' ಬರ ಪರಿಹಾರಕ್ಕೆ ಸರ್ಕಾರ ನೀಡಿದ ಹಣ ಅರೆಕಾಸಿನ ಮಜ್ಜಿಗೆಯಷ್ಟೇ'

By Kannadaprabha NewsFirst Published Nov 8, 2023, 9:35 AM IST
Highlights

: ಬರ ಪರಿಹಾರವಾಗಿ ಮೈಸೂರು ಜಿಲ್ಲೆಗೆ ರಾಜ್ಯ ಸರ್ಕಾರ ನೀಡುವ ಪರಿಹಾರ ಮೊತ್ತವು ಅರೆಕಾಸಿನ ಮಜ್ಜಿಗೆಯಂತೆ ಎಂದು ಆಮ್ಆ ದ್ಮಿಯ ಜಿಲ್ಲಾಧ್ಯಕ್ಷ ರಂಗಯ್ಯ ತಿಳಿಸಿದ್ದಾರೆ.

 ಮೈಸೂರು: ಬರ ಪರಿಹಾರವಾಗಿ ಮೈಸೂರು ಜಿಲ್ಲೆಗೆ ರಾಜ್ಯ ಸರ್ಕಾರ ನೀಡುವ ಪರಿಹಾರ ಮೊತ್ತವು ಅರೆಕಾಸಿನ ಮಜ್ಜಿಗೆಯಂತೆ ಎಂದು ಆಮ್ಆ ದ್ಮಿಯ ಜಿಲ್ಲಾಧ್ಯಕ್ಷ ರಂಗಯ್ಯ ತಿಳಿಸಿದ್ದಾರೆ.

1382 ಹಳ್ಳಿಯನ್ನು ಒಳಗೊಂಡ ಜಿಲ್ಲೆಗೆ 13.5 ಕೋಟಿ ಹಣ ಯಾವ ಮೂಲೆಗೆ? ಅರೆಕಾಸಿನ ಮಜ್ಜಿಗೆಯಂತೆ ಹಣ ಕೊಟ್ಟು, ಬರ ಪರಿಹಾರ ಎಂದು ಪತ್ರಿಕೆಗಳಲ್ಲಿ ತೋರಿಸಲಿಕ್ಕೆ ಮಾತ್ರ ಸೀಮಿತ. ಇದು ಬರ ಪರಿಹಾರ ಅಲ್ಲ, ಪರಿಹಾರಕ್ಕೆ ಬಂದ ಬರ, ಯಾವ ರೈತನ ಕಣ್ಣೀರಿಗೂ ಬೆಲೆ ಇಲ್ಲವೇ? ಮಳೆ ಇಲ್ಲದೇ, ನೀರಿಲ್ಲದೇ, ಸರಿಯಾಗಿ ವಿದ್ಯುತ್ಪೂರೈಕೆ ಇಲ್ಲದೇ ಒಣಗಿ ಹೋದ ಬೆಳೆಗೆ ಯಾರು ಜವಾಬ್ದಾರಿ ಎಂದು ಅವರು ಪ್ರಶ್ನಿಸಿದ್ದಾರೆ.

Latest Videos

ಒಂದು ಹಳ್ಳಿಗ ನೀವು ಕೊಟ್ಟ 97,684 ಮಾತ್ರ. ಒಂದು ಲಕ್ಷ ರೂಪಾಯಿ ಕೂಡ ಇಲ್ಲ. 97 ಸಾವಿರ ರೂಪಾಯಿಗಳಲ್ಲಿ ಏನು ಮಾಡಲು ಸಾಧ್ಯ. ಎಷ್ಟು ರೈತರಿಗೆ ಕೊಡುತ್ತೀರಿ? ಒಂದು ಗ್ರಾಮದಲ್ಲಿ ಕನಿಷ್ಠ 300 ರೈತ ಕುಟುಂಬಗಳಿವೆ. ಹಾಗಾದರೆ ಒಂದು ರೈತ ಕುಟುಂಬಕ್ಕೆ ಸಿಗುವ ಹಣ 325. ಜಾನುವಾರುಗಳ ಮೇವಿಗಾದರೂ ಸಾಕಾಗುತ್ತದೆ ಎಂದರೆ ಅದೂ ಸಾಲದು. ಅಂದ ಮೇಲೆ ಈ ಪರಿಹಾರ ಏಕೆ ಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಗಳಾದ ನೀವು 14 ಬಾರಿ ಬಜೆಟ್ಮಂಡಿಸಿದ್ದರೂ ಕನಿಷ್ಠ ಪರಿಹಾರವಾಗಿ ಎನ್.ಡಿಆರ್ಎಫ್ಪ್ರಕಾರ ಒಂದು ಹೆಕ್ಟೇರ್ ಗೆ 13,800 ನೀಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರೆ ರೈತರ ಮೇಲೆ ನಿಮಗೆ ಕನಿಕರ ಇಲ್ಲವೆಂದೇ ಹೇಳಬಹುದು ಎಂದು ಅವರು ಟೀಕಿಸಿದ್ದಾರೆ.

ನಿಮಗೆ ಹಣ ಹೊಂದಿಸಲು ಸಾಧ್ಯವಾಗದಿದ್ದರೆ ಅದನ್ನು ಜನರಿಗಾದರೂ ಹೇಳಿ. ಅದುಬಿಟ್ಟು ಪತ್ರಿಕೆಗೆ ಸೀಮಿತವಾಗಿ ಹೇಳಿಕೆ ಕೊಡಲು ಮಾತ್ರ ಮುಖ್ಯಮಂತ್ರಿ ಎಂದು ತಿಳಿಯಬೇಕಾಗುತ್ತದೆ. ನೀವು ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಬರ ಪರಿಹಾರಕ್ಕೆ ಒತ್ತಾಯಿಸಲಿ

ಹಾಸನ(ನ.08): ಬರ ಪರಿಹಾರ ನೀಡಿಲ್ಲವೆಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಅವರೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಂಗಳವಾರ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

ವರ್ಷ ಭೀಕರವಾದ ಬರಗಲಾವಿದೆ. ೨೧೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಆರೇಳು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಸಂಪೂರ್ಣ ಬರಗಾಲವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ತಂಡ ಕಳುಹಿಸಿತ್ತು. ನಾಲ್ಕು ತಂಡಗಳು ರಾಜ್ಯ ಪ್ರವಾಸ ಮಾಡಿ ಅಧಿಕಾರಿಗಳು, ಜನರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈಗಾಗಲೇ ತಂಡ ಭೇಟಿ ಕೊಟ್ಟು ಇಪ್ಪತ್ತು ದಿನ ಆಗುತ್ತಾ ಬಂದಿದೆ. ವರದಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವಾದರೂ ಪರಿಹಾರ ಬಿಡುಗಡೆ ಮಾಡಲಿ ಎಂದು ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ರಾಜಕೀಯಕ್ಕಾಗಿ ಬಿಜೆಪಿಯಿಂದ ಬರ ಅಧ್ಯಯನ: ಸಿಎಂ ಸಿದ್ದರಾಮಯ್ಯ

‘ರಾಜ್ಯಕ್ಕೆ ೧೭,೯೦೧ ಕೋಟಿ ರು. ಹಣ ಬಿಡುಗಡೆ ಮಾಡಲು ಕೋರಿದ್ದೇವೆ. ರಾಜ್ಯದಲ್ಲಿ ೩೩,೭೨೭ ಕೋಟಿ ರು. ನಷ್ಟವಾಗಿದೆ. ಆಗಿರುವ ಎಲ್ಲಾ ನಷ್ಟಕ್ಕೂ ಕೇಂದ್ರ ಸರ್ಕಾರ ಹಣ ಕೊಡಲಾಗುವುದಿಲ್ಲ ಎನ್ನುವುದು ನಮಗೂ ಗೊತ್ತಿದೆ. ಕೇಂದ್ರ ಸರ್ಕಾರಕ್ಕೆ ನಾಲ್ಕು ಲಕ್ಷ ಕೋಟಿ ರು. ತೆರಿಗೆ ರೂಪದಲ್ಲಿ ಕೊಡುತ್ತೇವೆ. ನಮಗೆ ಅವರು ಕೊಡುವುದು ಕೇವಲ ೫೭ ಸಾವಿರ ಕೋಟಿ ರು. ನಾವು ನಮ್ಮ ಹಣ ಕೇಳುತ್ತಿದ್ದೇವೆ. ಇದು ಎಲ್ಲಾ ಕಾಲದಲ್ಲಿಯೂ ನಡೆಯುತ್ತಾ ಬಂದಿದೆ. ಆದರೆ ಕೇಂದ್ರ ಸರ್ಕಾರದವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ರಾಜ್ಯದ ಮೂವರು ಸಚಿವರನ್ನು ಕಳುಹಿಸಿದರೂ ಯಾವ ಕೇಂದ್ರ ಮಂತ್ರಿಯೂ ಸಮಯ ಕೊಡಲಿಲ್ಲ. ಅವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದಾರೆ. ನಾವು ಏನು ಮಾಡಬೇಕು ಹೇಳಿ? ಈ ನಿರ್ಲಕ್ಷ್ಯವನ್ನು ಏನೆಂದು ವ್ಯಾಖ್ಯಾನ ಮಾಡಬೇಕು, ವಿರೋಧ ಪಕ್ಷದವರು ಜಗಳ ಮಾಡಬೇಡಿ ಅಂತಾರೆ. ಎನ್‌ಡಿಎ ಜೊತೆ ಕುಮಾರಸ್ವಾಮಿ ಸೇರಿಸಿಕೊಂಡಿದ್ದಾರಲ್ಲಾ. ಅವರೇ ಹೇಳಿ ಹಣ ಬಿಡುಗಡೆ ಮಾಡಿ ಅಂತ ಕೇಳಲಿ’ ಎಂದರು.

click me!