ಬಿ.ಕೆ.ಹರಿಪ್ರಸಾದ್ ವಿರುದ್ಧ ದೂರು ಸ್ವೀಕರಿಸಲು ಪೊಲೀಸರ ನಕಾರ: ಠಾಣೆ ಮುಂದೆ ಧರಣಿ ಕುಳಿತ ಪುನೀತ್ ಕೆರೆಹಳ್ಳಿ

By Girish GoudarFirst Published Jan 8, 2024, 3:00 AM IST
Highlights

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಕಾರ ಹಿನ್ನಲೆಯಲ್ಲಿ ಠಾಣೆ ಮುಂದೆಯೇ ಪುನೀತ್ ಕೆರೆಹಳ್ಳಿ ಧರಣಿ ಕೂತಿದ್ದರು. ದೂರು ಸ್ವೀಕರಿಸೋತನಕ ನಾನು ಹೋಗೋದಿಲ್ಲ. ಬಂಧನವಾದ್ರು ಪರ್ವಾಗಿಲ್ಲ ಅಂತ  ಪುನೀತ್ ಕೆರೆಹಳ್ಳಿ ಪಟ್ಟು ಹಿಡಿದಿದ್ದರು. ಬಲಿಕ ಪುನೀತ್ ಕೆರೆಹಳ್ಳಿ ಅವರ ದೂರನ್ನು ಪೊಲೀಸರು ಪಡೆದಿದ್ದಾರೆ. 

ಬೆಂಗಳೂರು(ಜ.08): ತನ್ನ ಹೆಸರು ಬಳಸಿ ನಕಲಿ ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ಹಾಗೂ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ವಿರುದ್ಧ ಪುನೀತ್ ಕೆರೆಹಳ್ಳಿ ಬಸವನಗುಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.   ನನ್ನ ಹೆಸರು ಹಾಗೂ ಮೊಬೈಲ್ ನಂಬರ್ ಬಳಸಿ ನಕಲಿ ಸಂದೇಶ ರವಾನೆ ಮಾಡಿದ್ದಾರೆ. ಇದ್ರಿಂದ ನನಗೆ ಅನ್ಯ ಕೋಮಿನಿಂದ ಕಾಲ್ ಮಾಡಿ ಬೆದರಿಕೆ ಹಾಕ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ವಿರುದ್ಧ ದೂರು ಸ್ವೀಕರಿಸಲು ಬಸವನಗುಡಿ ಪೊಲೀಸರು ನಿರಾಕರಿಸಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ. 

ದೂರು ಕೊಟ್ಟಿದೀವಿ, ಎಫ್ಐಆರ್ ಹಾಕೋಕೆ ಪೊಲೀಸರು ಮೀನಾಮೇಷ ಎಣಿಸ್ತಿದಾರೆ. ನನ್ನ ನಂಬರ್ ನ ಸ್ಕ್ರೀನ್ ಶಾಟ್ ವೊಂದನ್ನ ಬಳಸಿ ಕೋಮು ಗಲಭೆ ಸೃಷ್ಟಿಸೋಕೆ ಪುನೀತ್ ಕೆರೆಹಳ್ಳಿಯನ್ನ ಬಿಜೆಪಿ ಬಳಸ್ತಿದೆ ಅಂತಾ ಬಿ.ಕೆ. ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ. ಆ ಸ್ಕ್ರೀನ್ ಶಾಟ್ ನಕಲಿ ಇದೆ. ಅದು ಎಲ್ಲಿದೆ ಅದನ್ನ ತೋರಿಸಲಿ. ನನ್ನ ಮೊಬೈಲ್ ಪರಿಶೀಲನೆ ಮಾಡಿ, ಯಾರ ಮೊಬೈಲ್‌ನಲ್ಲಿ ಆ ಸ್ಕ್ರೀನ್ ಶಾಟ್ ತೆಗೆದ್ರಿ?, ಯಾಕೆ ಸುಳ್ಳು ಸುದ್ದಿಯನ್ನ ಹಬ್ಬಿಸ್ತಿದೀರಿ. ಗೋದ್ರಾ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ಈ ರೀತಿ ಪೋಸ್ಟ್ ಮಾಡಿದ್ದಾರೆ. ರಾಮ ಮಂದಿರಕ್ಕೆ ಹೋಗೋರು ಭಯ ಪಡ್ಬೇಕು ಅಂತಾ ಈ ತರ ಮಾಡ್ತಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಾರೆ. 

ಜನಾಂಗೀಯ ದ್ವೇಷ, ಕೋಮುಗಲಭೆಗೆ ಯತ್ನ; ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‌ಐಆರ್!

ಶ್ರೀಕಾಂತ್ ಮೇಲೆ ಹಳೇ ಕೇಸ್ ಓಪನ್ ಆಗುತ್ತೆ, ನನ್ನ ಮೇಲೆ ಆರೋಪ ಬರುತ್ತೆ, ದತ್ತಪೀಠ ಕೇಸ್ ರೀ ಓಪನ್ ಆಗುತ್ತೆ. ಇದೆಲ್ಲವನ್ನೂ ಹಿಂದೂ ಕಾರ್ಯಕರ್ತರನ್ನ ಭಯ ಪಡಿಸ್ತಿದೆ. ಕಂಪ್ಲೆಂಟ್ ಕೊಟ್ರೆ ಎಫ್ಐಆರ್ ಮಾಡ್ತಿಲ್ಲ... ಪ್ರತಿಯೊಂದಕ್ಕೂ ಕೋರ್ಟ್‌ಗೆ ಹೋಗೋಕೆ ಆಗಲ್ಲ. ಪೊಲೀಸ್ ಠಾಣೆಯಲ್ಲ ಸಾಯಿಸಿದ್ದಾರಾ..?. ಎನ್ ಸಿ ಆರ್ ಆದ್ರು ಮಾಡಿಸಿಕೊಡಿ ಅಂತಾ ಕೇಳ್ತೀನಿ. ಎಫ್ಐಆರ್ ಹಾಕೋವರೆಗೂ ನಾನು ಬಿಡಲ್ಲ. ನನ್ನನ್ನ ಭಯೋತ್ಪಾದಕ ಅಂತೀರಾ ನಾಚಿಕೆ ಆಗಲ್ವಾ..?, ಡಿಜೆ ಹಳ್ಳಿಲಿ ನಿಮ್ಮ ಅಣ್ಣ ತಮ್ಮಂದಿರು ಮಾಡಿರೋ ಕೆಲಸ, ನನ್ನನ್ನ ಯಾಕೆ ನೀವು ಮತಾಂಧ ಅಂತೀರಾ..? ಅಂತ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ. 

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಕಾರ ಹಿನ್ನಲೆಯಲ್ಲಿ ಠಾಣೆ ಮುಂದೆಯೇ ಪುನೀತ್ ಕೆರೆಹಳ್ಳಿ ಧರಣಿ ಕೂತಿದ್ದರು. ದೂರು ಸ್ವೀಕರಿಸೋತನಕ ನಾನು ಹೋಗೋದಿಲ್ಲ. ಬಂಧನವಾದ್ರು ಪರ್ವಾಗಿಲ್ಲ ಅಂತ  ಪುನೀತ್ ಕೆರೆಹಳ್ಳಿ ಪಟ್ಟು ಹಿಡಿದಿದ್ದರು. ಬಲಿಕ ಪುನೀತ್ ಕೆರೆಹಳ್ಳಿ ಅವರ ದೂರನ್ನು ಪೊಲೀಸರು ಪಡೆದಿದ್ದಾರೆ. ದೂರು ಪಡೆದು ಎನ್ ಸಿಆರ್ ದಾಖಲಿಸಿದ್ದಾರೆ ಪೊಲೀಸರು. ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ. 

click me!