ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು ಕಡ್ಡಾಯ...

By Kannadaprabha News  |  First Published Apr 12, 2023, 8:06 AM IST

ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 127-ಎ ಪ್ರಕಾರ ಮುದ್ರಣ ಮಾಡುವ ಚುನಾವಣಾ ಕರಪತ್ರಗಳು, ಪೋಸ್ಟರ್‌ಗಳ ಮೇಲೆ ಮುದ್ರಕನ ಹೆಸರು, ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ ಹೊಂದಿರುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.


ತುಮಕೂರು : ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 127-ಎ ಪ್ರಕಾರ ಮುದ್ರಣ ಮಾಡುವ ಚುನಾವಣಾ ಕರಪತ್ರಗಳು, ಪೋಸ್ಟರ್‌ಗಳ ಮೇಲೆ ಮುದ್ರಕನ ಹೆಸರು, ವಿಳಾಸ, ಪ್ರಕಾಶಕರ ಹೆಸರು ಮತ್ತು ವಿಳಾಸ ಹೊಂದಿರುವುದು ಕಡ್ಡಾಯವೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ಸೂಚನೆ ನೀಡಿದ್ದಾರೆ.

ಗೆ ಸಂಬಂಧಿಸಿದಂತೆ ಕೈಯಿಂದ ನಕಲು ಮಾಡುವುದನ್ನು ಹೊರತುಪಡಿಸಿ ಮುದ್ರಿಸುವ ಅಥವಾ ಯಾವುದೇ ಪ್ರಕ್ರಿಯೆಯಿಂದ ಬಹುಗ್ರಾಫ್‌ ಮಾಡಲಾದ ಚುನಾವಣಾ ಕರಪತ್ರ, ಕೈ-ಬಿಲ್‌, ಫಲಕ(ಪ್ಲಕಾರ್ಡ್‌), ಪೋಸ್ಟರ್‌ಗಳ ಮುಂಭಾಗದಲ್ಲಿ ಮುದ್ರಕನ ಹೆಸರು ಮತ್ತು ವಿಳಾಸ/ಪ್ರಕಾಶಕನ ಹೆಸರು ಮತ್ತು ವಿಳಾಸ ಮುದ್ರಿಸುವುದು ಕಡ್ಡಾಯವೆಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಉಲ್ಲಂಘಿಸಿದವರಿಗೆ 6 ತಿಂಗಳವರೆಗೆ   ಶಿಕ್ಷೆ ಅಥವಾ 2,000 ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.

Tap to resize

Latest Videos

ಚುನಾವಣಾ ಕರಪತ್ರ/ಪೋಸ್ಟರ್‌ಗಳನ್ನು ಮುದ್ರಿಸುವ ಮುದ್ರಕರು ಪ್ರಕಾಶಕರಿಂದ ಘೋಷಣಾ ಪತ್ರ(ಪ್ರಕಾಶಕರು ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಿದ)ವನ್ನು ದ್ವಿಪ್ರತಿಯಲ್ಲಿ ಪಡೆದು ಘೋಷಣೆಯ ಒಂದು ಪ್ರತಿ ಹಾಗೂ ಉದ್ದೇಶಿತ ಮುದ್ರಣದ ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು.

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮುದ್ರಕರ ಸಭೆಯನ್ನು ಕರೆದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 127ಎ ಕುರಿತು ಮಾಹಿತಿ ತಿಳಿಸಬೇಕು. ಚುನಾವಣಾ ಕರಪತ್ರಗಳಲ್ಲಿ ಮುದ್ರಕರ ಹೆಸರು/ಪ್ರಕಾಶಕರ ಹೆಸರು ಮತ್ತು ವಿಳಾಸ ಮುದ್ರಿಸುವುದು ಕಡ್ಡಾಯ. ಉದ್ದೇಶಿತ ಮುದ್ರಣದ ನಾಲ್ಕು ಪ್ರತಿಗಳನ್ನು ಹಾಗೂ ಪ್ರಕಾಶಕರ ಡಿಕ್ಲರೇಷನ್‌(ಘೋಷಣೆ) ಅನ್ನು ಚುನಾಣಾಧಿಕಾರಿಗಳಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ನಿಯಮವನ್ನು ಉಲ್ಲಂಘಿಸಿದವರ ಪರವಾನಗಿಯನ್ನು ರದ್ದುಪಡಿಸಲು ಕ್ರಮವಿಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಬೇಕು. ಚುನಾವಣಾ ಆಯೋಗ ಸೂಚಿಸಿರುವ ನಮೂನೆಯಲ್ಲಿ ಮುದ್ರಕರು ಮುದ್ರಿತ ವಿಷಯದ ಪ್ರತಿ, ಘೋಷಣೆ, ಕರಪತ್ರಗಳ ಪ್ರತಿಗಳ ಸಂಖ್ಯೆ, ಮುದ್ರಿಸಲು ತಗಲುವ ವೆಚ್ಚ ಸೇರಿದಂತೆ ಮತ್ತಿತರ ವಿವರಗಳನ್ನು ಒದಗಿಸಬೇಕೆಂದು ಮುದ್ರಕರಿಗೆ ಮನವರಿಕೆ ಮಾಡಬೇಕು ಕರ್ನಾಟಕ ವಿಧಾನಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾದ ದಿನ ಅಂದರೆ ಮಾಚ್‌ರ್‍ 29 ರಿಂದ ಏಪ್ರಿಲ್‌ 11ರವರೆಗೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಡಿ 81.33ಲಕ್ಷ ರು. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್‌. ಪಾಟೀಲ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪಾರದರ್ಶಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಅಕ್ರಮವನ್ನು ತಡೆಯಲು 156 ವಿಚಕ್ಷಣ ದಳ(ಎಫ್‌ಎಸ್‌ಟಿ-ಫ್ಲೈಯಿಂಗ್‌ ಸ್ವಾ್ಯಡ್‌) 135 ಸ್ಥಿರ ಕಣ್ಗಾವಲು ತಂಡ (ಎಸ್‌ಎಸ್‌ಟಿ-ಸ್ಟ್ಯಾಟಿಕ್‌ ಸರ್ವೇಲೆನ್ಸ್‌ ತಂಡ) ಹಾಗೂ 9 ಅಬಕಾರಿ ತಂಡವನ್ನು ರಚಿಸಿ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ನಿಯೋಜಿತ ತಂಡಗಳು ಮಾಚ್‌ರ್‍ 29 ರಿಂದ ಏಪ್ರಿಲ್‌ 11ರವರೆಗೆ ಪೊಲೀಸರ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎಸ್‌ಎಸ್‌ಟಿ ತಂಡದಿಂದ 5.08ಲಕ್ಷ ರು. ಹಾಗೂ ಪೊಲೀಸ್‌ ಇಲಾಖೆಯಿಂದ 76.25ಲಕ್ಷ ರು. ಸೇರಿ 81.33ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ದಾಖಲೆಯಿಲ್ಲದ 75ಲಕ್ಷ ರು. ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಸೂಕ್ತ ದಾಖಲೆ ಒದಗಿಸಿದವರಿಗೆ 3.70ಲಕ್ಷ ರು. ಹಣವನ್ನು ಹಿಂದಿರುಗಿಸಲಾಗಿದೆ. ಉಳಿದ 2.63ಲಕ್ಷ ರು.ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ಜಮೆಯಾಗಿರುವ 75ಲಕ್ಷ ರು. ಹಣಕ್ಕೆ ಸಮರ್ಪಕ ದಾಖಲೆ ಒದಗಿಸಿದ ನಂತರ ಸಂಬಂಧಿಸಿದವರಿಗೆ ಹಿಂದಿರುಗಿಸಲಾಗುವುದು.

ಅದೇ ರೀತಿ ಮಾಚ್‌ರ್‍ 29 ರಿಂದ ಏಪ್ರಿಲ್‌ 11ರವರೆಗೆ ಅಬಕಾರಿ ಇಲಾಖೆ, ಫ್ಲೈಯಿಂಗ್‌ ಸ್ಕಾ$್ವಡ್‌ ತಂಡ ಹಾಗೂ ಪೊಲೀಸ್‌ ತಂಡದಿಂದ ಜಿಲ್ಲೆಯಲ್ಲಿ 89,92,641 ರು. ಮೌಲ್ಯದ ದಾಖಲೆಯಿಲ್ಲದ 16804.53 ಲೀ. ಮದ್ಯ, 16371.01 ಲೀ. ಬೀರ್‌ ಹಾಗೂ 50ಲೀ. ಸೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಅಕ್ರಮಗಳಿಗಾಗಿ ಬಳಸಿಕೊಂಡಿದ್ದ 50 ದ್ವಿಚಕ್ರ ವಾಹನ, 2 ನಾಲ್ಕು ಚಕ್ರ ವಾಹನ, ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿಟ್ಟಿದ್ದ ವಸ್ತು, ದವಸ-ಧಾನ್ಯ, ಉಡುಪುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 63,01,312 ರು. ಮೌಲ್ಯದ 720 ಎಲ್‌ಇಡಿ ಬಲ್‌್ಬ, 9 ಬ್ಯಾಗ್‌ನಲ್ಲಿದ್ದ 137 ಚೂಡಿದಾರ್‌ ಪೀಸ್‌, 2 ಬ್ಯಾಗ್‌ನಲ್ಲಿದ್ದ 13 ಲೆಹಂಗಾ ಪೀಸ್‌, 1 ಬ್ಯಾಗ್‌ನಲ್ಲಿದ್ದ 25 ಬುರ್ಖಾ ಪೀಸ್‌, 1 ಬ್ಯಾಗ್‌ನಲ್ಲಿದ್ದ 16 ಲಾಂಗ್‌ ಫ್ರಾಕ್ಸ್‌, 54 ಬಾಕ್ಸ್‌ ಡಿನ್ನರ್‌ ಸೆಟ್‌, ತಲಾ 77 ಕೆ.ಜಿ. 400 ಭತ್ತದ ಚೀಲ, 2235 ಕೆ.ಜಿ. ಅಲ್ಯುಮಿನಿಯಂ ಮತ್ತು ಸ್ಟೀಲ್‌ ಪಾತ್ರೆ, 100 ನೈಟಿ, 2321 ಸೀರೆ, 301 ಚೂಡಿದಾರ್‌ ಟಾಫ್ಸ್‌, 68 ಲೆಗ್ಗಿನ್ಸ್‌, ತಲಾ 60 ಕೆ.ಜಿ. 20 ಜೋಳದ ಚೀಲ, ಕೆಎ-06-ಎಬಿ-5828 ಕ್ಯಾಂಟರ್‌ ಲಾರಿ, 257 ಚುನಾವಣಾ ಕರಪತ್ರ, ಮಂಜುನಾಥ ಸ್ವಾಮಿ ಭಾವಚಿತ್ರ ಮತ್ತು ಬಳೆಗಳ ಪೊಟ್ಟಣ, ತಲಾ 26 ಕೆ.ಜಿ.ಯ 90 ಚೀಲ ಅಕ್ಕಿ, 2500-3000 ಜೆ.ಡಿ.ಎಸ್‌. ಪಕ್ಷದ ಪಾಂಪ್ಲೇಟ್‌, 380 ಅಕ್ಕಿಯ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ದಾಖಲಾದ ಪ್ರಕರಣಗಳಲ್ಲಿ ಒಟ್ಟು 27 ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ 249 ಪ್ರಕರಣಗಳಿಗೆ ಪ್ರಥಮ ವರ್ತಮಾನ ವರದಿ(ಎಫ್‌ಐಆರ್‌) ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಡಿಸಿಯಿಂದ ಮುದ್ರಕರಿಗೆ ಎಚ್ಚರಿಕೆ

ಯಾವುದೇ ಚುನಾವಣಾ ಕರ ಪತ್ರ, ಕೈ ಚೀಲ, ಬ್ಯಾನರ್‌, ಬಂಟಿಂಗ್‌, ಫ್ಲೆಕ್ಸ್‌ ಅಥವಾ ಪೋಸ್ಟರ್‌ ಅನ್ನು ಮುದ್ರಿಸಿದ ಮುದ್ರಣಾಲಯದ ಹೆಸರು, ವಿಳಾಸ, ಮುದ್ರಿಸಿದ ದಿನಾಂಕ ಮತ್ತು ಪ್ರತಿಗಳ ಸಂಖ್ಯೆ ವಿವರಗಳಿಲ್ಲದೆ ಮುದ್ರಿಸಬಾರದು. ಯಾವುದೇ ಪ್ರಕಟಣೆಯನ್ನು 10 ದಿನಗಳೊಳಗಾಗಿ ಮುದ್ರಕರು ಅಥವಾ ಪ್ರಕಾಶಕರು ಮುದ್ರಿತ ವಸ್ತುಗಳ 4 ಪ್ರತಿ ಮತ್ತು ಪ್ರಕಾಶಕರ ಘೋಷಣೆಗಳನ್ನು ಭರ್ತಿ ಮಾಡಿದ ನಿಗದಿತ ನಮೂನೆಯೊಂದಿಗೆ ಲಗತ್ತಿಸಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಮುದ್ರಣಾಲಯಗಳ ಮುದ್ರಕರಿಗೆ ತಿಳಿಸಬೇಕು. ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ತ್ವರಿತ ಕ್ರಮ ಮತ್ತು ತನಿಖೆ ಕೈಗೊಳ್ಳಲಾಗುವುದು. ಅಪರಾಧ ಎಂದು ಸಾಬೀತಾದಲ್ಲಿ ಶೀಘ್ರವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.

click me!