ದೇವಸ್ಥಾನದ ನಿಧಿ ದೋಚಿದವನಿಗೆ ಪಾಪಪ್ರಜ್ಞೆ: ಪೊಲೀಸ್ ಠಾಣೆಗೆ ಬಂದು ಶರಣಾದ ಇಳಕಲ್‌ ವ್ಯಕ್ತಿ

Published : Mar 23, 2026, 07:18 AM IST
Treasure

ಸಾರಾಂಶ

ಸೋಮಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ವರ್ಷಗಳ ಹಿಂದೆ ನಿಧಿ ದೋಚಿದ್ದ ವ್ಯಕ್ತಿಯೊಬ್ಬ, ಪಾಪಪ್ರಜ್ಞೆ ಮತ್ತು ದೇವರ ಶಾಪದ ಭಯದಿಂದ ಪೊಲೀಸರಿಗೆ ಶರಣಾಗಿದ್ದಾನೆ. ನಿಧಿ ಸಿಕ್ಕ ನಂತರ ಕುಟುಂಬದಲ್ಲಿ ಅಶಾಂತಿ, ಆರೋಗ್ಯ ಸಮಸ್ಯೆಗಳು ಎದುರಾಗಿದ್ದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಕೊಪ್ಪಳ : ಸೋಮಶಂಕರಲಿಂಗೇಶ್ವರ ದೇವಸ್ಥಾನದ ನಿಧಿ ದೋಚಿದ ವ್ಯಕ್ತಿ ಪಾಪಪ್ರಜ್ಞೆಯಿಂದ ಭಾನುವಾರ ಪೊಲೀಸರಿಗೆ ಶರಣಾದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮಾವಿನ ಇಟಗಿ ಗ್ರಾಮದಲ್ಲಿ ನಡೆದಿದೆ.

ಇಳಕಲ್ಲ ನಗರ ನಿವಾಸಿ ಮೌಲಾಸಾಬ್‌ ಖಾಸಿಮ್‌ಸಾಬ್‌ ಮುಜಾವರ (45) ಶರಣಾದವ. ಆರೋಪಿ ಪಂಕ್ಚರ್‌ ಅಂಗಡಿ ಇಟ್ಟಕೊಂಡು ಜೀವನ ನಡೆಸುತ್ತಿದ್ದಾನೆ. 2 ವರ್ಷಗಳ ಹಿಂದೆ ನಾನು ಸೇರಿದಂತೆ 4 ಜನ ದೇವಸ್ಥಾನದ ನಿಧಿ ತೆಗೆದಿದ್ದು, 100 ಬಂಗಾರದ ನಾಣ್ಯ ಹಾಗೂ ಒಂದು ಬೆಳ್ಳಿ ಕಡಗ ಸಿಕ್ಕಿದೆ. 

ನಿಧಿ ಸಿಕ್ಕ ನಂತ್ರ ಜೀವನದಲ್ಲಿ ಅನೇಕ ಸಮಸ್ಯೆಗಳು ಆರಂಭ

ನಿಧಿ ಸಿಕ್ಕ ನಂತರ ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳಾಗಿದ್ದು, ಕುಟುಂಬದಲ್ಲಿ ಅಶಾಂತಿ, ವೈಯಕ್ತಿಕ ಕಷ್ಟ, ಆರೋಗ್ಯ ಸಮಸ್ಯೆ ತಲೆದೋರಿದೆ. ಈ ಘಟನೆಯ ನಂತರ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಇದು ದೇವರ ಶಾಪ ಎಂಬ ಭಯ ಕಾಡುತ್ತಿದೆ ಎಂದು ಶರಣಾದ ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ನಡುವೆ ಆತನಿಗೆ ಜೊತೆಗಾರರು ಪಾಲು ನೀಡಿಲ್ಲ ಎಂದು ಹೇಳಿದ್ದಾನೆ.

ತಪ್ಪೊಪ್ಪಿಕೊಂಡಿರುವ ಮೌಲಾಸಾಬ್‌ ಖಾಸಿಮ್‌ಸಾಬ್‌ ಮುಜಾವರ

ಸಿಕ್ಕ ಸಿಧಿ ದೇಗುಲಕ್ಕೆ ಕೊಡೋಣ ಎಂದು ನನ್ನ ಜತೆಗಾರರನ್ನು ಮನವೊಲಿಸಲು ಪ್ರಯತ್ನಿಸಿದ್ದರೂ ಅವರು ಒಪ್ಪುತ್ತಿಲ್ಲ. ನನ್ನ ನಿಧಿ ಪಾಲನ್ನು ಅವರು ನನಗೆ ಕೊಟ್ಟಿಲ್ಲ. ಕೇಳಿದರೆ ಬೆದರಿಕೆ ಹಾಕಿ, ಹೊಡೆಯಲು ಬರುತ್ತಾರೆ ಎಂದು ದೇಗುಲದ ಕಮಿಟಿ ಹಾಗೂ ಪಿಎಸ್‌ಐ ಮುಂದೆ ಸ್ವ ಇಚ್ಛೆಯಿಂದ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಗಗನಕ್ಕೇರಿದ ಬೆಲೆ: KGFನಲ್ಲಿರೋ ಚಿನ್ನ ಮಿಶ್ರಿತ ಮಣ್ಣನ್ನು ಮೂಟೆಗಳಲ್ಲಿ ತುಂಬಿಕೊಂಡು ಹೋದ ಮಹಿಳೆಯರು

ಇದನ್ನೂ ಓದಿ: ಇಡೀ ದೇಶದ ಗಮನ ಸೆಳೆದಿದ್ದ ಲಕ್ಕುಂಡಿಯ 47 ದಿನಗಳ ಉತ್ಖನನಕ್ಕೆ ತೆರೆ; ಇಷ್ಟು ದಿನ ಸಿಕ್ಕಿದ್ದೇನು?

 

 

PREV
Read more Articles on
click me!

Recommended Stories

ಯುದ್ಧದ ಬಳಿಕ ಮಂಗಳೂರಿಗೆ ಬಂತು ಪ್ರಥಮ ಎಲ್‌ಪಿಜಿ ಹಡಗು
ಒಮ್ಮೆ ಅಖಾಡಕ್ಕಿಳಿದ್ರೆ ಆನೆ ಬಂದ್ರೂ ಹಿಂದೆ ಸರಿಯಲ್ಲ - ನನಗೆ ಕಾಂಗ್ರೆಸ್ಸೇ ಇಲ್ಲಿ ಎದುರಾಳಿ