ಪರಂ ಸಿಎಂ ಮಾಡಲು ಕೇಳಿಬಂದ ಒತ್ತಾಯ : ಯಾರಿಗೆ ಪಟ್ಟ?

By Kannadaprabha News  |  First Published May 16, 2023, 4:41 AM IST

ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವ ಸೈನ್ಯ, ಛಲವಾದಿ ಮಹಾಸಭಾ, ಡಾ.ಜಿ.ಪರಮೇಶ್ವರ್‌ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ತುಮಕೂರಿನ ಟೌನ್‌ ಹಾಲ್‌ ವೃತ್ತದಲ್ಲಿ ಸಮಾವೇಶಗೊಂಡು ಒತ್ತಾಯಿಸಿದರು.


  ತುಮಕೂರು :    ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸೋಮವಾರ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವ ಸೈನ್ಯ, ಛಲವಾದಿ ಮಹಾಸಭಾ, ಡಾ.ಜಿ.ಪರಮೇಶ್ವರ್‌ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ತುಮಕೂರಿನ ಟೌನ್‌ ಹಾಲ್‌ ವೃತ್ತದಲ್ಲಿ ಸಮಾವೇಶಗೊಂಡು ಒತ್ತಾಯಿಸಿದರು.

ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವ ಸೈನ್ಯ, ಛಲವಾದಿ ಮಹಾಸಭಾ ಹಾಗೂ ಡಾ.ಜಿ.ಪರಮೇಶ್ವರ್‌ ಅಭಿಮಾನಿಗಳು, ನಗರಪಾಲಿಕೆಯ ಮೇಯರ್‌, ಸದಸ್ಯರು, ವಿದ್ಯಾವಂತ, ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಆರ್ಹತೆಗಳಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಈ ಬಾರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಕಾಂಗ್ರೆಸ್‌ ಪಕ್ಷದಲ್ಲಿ ಸಾಮಾಜಿಕ ನ್ಯಾಯವಿದೆ ಎಂಬುದನ್ನು ಸಾಬೀತುಪಡಿಸುವಂತೆ ಆಗ್ರಹಿಸಿದರು.

Latest Videos

undefined

ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ಮಾಜಿ ನಾಯಕ ಜೆ.ಕುಮಾರ್‌, ಇಂದು ಕಾಂಗ್ರೆಸ್‌ ಪಕ್ಷ ಅತ್ಯಂತ ಬಹುಮತಗಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತಕ್ಕೆ ಬಂದಿದೆ ಎಂದರೆ, ಅದರ ಹಿಂದೆ ಡಾ.ಜಿ.ಪರಮೇಶ್ವರ್‌ ಅವರ ಶ್ರಮವಿದೆ ಎಂದರು.

ಆಶೀರ್ವಾದವೇ ಗೆಲುವಿಗೆ ಕಾರಣ

ಕೊರಟಗೆರೆ (ಮೇ.14): ನನ್ನ ಗೆಲುವಿಗೆ ಕೊರಟಗೆರೆ ಮತದಾರರ ಆಶೀರ್ವಾದ ಕಾರಣವಾಗಿದ್ದು, ವಿಶೇಷವಾಗಿ ತಾಯಂದಿರು ನನಗೆ ಹೆಚ್ಚಿನ ಮತ ನೀಡಿದ್ದಾರೆ. ಕಾರ್ಯಕರ್ತರು ಮತ್ತು ಮುಖಂಡರ ಶ್ರಮ ನನ್ನ ಗೆಲುವಿಗೆ ಮುಖ್ಯ ಕಾರಣ ಎಂದು ನೂತನ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಪಟ್ಟಣದ ರಾಜೀವ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ. ಕೊರಟಗೆರೆ ಕ್ಷೇತ್ರದ ಪ್ರತೀ ಹಳ್ಳಿಗಳಲ್ಲೂ ರಾಜ್ಯದ ಬದಲಾವಣೆಗೆ ಕೊರಟಗೆರೆ ಕ್ಷೇತ್ರದಲ್ಲೂ ಸಹ ನನಗೆ ಮತ ನೀಡುವಂತೆ ಕೇಳಿಕೊಂಡಿದ್ದೆ ಅದಕ್ಕೆ ನಮ್ಮ ಮತದಾರರು ಸ್ಪಂದಿಸಿ ಮತ ನೀಡಿದ್ದಾರೆ. ಇದೇ ವಾತಾವರಣ ತುಮಕೂರು ಜಿಲ್ಲೆ ಮತ್ತು ರಾಜ್ಯದಲ್ಲೂ ಹರಡಿ ಕಾಂಗ್ರೆಸ್‌ ಪಕ್ಷವು ಸ್ಪಷ್ಟಬಹುಮತದಲ್ಲಿ ಬಹುದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದಿದೆ.

ನಾವು ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡುತ್ತೇವೆ ಈ ಬಾರಿಯ ಕಾಂಗ್ರೆಸ್‌ ಪಕ್ಷದ ಭರವಸೆಗಳು ದೊಡ್ಡಮಟ್ಟದಲ್ಲಿದ್ದು ಅವುಗಳನ್ನು ಜನರಿಗೆ ತಲುಪಿಸಲು ಒಂದು ಅಯವ್ಯಯವನ್ನು ಮಾಡಲಾಗುವುದು, ಕೊಟ್ಟಭರವಸೆಯನ್ನು ಈಡೇರಿಸಲಾಗುವುದು. ಕಾಂಗ್ರೆಸ್‌ ಪಕ್ಷದ ಈ ಗೆಲುವು ರಾಜ್ಯದ ಮತದಾರರ ಗೆಲುವಾಗಿದೆ ಎಂದರು. ಈ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿ ದುರಾಡಳಿತದ ಬಗ್ಗೆ ಬೇಸತ್ತಿದ್ದರು. ಕಾಂಗ್ರೆಸ್‌ ಪಕ್ಷವು ಬಹುತೇಕ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷದ ಪರವಾಗಿ ನಿಂತದ್ದು ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು. ಈ ಚುನಾವಣೆಯಲ್ಲಿ ನನ್ನ ವಿರುದ್ಧ ಮಾತನಾಡಿದವರಿಗೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಇನ್ನು ಕೊರಟಗೆರೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ನನ್ನ ಗುರಿಯಾಗಿದೆ ಎಂದರು.

ಹೈಕಮಾಂಡ್‌ ನನಗೆ ಸಿಎಂ ಸ್ಥಾನ ನೀಡಿದರೆ ತಿರಸ್ಕರಿಸಲಾರೆ: ಡಾ.ಜಿ.ಪರಮೇಶ್ವರ್‌

ಮುಖ್ಯಮಂತ್ರಿ ಹೈಕಮಾಂಡ್‌ ನಿರ್ಧಾರ: ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟುಮಂದಿ ಮುಖ್ಯಮಂತ್ರಿ ಆಕಾಂಕ್ಷಿಗಳು ಮತ್ತು ಅರ್ಹತೆಯುಳ್ಳವರು ಇದ್ದಾರೆ. ಆದರೆ ಮುಖ್ಯಮಂತ್ರಿ ಆಯ್ಕೆ ಒಂದು ಮಾರ್ಗಸೂಚಿಯ ಮೇರೆ ನಡೆಯಲಿದ್ದು ಸಿ.ಎಲ್‌.ಪಿ. ಸಭೆ ಮತ್ತು ವರಿಷ್ಠರ ತೀರ್ಮಾನದ ಮೇಲೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವ ಸೈನ್ಯದ ರಾಜ್ಯಾಧ್ಯಕ್ಷ ನಗುತಾ ರಂಗನಾಥ್‌ ಮಾತನಾಡಿ, ಕರ್ನಾಟಕದಲ್ಲಿ ಇಂದು ಕಾಂಗ್ರೆಸ್‌ 135 ಸೀಟುಗಳನ್ನು ಪಡೆದಿದೆ ಎಂದರೆ ಅದಕ್ಕೆ ಡಾ.ಜಿ.ಪರಮೇಶ್ವರ್‌ ಅವರು ಸಹ ಕಾರಣರು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅತೀಕ್‌ ಅಹಮದ್‌ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಎಲ್ಲಾ ಸಮುದಾಯಗಳಿಗೂ ಬೇಕಾದ ವ್ಯಕ್ತಿ. ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಿರುವ ಡಾ.ಜಿ.ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಒತ್ತಾಯಿಸಿದರು.

ತುಮಕೂರು ಮಹಾನಗರಪಾಲಿಕೆ ಮೇಯರ್‌ ಪ್ರಭಾವತಿ ಸುಧೀಶ್ವರ್‌, ಪಾಲಿಕೆ ಸದಸ್ಯರಾದ ನಯಾಜ್‌ ಅಹಮದ್‌, ಛಲವಾದಿ ಮಹಾಸಭಾದ ರಾಜ್ಯ ನಿರ್ದೇಶಕ ನಾಗೇಶ್‌, ದಲಿತ ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ಚಂದ್ರಪ್ಪ, ದೊಡ್ಡಸಿದ್ದಯ್ಯ, ಪಿ. ಶಿವಪ್ರಸಾದ್‌, ಇರಕಸಂದ್ರ ಜಗನ್ನಾಥ್‌, ನರಸಿಂಹಮೂರ್ತಿ, ಕೊರಟಗೆರೆ ಕುಮಾರ್‌, ಎನ್‌.ಕೆ.ನಿಧಿ ಕುಮಾರ್‌, ಸಿದ್ದಲಿಂಗಯ್ಯ, ರಘು, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ರಾಜೇಶ್‌, ನಿವೃತ್ತ ಅಧಿಕಾರಿ ಶಿವಣ್ಣ, ಕೆಪಿಸಿಸಿ ವೀಕ್ಷಕರಾದ ವಿಜಯಲಕ್ಷ್ಮಿ, ನಾಗಮ್ಮ, ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್‌ ಯುವಸೈನ್ಯದ ವಸುಂಧರ, ಶ್ರೀಧರ್‌, ಓಂಕಾರ್‌ ಕೊಪ್ಪಕಲ್ಲು, ಮಂಜೇಶ್‌, ಸೈದಪ್ಪ ಡಾಂಗೆ ಇತರರು ಪಾಲ್ಗೊಂಡಿದ್ದರು.

click me!