಿ ದರ ನಿಗದಿಪಡಿಸಲಾಗುವುದು ಎಂದರು.

click me!