ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಕಲ್ಲು ಗಣಿಗಾರಿಕೆ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ 13 ಹಳ್ಳಿಯ ಗ್ರಾಮಸ್ಥರೊಂದಿಗೆ ಪರಮೇಶ್ವರ್ ಮಾತುಕತೆ ನಡೆಸಿದರು.
ತುಮಕೂರು: ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಕಲ್ಲು ಗಣಿಗಾರಿಕೆ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯಿಸಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದ 13 ಹಳ್ಳಿಯ ಗ್ರಾಮಸ್ಥರೊಂದಿಗೆ ಪರಮೇಶ್ವರ್ ಮಾತುಕತೆ ನಡೆಸಿದರು.
ಚಿನವಾರನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ ಮಾಡಲಾಗಿದ್ದು, ತಕ್ಷಣವೇ ಗಣಿಗಾರಿಕೆಗೆ ನೀಡಿರುವ ಪರವಾನಗಿ ವಾಪಸ್ ಪಡೆಯುವಂತೆ ಗ್ರಾಮಸ್ಥರ ಒತ್ತಾಯ ಹಿನ್ನೆಲೆಯಲ್ಲಿ ಚಿನಿವಾರನಹಳ್ಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಪರಮೇಶ್ವರ್ ಚರ್ಚಿಸಿದರು. ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ ಪರಮೇಶ್ವರ್, ಗಣಿಗಾರಿಕೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಗ್ರಾಮಸ್ಥರಿಗೆ ಪರಂ ಧೈರ್ಯ ತುಂಬಿದರು.
ಷಫೀ ಕಾಂಗ್ರೆಸ್ ತೊರೆಯದಂತೆ ಕೇಳಿಕೊಳ್ಳುತ್ತೇನೆ
ತುಮಕೂರು : ತುಮಕೂರು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಷಫಿ ಅಹಮದ್ ಅವರು ಕಾಂಗ್ರೆಸ್ ತೊರೆಯದಂತೆ ಕೇಳಿಕೊಳ್ಳುತ್ತೇನೆ ಎಂದು ಮಾಜಿ ಡಿಸಿಎಂ, ಕೊರಟಗೆರೆ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಷಫಿ ಅಹಮದ್ ಅವರ ಅಳಿಯ ಡಾ. ರಫೀಕ್ ಅವರಿಗೆ ಕೈ ತಪ್ಪಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಕೊರಟಗೆರೆಯಲ್ಲಿ ಪ್ರತಿಕ್ರಿಯೆ ನೀಡಿದರು.
ಡಾ. ರಫೀಕ್ ಅಹಮದ್‌ಗೆ ಟಿಕೆಟ್ ಕೈ ತಪ್ಪಲು ತಾವು ಕಾರಣರಲ್ಲ. ಷಫಿ ಅಹ್ಮದ್ ಅವರು ಶಾಸಕರಾಗಿ, ಜಿಲ್ಲಾ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ಅವರು ನನ್ನನ್ನು ವಿಶ್ವಾಸ ಘಾತುಕರು ಎಂದಿದ್ದಾರೆ. ಅವರು ಹಿರಿಯರಾಗಿದ್ದರಿಂದ ಅವರು ಏನೇ ಹೇಳಿದರೂ ನಾನು ಸ್ವೀಕರಿಸುತ್ತೇನೆ. ಟಿಕೆಟ್ ಫೈನಲ… ಮಾಡೋದು ನನ್ನೊಬ್ಬನ ನಿರ್ಧಾರ ಅಲ್ಲ. ಕಾಂಗ್ರೆಸ್ ರಾಷ್ಟ್ರೀಯ ಚುನಾವಣಾ ಸಮಿತಿ ಅದನ್ನು ನಿರ್ಧರಿಸುತ್ತದೆ. ಆ ಸಮಿತಿಯಲ್ಲಿ 16-17 ಜನರು ಇರುತ್ತಾರೆ. ಅವರೆಲ್ಲರೂ ಸೇರಿ ಮಾಡಿರುವ ತೀರ್ಮಾನ ಇದು. ನನ್ನ ಅಭಿಪ್ರಾಯ ಏನಿದೆ ಅದನ್ನು ನಾನು ಸಮಿತಿ ಮುಂದೆ ಹೇಳಿದ್ದೇನೆ ಅಷ್ಟೇ. ಅವರು ಅದನ್ನು ಪರಿಶೀಲನೆ ಮಾಡಿ ಅವರ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಇಕ್ಬಾಲ… ಅಹ್ಮದ್ ಕೂಡ ಸಾಮಾನ್ಯ ಕಾರ್ಯಕರ್ತ. ಅವರಿಗೆ ಯಾವ ಮಾನದಂಡ ಇಟ್ಟುಕೊಂಡು ಟಿಕೆಟ್ ಕೊಟ್ಟಿದ್ದಾರೆ ಗೊತ್ತಿಲ್ಲ. ಷÜಫಿ ಅಹ್ಮದ್, 50 ವರ್ಷ ಪಕ್ಷ ಕಟ್ಟಿಬೆಳೆಸಿದ್ದಾರೆ. ಅವರು ಪಕ್ಷ ತೊರೆಯದಂತೆ ನಾನು ಮನವಿ ಮಾಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಎರಡು ಕಡೆ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ
ಎರಡೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಂಬಂಧ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಪರಮೇಶ್ವರ್, ನಾನು ಯಾವುದೇ ಸಂದರ್ಭದಲ್ಲೂ ಎರಡು ಕಡೆ ಸ್ಪರ್ಧಿಸುತ್ತೇನೆ ಎಂದು ಹೇಳಿಲ್ಲ. ನಾನು ಎರಡು ಕಡೆ ನಿಲ್ಲೋದೂ ಇಲ್ಲ. ನಮ್ಮ ಹೈಕಮಾಂಡ್ ಕೊರಟಗೆರೆಯಲ್ಲಿ ನನಗೆ ಟಿಕೆಟ್ ಘೋಷಿಸಿದೆ. ಕೊರಟಗೆರೆಯಲ್ಲಿ ಮಾತ್ರ ನಿಲ್ಲುತ್ತೇನೆ. ನಾನು ಎಲ್ಲೂ ಎರಡು ಕಡೆ ಟಿಕೆಟ್ ಕೇಳಿಲ್ಲ. ಎರಡು ಕಡೆ ನಿಲ್ಲುವ ಅವಶ್ಯಕತೆ ನನಗಿಲ್ಲ. ಕೊರಟಗೆರೆ ಕ್ಷೇತ್ರದ ಜನ ನನ್ನನ್ನು ಪ್ರೀತಿಯಿಂದ ಕಂಡಿದ್ದಾರೆ. ಎರಡು ಬಾರಿ ನನ್ನ ಗೆಲ್ಲಿಸಿದ್ದಾರೆ. ಹೀಗಾಗಿ ನಾನು ಯಾಕೆ ಕೊರಟಗೆರೆ ಜನರನ್ನು ಬಿಟ್ಟು ಬೇರೆ ಕಡೆ ಹೋಗಬೇಕು. ಕೊರಟಗೆರೆ ಕ್ಷೇತ್ರದ ಜನ ಈ ಚುನಾವಣೆಯಲ್ಲಿ ನನ್ನ ಪರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.